ದರ್ಶನ್‌ ಅಭಿಮಾನಿಗಳಿಗೆ ದೊಡ್ಡ ಸುದ್ದಿ ಕೊಟ್ಟ ಧನ್ವೀರ್! !!

ದರ್ಶನ್‌ ಅಭಿಮಾನಿಗಳಿಗೆ ದೊಡ್ಡ ಸುದ್ದಿ ಕೊಟ್ಟ ಧನ್ವೀರ್! !!

 ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ನಡೆದ ದರ್ಶನ್‌ ಪ್ರಕರಣದ ನಂತರ, ಅವರ ಪರವಾಗಿ ನಿಂತಿರುವ ಏಕೈಕ ವ್ಯಕ್ತಿ ನಟ ಧನ್ವೀರ್‌ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ದರ್ಶನ್‌ ಜೈಲು ಸೇರುವ ಮುನ್ನ ಮತ್ತು ನಂತರವೂ ಅವರ ಕುಟುಂಬದ ಜೊತೆ, ಅಭಿಮಾನಿಗಳ ಜೊತೆ ಧನ್ವೀರ್‌ ನಿಂತಿದ್ದಾರೆ. ಇದರಿಂದಾಗಿ ದರ್ಶನ್‌ ಅಭಿಮಾನಿಗಳಲ್ಲಿ ಧನ್ವೀರ್‌ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವಿದೆ.

ಇಂದು ವೈರಲ್‌ ಆಗಿರುವ ಜೈಲು ವಿಡಿಯೋಸ್‌ ಧನ್ವೀರ್‌ ರಿಲೀಸ್ ಮಾಡಿರಬಹುದು ಎಂಬ ಸುದ್ದಿ ಹರಡಿದ ಬೆನ್ನಲ್ಲೇ, ಸಿಸಿಬಿ ಅಧಿಕಾರಿಗಳು ಧನ್ವೀರ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ಮುಗಿಸಿ ಹೊರ ಬಂದ ಧನ್ವೀರ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ದರ್ಶನ್‌ ಜೊತೆಗಿನ ಫೋಟೋವನ್ನು ಹಂಚಿಕೊಂಡು, "ಉಸಿರಿರೋವರೆಗೂ ಇರ್ತೀವಿ ನಿನ್ನಿಂದೆ" ಎಂಬ ಹಾಡಿನ ಸಾಲುಗಳನ್ನು ಬಳಸಿದ್ದಾರೆ. ಇದು ದರ್ಶನ್‌ ಅಭಿಮಾನಿಗಳಿಗೆ ಭಾವನಾತ್ಮಕವಾಗಿ ದೊಡ್ಡ ಸುದ್ದಿಯಾಗಿದೆ.

ದರ್ಶನ್‌ ಜೈಲು ಸೇರುವ ಮುನ್ನ ಅವರ ಜೊತೆ ಇದ್ದವರು, ನಂತರ ದೂರವಾದವರು ಎಂಬುದನ್ನು ಅಭಿಮಾನಿಗಳು ಚೆನ್ನಾಗಿ ಗಮನಿಸಿದ್ದಾರೆ. ಆದರೆ ಧನ್ವೀರ್‌ ಮಾತ್ರ ಮೊದಲಿನಿಂದಲೂ ದರ್ಶನ್‌ ಪರವಾಗಿ ನಿಂತು, ಈಗಲೂ ಅವರ ಜೊತೆಗಿದ್ದಾರೆ. ಈ ನಿಷ್ಠೆ ಮತ್ತು ಬೆಂಬಲವನ್ನು ನೋಡಿ ದರ್ಶನ್‌ ಅಭಿಮಾನಿಗಳು ಧನ್ವೀರ್‌ ಅವರನ್ನು ಮತ್ತಷ್ಟು ಮೆಚ್ಚುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಕೆಲವರು ಧನ್ವೀರ್‌ ಅವರನ್ನು ಟಾರ್ಗೆಟ್‌ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಧನ್ವೀರ್‌ ಈ ಎಲ್ಲದಕ್ಕೂ ತಲೆಕೆಡಿಸಿಕೊಳ್ಳದೆ, "ಉಸಿರಿರೋವರೆಗೂ ದರ್ಶನ್‌ ಜೊತೆ ನಿಲ್ಲುತ್ತೇನೆ" ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಅವರು ಇಂಡಸ್ಟ್ರಿಗೆ ಕಾಲಿಟ್ಟಾಗಲೇ ದರ್ಶನ್‌ ಅವರನ್ನು "ನಮ್ಮ ಗುರು" ಎಂದು ಹೇಳಿದ್ದರು. ಈಗಲೂ ಅದೇ ಪ್ರೀತಿ ಮತ್ತು ವಿಶ್ವಾಸವನ್ನು ಅವರು ದರ್ಶನ್‌ ಮೇಲೆ ಇಟ್ಟುಕೊಂಡಿದ್ದಾರೆ.

ದರ್ಶನ್‌ ಜೈಲು ಸೇರುವ ಸಂದರ್ಭದಲ್ಲಿ ಹಲವರು ಮೌನವಾಗಿದ್ದರೆ, ಧನ್ವೀರ್‌ ಮಾತ್ರ ಅವರ ಜೊತೆ ನಿಂತಿದ್ದಾರೆ. ಬೇಲ್‌ ಮೇಲೆ ಹೊರಬಂದಾಗಲೂ, ಮತ್ತೆ ಜೈಲು ಸೇರಿದಾಗಲೂ ಧನ್ವೀರ್‌ ಅವರೊಂದಿಗೆ ಇದ್ದರು. ವಿಜಯಲಕ್ಷ್ಮಿ ಅವರ ಜೊತೆಗೂ ಧನ್ವೀರ್‌ ಬೆಂಬಲವಾಗಿ ನಿಂತಿದ್ದಾರೆ. "ಅಣ್ಣ ಇಲ್ಲದಿದ್ದಾಗ ಆತ್ತಿಗೆ ಜೊತೆ ಅಣ್ಣನ ತಮ್ಮ ಇದ್ದಾರೆ" ಎಂಬ ಅಭಿಮಾನಿಗಳ ಮಾತು ಧನ್ವೀರ್‌ ಅವರ ನಿಷ್ಠೆಯನ್ನು ಪ್ರತಿಬಿಂಬಿಸುತ್ತದೆ.