ದರ್ಶನ್ ಜಾತಕದ ಪ್ರಕಾರ ಈ ಸಂಕಷ್ಟಗಳನ್ನು ಅನುಭವಿಸಿ ತಿರಲೇ ಬೇಕು! ಆ ಸಂಕಷ್ಟ ಏನು ಹಾಗೂ ಪರಿಹಾರ ಏನಿದೆ ಗೊತ್ತಾ?

ದರ್ಶನ್ ಜಾತಕದ ಪ್ರಕಾರ ಈ ಸಂಕಷ್ಟಗಳನ್ನು ಅನುಭವಿಸಿ ತಿರಲೇ ಬೇಕು! ಆ ಸಂಕಷ್ಟ ಏನು ಹಾಗೂ ಪರಿಹಾರ ಏನಿದೆ ಗೊತ್ತಾ?

ಇದೀಗ ಎಲ್ಲೆಡೆ ಹಾಟ್ ನ್ಯೂಸ್ ಆಗಿ ಸುದ್ದಿ ಮಾಡುತ್ತಿರುವ ವಿಚಾರ ಎಂದರೆ ಅದು ರೇಣುಕಾ ಸ್ವಾಮಿ ಹತ್ಯೆ ಪ್ರಕರಣ. ಇನ್ನೂ ಹತ್ಯೆ ಮಾಡಿರುವ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ ಡಿ ಬಾಸ್. ಇದೀಗ ನಡೆಯುತ್ತಿರುವ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ, ಕನ್ನಡ ನಟ ದರ್ಶನ್ ತೂಗುದೀಪ ಮತ್ತು ಇತರ ಹದಿಮೂರು ಆರೋಪಿಗಳನ್ನು ಜುಲೈ 18, 2024 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ರೇಣುಕಾ ಸ್ವಾಮಿಯ ಅಮಾನುಷ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ ದರ್ಶನ್ ಅವರನ್ನು ಜೂನ್ 11 ರಂದು ಆರಂಭದಲ್ಲಿ ಬಂಧಿಸಲಾಯಿತು. ದರ್ಶನ್ ಅವರ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಭಿಮಾನಿಯೊಬ್ಬರು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು.  

ಇದು ರೇಣುಕಾ ಅವರ ಅಭಿಮಾನಿಗಳ ಸಂಘದ ಸದಸ್ಯರನ್ನು ಒಳಗೊಂಡ ರೇಣುಕಾ ಅವರ ಹತ್ಯೆಯನ್ನು ಯೋಜಿಸಲು ದರ್ಶನ್ ಅವರನ್ನು ಪ್ರಚೋದಿಸಿತು.  ರೇಣುಕಾ ಸ್ವಾಮಿ ಅವರು ವಿದ್ಯುತ್ ಆಘಾತ ಸೇರಿದಂತೆ ತೀವ್ರ ಚಿತ್ರಹಿಂಸೆ ಅನುಭವಿಸಿದರು ಮತ್ತು ಅಂತಿಮವಾಗಿ ಅನೇಕ ಮೊಂಡಾದ ಬಲದ ಗಾಯಗಳಿಂದ ಸಾವನ್ನಪ್ಪಿದರು ಎಂದು ಶವಪರೀಕ್ಷೆ ಬಹಿರಂಗಪಡಿಸಿತು.  ಕೊಲೆ ನಡೆಸಲು ಮತ್ತು ಸಾಕ್ಷ್ಯ ನಾಶಪಡಿಸಲು ದರ್ಶನ್ ಭಾಗಿಯಾಗಿದ್ದವರಿಗೆ 30 ಲಕ್ಷ ರೂಪಾಯಿ ನೀಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆದ್ರೆ ಸಾಕ್ಷಿಗಳ ಕೊರತೆಯ ಕಾರಣ ದರ್ಶನ್  ಅವರನ್ನು ಬಂಧನದಲ್ಲಿ ಇಡುವಂತೆ ನ್ಯಾಯಾಂಗ ಅನುಮತಿ ನೀಡಿದೆ.

ಇದೀಗ ಎರಡು ವರ್ಷಗಳಿಗೊಮ್ಮೆ ಜೈಲಿನ ಮುಖ ನೋಡುತ್ತಿರುವ ದರ್ಶನ್ ಅವರ ಜಾತಕದ ಭವಿಷ್ಯ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.ಫೆಬ್ರವರಿ ತಿಂಗಳ 16ನೆ ತಾರೀಖಿನ 1977 ರಲ್ಲಿ ಪೊನ್ನಂಪೇಟೆ ದರ್ಶನ್ ಸುಮಾರು 1;30ಸಮಯದಲ್ಲಿ ಜನಿಸಿದ್ದಾರೆ. ಶ್ರಾವಣ ನಕ್ಷತ್ರ ವೃಷಭ ರಾಶಿ ಅದೇ ರೀತಿಯಾಗಿ ವೃಷಭ ಲಗ್ನದಲ್ಲಿ ಜಾಣಿಸಿದ್ದಾರೆ. ಇವರಿಗೆ 2011 ರಿಂದ 2013ರ ವರೆಗೂ ಗುರುದಶಾ ಇದ್ದ ಸಮಯದಲ್ಲಿ ಜೈಲಿಗೆ ಹೋಗಿದ್ದಾರೆ. ಇದು ಲಾಭ ತರುವ ಯೋಗಾ ಇದ್ದರೂ ಕೊಡ ದರ್ಶನ್ ಆಗಲು ಸೆರೆ ವಾಸ ಅನುಭವಿಸಿದ್ದಾರೆ. ಆದರೆ ಅದರ ಲಾಭವನ್ನು ಸಾರಥಿ ಸಿನಿಮಾ ಮೂಲಕ ಪಡೆದುಕೊಂಡರು ಎಂದು ಹೇಳಬಹುದು. 2023ರ ನವೆಂಬರ್ ನಿಂದಾ 2024ರಅಕ್ಟೋಬರ್  ವರೆಗೂ ಕುಜ ದೋಷ ಶುರುವಾಗಿರುವ ಕಾರಣ ದರ್ಶನ್ ಅವರಿಗೆ ನಾನಾ ಸಂಕಷ್ಟಗಳು ಎದುರಾಗಿದೆ ಎಂದು ಹೇಳಲಾಗುತ್ತಿದೆ.