ದರ್ಶನಗೆ ಜಾಮೀನು ಸದ್ಯದಲ್ಲಿ!! ಅಸಲಿ ಕಾರಣ ಇಲ್ಲಿದೆ ನೋಡಿ?

ದರ್ಶನಗೆ ಜಾಮೀನು ಸದ್ಯದಲ್ಲಿ!! ಅಸಲಿ ಕಾರಣ ಇಲ್ಲಿದೆ ನೋಡಿ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಜಾಮೀನು ಪಡೆಯಲು ಹೊಸ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈ ಬಾರಿ ತಮ್ಮ ತಾಯಿ ಮೀನ ತೂಗುದೀಪ ಅವರ ಅನಾರೋಗ್ಯದ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ದೀಪಾವಳಿ ಮುಗಿದ ಬೆನ್ನಲ್ಲೇ ದರ್ಶನ್ಗೆ ನರಕ ದರ್ಶನದಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ ಹೇಗಾದರೂ ಮಾಡಿ ರೇಣುಕ ಸ್ವಾಮಿ ಕೊಲೆಕೇಸ್ನಲ್ಲಿ ದರ್ಶನ್ಗೆ ಜಾಮೀನು ಕೊಡಿಸಲೇಬೇಕು ಎಂದು ಅವರ ವಕೀಲರು ಪಣ ತೊಟ್ಟಿದ್ದು ಅದಕ್ಕಾಗಿ ಇರುವ ಅವಕಾಶಗಳನ್ನೆಲ್ಲ ಬಳಸಿಕೊಳ್ಳಲು ಸಜ್ಜಾಗಿದ್ದಾರೆ

 ಈ ಬಾರಿ ದರ್ಶನ್ ತನ್ನ ತಾಯಿಯ ಆರೈಕೆ ಆಧಾರದ ಮೇಲೆ ಜಾಮೀನು ಪಡೆಯುವ ಪ್ಲಾನ್ ಮಾಡುತ್ತಿದ್ದಾರಂತೆ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದಾದ ಕಾರಣ ಜೈಲು ಸೇರಿರುವ ನಟ ದರ್ಶನ್ ಇದೀಗ ಹೊಸ ಕಾರ್ಯತಂತ್ರದೊಂದಿಗೆ ಹೊರಬರಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಜಾಮೀನು ಶರತುಗಳನ್ನು ಪಾಲಿಸದ ಕಾರಣವೇ ದರ್ಶನ್ ಮತ್ತೆ ಜೈಲು ಸೇರುವಂತಾಯಿತು ದರ್ಶನ್ ಅರ್ಜಿ ಸಲ್ಲಿಸುವ ಬಗ್ಗೆ ವಕೀಲರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ

 ಅದರೊಂದಿಗೆ ಜ್ಯೋತಿಷ್ಯದ ಮೊರೆ ಹೋಗಿದ್ದಾರೆ ಜಾಮೀನಿ ಗೆ ಅರ್ಜಿ ಸಲ್ಲಿಸುವ ವೇಳೆ ದರ್ಶನ್ ಜ್ಯೋತಿಷ್ಯ ಮತ್ತು ಸಮಯ ಫಲವನ್ನು ನಂಬುತ್ತಿದ್ದು ಯಾವ ಶುಭ ಮುಹೂರ್ತದಲ್ಲಿ ಜಾಮೀನು ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆ ಜ್ಯೋತಿಷ್ಯಗಳ  ಬಳಿ ಸಲಹೆ ಕೇಳಿದ್ದಾರೆ ಎನ್ನಲಾಗುತ್ತಿದೆ