ನನ್ನ ಮದುವೆ ಫಿಕ್ಸ್ ಆಗಿದೆ ಆದರೆ ಹುಡುಗಿ ಅನುಷಾ ಅಲ್ಲ ಎಂದ ಧರ್ಮ! ಹಾಗಿದ್ದರೆ ಹುಡುಗಿ ಯಾರು ಗೊತ್ತಾ?

ನನ್ನ ಮದುವೆ ಫಿಕ್ಸ್ ಆಗಿದೆ ಆದರೆ ಹುಡುಗಿ ಅನುಷಾ ಅಲ್ಲ ಎಂದ ಧರ್ಮ! ಹಾಗಿದ್ದರೆ ಹುಡುಗಿ ಯಾರು ಗೊತ್ತಾ?

ಧರ್ಮ ಕೀರ್ತಿರಾಜ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಾಗಿದ್ದು, ಹಿರಿಯ ನಟ ಕೀರ್ತಿರಾಜ್ ಅವರ ಪುತ್ರ.  1984ರ ಜುಲೈ 6ರಂದು ಬೆಂಗಳೂರಿನಲ್ಲಿ ಜನಿಸಿದ ಧರ್ಮ, ತಮ್ಮ ತಂದೆಯ ಪಾದಚಿಹ್ನೆಗಳನ್ನು ಅನುಸರಿಸಿ ಸಿನಿರಂಗಕ್ಕೆ ಪ್ರವೇಶಿಸಿದರು. 2008ರಲ್ಲಿ ಬಿಡುಗಡೆಯಾದ 'ನವಗ್ರಹ' ಚಿತ್ರದ ಮೂಲಕ ಧರ್ಮ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು. ಈ ಚಿತ್ರದಲ್ಲಿ ಅವರು ಶರ್ಮಿಳಾ ಮಾಂಡ್ರೆ ಅವರೊಂದಿಗೆ ಅಭಿನಯಿಸಿದ 'ಕಣ್ ಕಣ್ಣ ಸಲಿಗೆ' ಹಾಡು ಇಂದಿಗೂ ಜನಪ್ರಿಯವಾಗಿದೆ. ನಂತರ, 'ಒಲವೇ ವಿಸ್ಮಯ' (2009) ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕನಾಗಿ ಅಭಿನಯಿಸಿದರು. 

ಅವರ ಇತರ ಪ್ರಮುಖ ಚಿತ್ರಗಳಲ್ಲಿ 'ಹಣೆಬರಹ', 'ಮುಮ್ತಾಜ್', 'ಬಿಂದಾಸ್ ಗೂಗ್ಲಿ', 'ಓ ಮನಸೇ', 'ಖಡಕ್', 'ರೋನಿ' ಮುಂತಾದವು ಸೇರಿವೆ. ಇನ್ನು ಇವರು ಮಿಕ್ಕ ಸಿನಿಮಾಗಳು ಯಶಸ್ಸು ಕಾಣದೆ ಇದ್ದರೂ ಕೊಡ ಇವರ ಕ್ಯಾಟ್ ಬರಿಸ್ ಎಂಬಾ ಪಾತ್ರ ಇಂದಿಗೂ ಕೊಡ ಎಲ್ಲರೂ ನೆನಪಿಟ್ಟುಕೊಂಡಿದ್ದಾರೆ ಎಂದ್ರೆ ತಪ್ಪಾಗಲಾರದು. ಅದಾದ ಬಳಿಕ 2024ರಲ್ಲಿ, ಧರ್ಮ ಕೀರ್ತಿರಾಜ್ 'ಬಿಗ್ ಬಾಸ್ ಕನ್ನಡ ಸೀಸನ್ 11' ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ, ತಮ್ಮ ಆಟ ಮತ್ತು ಮುಗ್ಧತೆಯಿಂದ ಕನ್ನಡಿಗರ ಮನಸ್ಸು ಗೆದ್ದರು.  ಈ ಕಾರ್ಯಕ್ರಮದಲ್ಲಿ ಅವರು ಎಂಟು ವಾರಗಳನ್ನು ಪೂರೈಸಿ ಮನೆಯಿಂದ ಹೊರ ಬಂದರು.

ಧರ್ಮ ಅವರ ವೈಯಕ್ತಿಕ ಜೀವನದಲ್ಲೂ ಬೆಳವಣಿಗೆಗಳಿವೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮ ಮದುವೆ ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.  ಹುಡುಗಿಯನ್ನು ನೋಡಲಾಗಿದೆ, ಬಹುತೇಕ ಎಲ್ಲಾ ಫಿಕ್ಸ್ ಆಗಿದೆ ಎಂದು ಅವರು ತಿಳಿಸಿದ್ದಾರೆ. ಇದರ ಜೊತೆಗೆ ತನ್ನ ಹಾಗೂ ಅನುಷಾ ರೈ ಅವರ ಸ್ನೇಹವನ್ನು ಸ್ನೇಹವಾಗಿ ಉಳಿಯಲು ಬಿಡಿ ನನಗೂ ಹಾಗೂ ಅವರಿಗೂ ಪ್ರತ್ಯೇಕ ಜೀವನ ಇದೆ ಆ ಜೀವನವನ್ನು ಬದಕಲು ಬಿಡಿ ಎಂದು ಮನವಿ ಮಾಡಿದ್ದಾರೆ.ಧರ್ಮ ಕೀರ್ತಿರಾಜ್ ತಮ್ಮ ಅಭಿನಯ ಮತ್ತು ವ್ಯಕ್ತಿತ್ವದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡು ಮತ್ತೆ ಅಭಿಮಾನಿಗಳಿಗಾಗಿ ಮತ್ತೊಂದು ಸಿನಿಮಾ ನೀಡಲಿ ತಯಾರಿ ನಡೆಸುತ್ತಿದ್ದಾರೆ.