ವೇದಿಕೆ ಮೇಲೆಯೇ ರಚಿತಾ ರಾಮ್​ ಜೊತೆ ರೋಮ್ಯಾನ್ಸ್ ಮಾಡಿ ಕೆನ್ನೆ ಸವರಿದ ಡ್ರೋನ್​ ಪ್ರತಾಪ್​! ನೋಡಿ ಎಲ್ಲರೂ ಶಾಕ್ ?

ವೇದಿಕೆ ಮೇಲೆಯೇ ರಚಿತಾ ರಾಮ್​ ಜೊತೆ ರೋಮ್ಯಾನ್ಸ್ ಮಾಡಿ ಕೆನ್ನೆ ಸವರಿದ ಡ್ರೋನ್​ ಪ್ರತಾಪ್​!  ನೋಡಿ ಎಲ್ಲರೂ ಶಾಕ್ ?

ಬಿಗ್ ಬಾಸ್ ​ ಮನೆಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಪಡೆದು, ನೀವೇ ನಮ್ಮ ವಿನ್ನರ್​ ಎನ್ನುವಷ್ಟರ ಮಟ್ಟಿಗೆ ಕ್ರೇಜ್​ ಹುಟ್ಟುಹಾಕಿದರು ಪ್ರತಾಪ್​. ಕೊನೆಗೆ ರನ್ನರ್​ ಅಪ್​ ಆಗಿ ಹೊರಬಂದು, ಹಲವು ರೀತಿಯ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ. 
ಇದೀಗ ಎಲ್ಲಾ ರಿಯಾಲಿಟಿ ಷೋಗಳಲ್ಲಿ ಡ್ರೋನ್​ ಪ್ರತಾಪ್​ಗೆ ಭಾರಿ ಬೇಡಿಕೆ ಇದೆ.  ಇದೀಗ ಬ್ಯಾಚುಲರ್​ ಪಾರ್ಟಿ ಷೋನಲ್ಲಿಯೂ ಕಾಣಿಸಿಕೊಂಡಿದ್ದಾರೆ.   ಇದರಲ್ಲಿ ರವಿಚಂದ್ರನ್​ ಅವರ ರಾಮಾಚಾರಿ ಸಿನಿಮಾದ ರೀಕ್ರಿಯೇಟ್​ ಮಾಡಲಾಗಿತ್ತು. ಆಗ ರವಿಚಂದ್ರನ್‌ ಅವರ ಗೆಟಪ್‌ನಲ್ಲಿ ಪ್ರತಾಪ್‌  ಮದುಮಗನಾಗಿ,  ಮಾಲಾಶ್ರೀ ಅವರ ಗೆಟಪ್‌ನಲ್ಲಿ ಗಗನಾ ವಧುವಿನಂತೆ ಬಂದಿದ್ದರು.  ಸಿನಿಮಾದಲ್ಲಿ ರವಿಚಂದ್ರನ್‌ ಪೆದ್ದನಂತೆ ಮಾಲಾಶ್ರೀ ಕೊರಳಿಗೆ ತಾಳಿ ಕಟ್ಟಿದಂತೆಯೇ, ಪ್ರತಾಪ್‌ ಕೂಡ ಪೆದ್ದನಂತೆಯೇ ನಟಿಸಿ ಗಗನಾ ಕೊರಳಿಗೆ ತಾಳಿ ಕಟ್ಟಿದರು. ಆ್ಯಕ್ಟಿಂಗ್​ನಲ್ಲಿ ಡ್ರೋನ್​ ಪ್ರತಾಪ್​ ಪಳಗಿರುವ ಕಾರಣ, ಅದೇ ಪೆದ್ದನಂತೆಯೇ ಚೆನ್ನಾಗಿ ನಟಿಸುತ್ತಲೇ ತಾಳಿ ಕಟ್ಟಿದರು. 

ಇದಾದ ಬಳಿಕ, ರಚಿತಾ ರಾಮ್​ ಅವರ ಕೆನ್ನೆಯನ್ನೂ ಸವರಿದರು. ಹಾಗೆಂದು ಡ್ರೋನ್​ ಪ್ರತಾಪ್​ ಸುಖಾಸುಮ್ಮನೇ ಹೋಗಿ ಕೆನ್ನೆ ಸವರಿದ್ದಲ್ಲ. ಬದಲಿಗೆ, ಅಲ್ಲಿ ಇದ್ದ ರಚಿತಾ ರಾಮ್​ ಜೊತೆ ಹಾಡೊಂದಕ್ಕೆ ಸ್ಟೆಪ್​ ಹಾಕುವ ಮೂಲಕ ಡ್ರೋನ್​ ಪ್ರತಾಪ್​ ಕೆನ್ನೆ ಸವರಿ ಪ್ರೀತಿಸಿದ್ದಾರೆ. ರಚಿತಾ ರಾಮ್​ ನಾಚಿಕೊಂಡಿದ್ದಾರೆ. ಇದರ ವಿಡಿಯೋ ವೈರಲ್​ ಆಗುತ್ತಿದೆ. ರಚಿತಾ ರಾಮ್​ ಬಳಿ ಹೋಗುವಷ್ಟು, ಅವರ ಕೆನ್ನೆ ಸವರುವಷ್ಟು ಅವಕಾಶ ಡ್ರೋನ್​ಗೆ ಸಿಕ್ಕಿತಲ್ಲಾ ಎಂದು ರಚಿತಾ ರಾಮ್​  ಫ್ಯಾನ್ಸ್​ ಹೊಟ್ಟೆ ಉರಿದುಕೊಂಡರೆ, ಮತ್ತೆ ಕೆಲವರು ಕಣ್​ ಕಣ್​ ಬಿಟ್ಟಿದ್ದಾರೆ. ಎಲ್ಲಿಯೋ ಇರಬೇಕಿದ್ದ ಡ್ರೋನ್ ಪ್ರತಾಪ್​, ಇನ್ನೆಲ್ಲೋ ಹೋದ ಬಿಡಪ್ಪಾ... ಅದಕ್ಕೇ ಹೇಳೋದು... ಎಂದೆಲ್ಲಾ ಒಂದಿಷ್ಟು ಗಾದೆ ಮಾತುಗಳನ್ನೂ ಕಮೆಂಟ್​ಗಳಲ್ಲಿ ಹಾಕ್ತಿದ್ದಾರೆ ನೆಟ್ಟಿಗರು.