ಲಿಪ್‌ಲಾಕ್‌'ಗೆ ಒಪ್ಪಿ ಕೊಂಡರೆ ಮಾತ್ರ ಚಾನ್ಸ್ ! ಕರಾಳ ಸತ್ಯ ಬಿಚ್ಚಿಟ್ಟ ಕನ್ನಡ ಖ್ಯಾತ ನಟಿ !!

ಲಿಪ್‌ಲಾಕ್‌'ಗೆ ಒಪ್ಪಿ ಕೊಂಡರೆ ಮಾತ್ರ ಚಾನ್ಸ್ ! ಕರಾಳ ಸತ್ಯ ಬಿಚ್ಚಿಟ್ಟ ಕನ್ನಡ ಖ್ಯಾತ ನಟಿ !!

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ನೀನಾದೆ ನಾ - ಪ್ರೀತಿಯ ಹೊಸ ಅಧ್ಯಾಯ' ಮುಕ್ತಾಯಗೊಂಡಿದೆ. ವೇದಾ ಎಂಬ ಪವರ್ಫುಲ್ ಪಾತ್ರ ನಿರ್ವಹಿಸಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದ, ಜನಪ್ರಿಯ ನಾಯಕಿಯಾಗಿ ಗುರುತಿಸಿಕೊಂಡಿದ್ದ ನಟಿ ಖುಷಿ ಶಿವು ಮಾತ್ರ ಇದುವರೆಗೂ ಯಾವುದೇ ಸಿನಿಮಾಗಳಲ್ಲಿ ಏಕೆ ನಟಿಸಿಲ್ಲ ಎಂಬ ಅಭಿಮಾನಿಗಳ ಪ್ರಶ್ನೆಗೆ ನಟಿ ಈಗ ಉತ್ತರಿಸಿದ್ದು ತಮಗಾದ ರಿಜೆಕ್ಷನ್‌ಗಳ ಬಗ್ಗೆ  ಕಣ್ಣೀರಿಟ್ಟಿದ್ದಾರೆ. 


ಸಿನಿಮಾಗಳಲ್ಲಿ ನಟಿಯರ ಆಯ್ಕೆಯ ಬಗ್ಗೆ ಓಪನ್ ಆಗಿ ಮಾತನಾಡಿರುವ ನಟಿ ಖುಷಿ ಶಿವು, "ಪ್ರತಿಭೆ ಇರುವವರಿಗಿಂತ  ಜೀರೋ ಸೈಜ್ ಇದ್ದು ನೋಡಲು ಸುಂದರವಾಗಿದ್ರೆ ಮಾತ್ರ ಅವಕಾಶಗಳನ್ನು ಕೊಡುತ್ತಾರೆ ಇಲ್ಲವಾದರೆ. ನಮ್ಮ ಇನ್ಸೆಕ್ಯುರಿಟಿಗಳ ಬಗ್ಗೆ ಕಾಮೆಂಟ್‌ ಮಾಡಿ ನಮ್ಮನ್ನ ಅಣಕಿಸುತ್ತಾರೆ".  ಸಿನಿಮಾಗಳ ಅಫರ್‌ ಬಂದ್ರೂ ಸಹ ಲಿಪ್‌ಲಾಕ್‌ ಸೀನ್‌ ಇದೆ ಎನ್ನುತ್ತಾರೆ. ಅದಕ್ಕೆ ಒಪ್ಪಿದರೆ ಚಾನ್ಸ್ ಸಿಗುತ್ತೆ ಎಂದು  ಬೇಸರ ವ್ಯಕ್ತಪಡಿಸಿದ್ದಾರೆ. 


ನಮ್ಮ ಸಿನಿಮಾ ಇಂಡಸ್ಟ್ರೀಯಲ್ಲಿ ನಟಿಯರಿಗೆ ಅವಕಾಶ ಕೊಡುತ್ತಿಲ್ಲ. ಟ್ಯಾಲೆಂಟ್‌ ಇರುವವರನ್ನು ನೀವು ಉಳಿಸಿಕೊಳ್ಳುತ್ತಿಲ್ಲ. ನಾವು ಇನ್ನೇನು ಮಾಡಬೇಕು? ನಮಗೂ ಕನಸುಗಳಿವೆ. ಯಾಕೆ ಜೀರೋ ಫಿಗರ್‌ಗಳೇ ಇರಬೇಕು ಅಂತೀರಾ? ʻನೀನಾದೇ ನಾʼ ಮಾಡುವಾಗ ಒಂದಷ್ಟು ಸಿನಿಮಾಗಳ ಆಫರ್‌ಗಳು ಬಂತು. ನಾನು ಕೇಳಿದ ಎಲ್ಲಾ ಸಿನಿಮಾಗಳಲ್ಲಿಯೂ ಲಿಪ್‌ ಲಾಕ್‌ ಸೀನ್ಸ್‌ ಇದೆ. ನಮ್ಮ ಕನ್ನಡದಲ್ಲಿ ಮಾಲಾಶ್ರೀ ಮೇಡಂ ಹಾಗೂ ಸೌಂದರ್ಯ ಮೇಡಂ, ನಾನು ಇಂತಹ ನಟಿಯರನ್ನು ಫಾಲೋ ಮಾಡುವ ಹುಡುಗಿ. ಅವರೆಲ್ಲಾ ಎಂತಹ ಪಾತ್ರಗಳನ್ನು ಮಾಡಿದ್ರು? ಮತ್ತು ಹೇಗೆ ಹೆಸರು ಮಾಡಿದ್ರು? ಎಂದು ಖುಷಿ ಶಿವು ಪ್ರಶ್ನಿಸಿದ್ದಾರೆ.

ಸೀರಿಯಲ್‌ಗಳಲ್ಲಿ ನಟಿಸುವ ಸಂದರ್ಭದಲ್ಲಿ ಬೇಡದಿರುವ ರೂಮರ್ಸ್ ಹಬ್ಬಿಸುವ ಬಗ್ಗೆಯೂ ಮುಕ್ತವಾಗಿ ಮಾತನಾಡಿರುವ ನಟಿ ಖುಷಿ ಶಿವು,ಮುಖ ಅಲರ್ಜಿಯಾಗಿರುವುದನ್ನ ಹೇಳಿದ್ರೆ ಸೀರಿಯಲ್‌ನಲ್ಲಿ ಫೇಸ್‌ ಅಲರ್ಜಿ ಅಂತ ತೋರಿಸುತ್ತೇವೆ ಬನ್ನಿ ಅಂತ ಡೈರೆಕ್ಟರ್‌ ಹಾಗೂ ಪ್ರೊಡ್ಯೂಸರ್‌ ಹೇಳಿದ್ರು. ನಮ್ಮ ಅಮ್ಮ ಅವರ ಮಾತುಗಳನ್ನ ಕೇಳಿ ಸಿಟ್ಟಾಗಿ ಮಾತನಾಡಿದ್ದಕ್ಕೆ ದುರಹಂಕಾರ ಎಂದು ಹಣೆ ಪಟ್ಟಿ ಕಟ್ಟುತ್ತಾರೆ. ಇವೆಲ್ಲ ಒಂದೆರಡು  ಕಾರಣಗಳಷ್ಟೇ ನಾನು ತೆರೆಯ ಮೇಲೆ ಎಷ್ಟು ಜನರ ಪ್ರೀತಿ ಗಳಿಸಿದ್ದಿನೋ... ತೆರೆಯ ಹಿಂದೆ ಅಷ್ಟೇ ಅವಮಾನ ಕಷ್ಟಗಳನ್ನು ಎದುರಿಸಿದ್ದೇನೆ ಎಂದು ಸಿನಿಮಾ ಜಗತ್ತಿನ ಕರಾಳತೆಯನ್ನು ನೆನೆದು ನಟಿ ಕಣ್ಣೀರಿಟ್ಟಿದಾರೆ.