ಅತಿಥಿಗಳ ಗೂಂಡಾವರ್ತನೆ ಖಂಡಿಸಿದ ಗಿಲ್ಲಿ !! ರೊಚ್ಚಿಗೆದ್ದ ಮಂಜ ಮತ್ತು ರಜತ್ ?

ಅತಿಥಿಗಳ ಗೂಂಡಾವರ್ತನೆ ಖಂಡಿಸಿದ ಗಿಲ್ಲಿ !! ರೊಚ್ಚಿಗೆದ್ದ ಮಂಜ ಮತ್ತು ರಜತ್ ?

ಬಿಗ್ ಬಾಸ್ ಮನೆಯಲ್ಲಿ ಅತಿಥಿಗಳು ಅತಿಯಾಗಿ ಆಡುತ್ತಿರುವುದನ್ನು ಎಲ್ಲರೂ ಗಮನಿಸಿದ್ದೀರಿ. ನೆನ್ನೆ ನಡೆದ ರೋಸ್ಟಿಂಗ್ ಕಾರ್ಯಕ್ರಮದಲ್ಲಿ ಗಿಲ್ಲಿ ಸಕತ್ ರೋಸ್ಟ್ ಮಾಡಿದರೂ, ಮಂಜಣ್ಣ ಮತ್ತು ರಜತ್ ಅವರಿಗೆ ಸ್ವಲ್ಪ ಬೇಸರವಾಯಿತು. ಆ ಸಂದರ್ಭದಲ್ಲಿ ಬಿಗ್ ಬಾಸ್ ಮಧ್ಯೆ ಬಂದು ಪರಿಸ್ಥಿತಿಯನ್ನು ಸರಿಪಡಿಸಿದರು. ಆದರೆ ಮಂಜಣ್ಣ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡಂತೆ ಕಾಣಿಸುತ್ತಿತ್ತು.

ಯಾವ ಅತಿಥಿಯಾದರೂ ಮನೆಯಲ್ಲಿ ಬಂದಿದ್ದರೆ, ಅವನನ್ನು ಅತಿಥಿ ಎಂದು ಗೌರವಿಸಬೇಕು. ಆದರೆ ಮಂಜಣ್ಣ ಮಾಡಿದ ವರ್ತನೆ ಅತಿಯಾಗಿ ಕಂಡಿತು. ಚೈತ್ರ ಕೂಡ ಸ್ವಾರಿ ಕೇಳಬೇಕೆಂದು ಹೇಳಿದರೂ, "ನನಗೆ ಬುದ್ಧಿ ಇಲ್ಲ" ಎಂದು ಹೇಳಬೇಕೆಂದು ಒತ್ತಾಯಿಸಿದರು. ಇಂತಹ ವರ್ತನೆ ಅತಿಥಿಗಳಿಗೆ ತಕ್ಕದ್ದು ಅಲ್ಲ.

ಗಿಲ್ಲಿ ಮಾಡಿದದ್ದು 100% ಸರಿಯೇ ಆಗಿತ್ತು. ಆದರೆ ಮನೆಯವರು ಅವನಿಗೆ ಸಪೋರ್ಟ್ ಮಾಡದೆ ಇದ್ದದ್ದು ಅವನಿಗೆ ನೋವು ತಂದಿತು. ಮಂಜಣ್ಣ ಟೀ ಚೆಲ್ಲುವುದು, ಪೇಪರ್‌ಗಳನ್ನು ನೆಲಕ್ಕೆ ಎಸೆಯುವುದು, ನೀರು ಚೆಲ್ಲುವುದು, ಚೇರ್‌ಗಳನ್ನು ಎಸೆಯುವುದು – ಇವೆಲ್ಲ ಬಿಗ್ ಬಾಸ್ ಮನೆಯಲ್ಲಿ ನಡೆಯಬಾರದ ವರ್ತನೆಗಳು. ಬಿಗ್ ಬಾಸ್ ಮನೆ ಯಾರದ್ದೂ ಅಲ್ಲ, ಅದನ್ನು ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ. ( video credit :NYN ALL IN ONE )

ಮನೆಗೆ ಅತಿಥಿ ಬಂದರೆ ಅವನನ್ನು ದೇವರಂತೆ ಕಾಣಬೇಕು. ಆದರೆ ಇಲ್ಲಿ ಮೋಕ್ಷಿತ ಮತ್ತು ತ್ರಿವಿಕ್ರಮ ಮಾತ್ರ ಸೈಲೆಂಟ್ ಆಗಿ ಅತಿಥಿಯಂತೆ ವರ್ತಿಸುತ್ತಿದ್ದರು. ಊಟದ ವಿಚಾರ ಬಂದಾಗ ಮಂಜಣ್ಣ ಗಿಲ್ಲಿಗೆ ಟಾಂಗ್ ಕೊಡುತ್ತಿದ್ದ. ಎಲ್ಲರಿಗೂ ಊಟ ಬಡಿಸಿ, ತಟ್ಟೆ ತೊಳೆಯಬೇಕು, ಎಲ್ಲರೂ ಊಟ ಮಾಡಿದ ನಂತರ ಮಾತ್ರ ಅವನು ಊಟ ಮಾಡಬೇಕು ಎಂದು ಒತ್ತಾಯಿಸುತ್ತಿದ್ದ.

ಗಿಲ್ಲಿ ಇದಕ್ಕೆ ತಲೆ ಕೆಡಿಸಿಕೊಳ್ಳದೆ, ಬಿಗ್ ಬಾಸ್ ಹೇಳಿದಂತೆ ನಡೆದುಕೊಂಡರೂ, ಊಟದ ವಿಚಾರದಲ್ಲಿ ಅವನು ವೈಯಕ್ತಿಕವಾಗಿ ತಗೊಂಡಿದ್ದರಿಂದ ಮಂಜಣ್ಣನಿಗೆ ಟಾಂಗ್ ಕೊಡುತ್ತಿದ್ದ. ಇದರಿಂದ ಮಂಜಣ್ಣ ಇನ್ನಷ್ಟು ಉರಿಯುತ್ತಿದ್ದ. ಪ್ರೋಮೋದಲ್ಲೂ ಗಿಲ್ಲಿ ಅವನ ಮುಂದೆ ಊಟ ಮಾಡುವುದರಿಂದ ಮಂಜಣ್ಣ ಕೋಪಗೊಂಡಿದ್ದಾನೆ.

ನಾನು 100% ಗಿಲ್ಲಿ ಪರ ನಿಂತಿದ್ದೇನೆ. ಮಂಜಣ್ಣ "ಉಗ್ರ ಮಂಚ" ಎಂಬ ಹೆಸರನ್ನು ಈಗಾಗಲೇ "ಮಲೇರಿಯಾ ಮಂಜ" ಎಂದು ಗಿಲ್ಲಿ ಬದಲಾಯಿಸಿದ್ದಾನೆ. ಆದರೆ ಅವನು ಆಡುತ್ತಿರುವ ಆಟ ಕಚಡವಾಗಿದೆ. ತನ್ನ ಹೆಸರನ್ನು ಉಳಿಸಿಕೊಳ್ಳಬೇಕಾದರೆ ಇಂತಹ ವರ್ತನೆ ತಪ್ಪಿಸಿಕೊಳ್ಳಬೇಕು.

ಅಶ್ವಿನಿ ತೆಗೆದುಕೊಂಡ ಸ್ಟ್ಯಾಂಡ್ 100% ಸರಿಯೇ ಆಗಿತ್ತು. ಕಾವ್ಯ ಕೂಡ ತಪ್ಪು ಮಾಡಿದ್ದಳು. ಊಟದ ವಿಚಾರವಾಗಲಿ, ರೋಸ್ಟಿಂಗ್ ವಿಚಾರವಾಗಲಿ – ಗಿಲ್ಲಿ ಮಾಡಿದದ್ದು 100% ಸರಿಯೇ ಆಗಿತ್ತು.

 ನನ್ನ ಅಭಿಪ್ರಾಯದಲ್ಲಿ, ಗಿಲ್ಲಿ ತಪ್ಪೇನೂ ಮಾಡಿಲ್ಲ. ಮಂಜಣ್ಣ ಮಾಡಿದ ವರ್ತನೆ ಮಾತ್ರ ಅತಿಯಾಗಿ ಕಂಡಿತು.