ಆಸ್ಪತ್ರೆಗೆ ದಾಖಲಾದ ಗೀತಾ ಶಿವರಾಜ್ ಕುಮಾರ್‌: ಏನಾಗಿದೆ ನೋಡಿ ?

ಆಸ್ಪತ್ರೆಗೆ ದಾಖಲಾದ ಗೀತಾ ಶಿವರಾಜ್ ಕುಮಾರ್‌: ಏನಾಗಿದೆ ನೋಡಿ ?

ಕೆಲ ಕಾಲದಿಂದ ಗೀತಾ ಶಿವರಾಜ್ ಕುಮಾರ್ ಕತ್ತಿನ ನೋವಿನಿಂದ ಬಳಲುತ್ತಿದ್ದರು. ನರದ ಸಮಸ್ಯೆಯಿಂದಾಗಿ ಕತ್ತಿನ ಭಾಗದಲ್ಲಿ ಗೀತಾ ಶಿವರಾಜ್ ಕುಮಾರ್‌ಗೆ ನೋವು ಕಾಣಿಸಿಕೊಂಡಿತ್ತು. ಹಾಗ್ನೋಡಿದ್ರೆ, ಈ ಹಿಂದೆಯೇ ಗೀತಾ ಶಿವರಾಜ್ ಕುಮಾರ್‌ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಗೀತಾ ಶಿವರಾಜ್ ಕುಮಾರ್ ಅವರು ಕತ್ತಿನ ಭಾಗದಲ್ಲಿ ಸರ್ಜರಿ ಮಾಡಿಸಿಕೊಂಡಿದ್ದಾರೆ ಅಂತ ಆಪ್ತ ವಲಯದವರು ಮಾಹಿತಿ ನೀಡಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗೀತಾ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಗೀತಾ ಶಿವರಾಜ್ ಕುಮಾರ್‌ಗೆ ವೈದ್ಯರು ಕತ್ತಿನ ಭಾಗದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬ್ಲಾಡರ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಿವರಾಜ್ ಕುಮಾರ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಮೆರಿಕದ ಆಸ್ಪತ್ರೆಯಲ್ಲಿ ಶಿವರಾಜ್ ಕುಮಾರ್‌ಗೆ ಸರ್ಜರಿ ಮಾಡಲಾಯಿತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲಿ ಶಿವಣ್ಣ ಗೆದ್ದಿದ್ದಾರೆ.

ಶಿವರಾಜ್ ಕುಮಾರ್ ಇದೀಗ ಚೇತರಿಕೆಯ ಹಾದಿಯಲ್ಲಿದ್ದಾರೆ. ವಿಶ್ರಾಂತಿಯ ಜೊತೆ ಜೊತೆಗೆ ವರ್ಕ್‌ ಕಮಿಟ್‌ಮೆಂಟ್‌ಗಳ ಕಡೆಗೂ ಗಮನ ಹರಿಸುತ್ತಿದ್ದಾರೆ. ಮತ್ತೆ ಬಣ್ಣ ಹಚ್ಚಿ ಶೂಟಿಂಗ್‌ ಸೆಟ್‌ಗೂ ಶಿವಣ್ಣ ಮರಳಿದ್ದಾರೆ. ಹೀಗಿರುವಾಗಲೇ, ಗೀತಾ ಶಿವರಾಜ್ ಕುಮಾರ್‌ ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಆದಷ್ಟು ಬೇಗ ಗೀತಾ ಶಿವರಾಜ್ ಕುಮಾರ್‌ ಚೇತರಿಸಿಕೊಳ್ಳಲಿ ಅಂತ ಅಭಿಮಾನಿಗಳು ಹಾರೈಸಿದ್ದಾರೆ.