ಗಿಲ್ಲಿ ಬಡವ ಅಲ್ಲ ಆ ಭ್ರಮೆ ಬೇಡ ಎಂಬ ಅಶ್ವಿನಿ ಮಾತಿಗೆ !! ಗಿಲ್ಲಿ ಕೊಟ್ಟ ಖಡಕ್ ಉತ್ತರ ಇಲ್ಲಿದೆ ನೋಡಿ ?

ಗಿಲ್ಲಿ ಬಡವ ಅಲ್ಲ ಆ ಭ್ರಮೆ ಬೇಡ ಎಂಬ ಅಶ್ವಿನಿ ಮಾತಿಗೆ   !! ಗಿಲ್ಲಿ ಕೊಟ್ಟ ಖಡಕ್ ಉತ್ತರ ಇಲ್ಲಿದೆ ನೋಡಿ ?

ರ್, ಈಗ ಕಲೆಗೆ ಬಡತನ–ಶ್ರೀಮಂತಿಕೆ ಅನ್ನುವಂತದ್ದು ಇದೆಯಾ ಇಲ್ಲ ಅಂತ ಒಂದು ರೀತಿಯ ಚರ್ಚೆ ಶುರುವಾಗುತ್ತಿದೆ. ಸೋ ಗಿಲ್ಲಿ ಅವರು ಬಡವರಲ್ಲ, ಬಡವರಂತೆ ವೇಷ ತೊಟ್ಟಿದ್ದಾರೆ ಅನ್ನುವ ಅಶ್ವಿನಿ ಅವರ ಹೇಳಿಕೆ ಬಗ್ಗೆ ನಿಮಗೆ ಏನು ಅನಿಸುತ್ತದೆ? ಈ ಜನದ ಅಭಿಮಾನವನ್ನು ನೋಡಿದಾಗ, ಇದನ್ನೆಲ್ಲ ನೀವು ಹೇಗೆ ತೆಗೆದುಕೊಳ್ಳುತ್ತೀರಿ?

ಅವರು ಏನು ಹೇಳಿದ್ರು ಅಂತ ನಾನು ನೋಡಿಲ್ಲ. ಆದರೆ, ನಾನು ಯಾವತ್ತೂ ನನ್ನನ್ನು ಬಡವ ಅಂತ ಹೇಳಿಕೊಂಡಿಲ್ಲ, ಮೇಡಂ ಕೂಡ ಹೀಗೆ ಹೇಳಿಲ್ಲ. ನಾನು ಬನೀನು  ಹಾಕಿಕೊಂಡಿದ್ದರಿಂದ ಬಡವ ಅಂತ ಹೇಳುವುದು ಸರಿಯಲ್ಲ. ಶ್ರೀಮಂತರು ಕೂಡ ಬನೀನು  ಹಾಕುತ್ತಾರೆ, ನೈಟ್ ಪ್ಯಾಂಟ್ ಹಾಕುತ್ತಾರೆ, ಚಡ್ಡಿ ಹಾಕುತ್ತಾರೆ. ಅದನ್ನೇ ನೋಡಿಕೊಂಡು ಬಡತನ–ಶ್ರೀಮಂತಿಕೆ ಅಂದರೆ ತಪ್ಪು. ಮೇಡಂ ಅವರು ಮಾತಿನ  ಬರಹದಲ್ಲಿ ಏನಾದರೂ ಹೇಳಿರಬಹುದು.

ಜಾತಿನ್ ಪ್ರೀತ್ಸೋರು  ಅವರು ರಾಜಕಾರಣಿ ಆಗ್ತಾರೆ, ಜನನ್ ಪ್ರೀತ್ಸೋರು   ಅವರು ರಾಜಕುಮಾರ್ ಆಗ್ತಾರೆ ಅನ್ನುವ ಒಂದು ಡೈಲಾಗ್ ಗಿಲ್ಲಿ ಅವರ ಕ್ರೇಜ್‌ನ್ನು ಬೇರೆ ರೀತಿಯಲ್ಲಿ ಕ್ರಿಯೇಟ್ ಮಾಡಿತ್ತು. ಇವತ್ತು ಅಭಿಮಾನ ಕಾಣಿಸುತ್ತಿರುವುದನ್ನು ನೋಡಿದಾಗ, ನನ್ನ ಮೊದಲ ಪ್ರತಿಕ್ರಿಯೆ ಊರಿಂದ ಹೋದ ಕನಸು ಇಲ್ಲಿಗೆ ಬಂದು ನಿಂತಿದೆ ಅನ್ನುವಂತಿದೆ.

ಹೌದು ಅಣ್ಣ, ಎಂಟು–ಒಂಬತ್ತು ವರ್ಷಗಳ ಹಿಂದೆ ಊರಿಂದ ಬಂದಾಗ, ಆ ಡೈಲಾಗ್ ಹೇಳಬೇಕಾದ್ರು. ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಹೇಳಿದ ಆ ಡೈಲಾಗ್ ನನ್ನ ಜೀವನದಲ್ಲಿ ನಿಜವಾಗಿಯೂ ನಿಜ ಆಯ್ತು. ಆ ಮಾತು ಹಾಡಿದ ಮಾತಲ್ಲ, ನಿಜವಾದ ಮಾತು. ಆ ಸಮಯದಲ್ಲಿ ನನಗೆ ಅಷ್ಟು ಅನಿಸಿರಲಿಲ್ಲ, ಆದರೆ ಈಗ ಖುಷಿ ಆಗುತ್ತಿದೆ.