ಒಂದು ರಾತ್ರಿ ನನಗೆ ನೀವು ಬೇಕು.. ಎಷ್ಟು ದುಡ್ಡಾದ್ರೂ ಸರಿ !!ಎಂದ ಕಾಮುಕನಿಗೆ ಮುಟ್ಟಿ ಕೊಳ್ಳುವ ಹಾಗೆ ಉತ್ತರ ನೀಡಿದ ಖ್ಯಾತ ನಟಿ !!
ಮರಾಠಿ ನಟಿ ಟಿ. ಗಿರಿಜಾ ಓಕ್ ಇತ್ತೀಚೆಗೆ ‘ನ್ಯಾಷನಲ್ ಕ್ರಶ್’ ಎಂಬ ಬಿರುದನ್ನು ಪಡೆದ ನಂತರ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದರು. ಖ್ಯಾತಿಯೊಂದಿಗೆ ಬಂದ ಮೆಚ್ಚುಗೆಗಳು ಅವರಿಗೆ ಸಂತೋಷ ತಂದರೂ, ಮತ್ತೊಂದೆಡೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಕೃತ ಸಂದೇಶಗಳು ಮತ್ತು ಮಾರ್ಫಿಂಗ್‌ನಿಂದ ಅವರು ತೀವ್ರವಾಗಿ ಬೇಸರಗೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಗಿರಿಜಾ ತಮ್ಮ ಅಸಮಾಧಾನವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದರು. “ಪ್ರಸಿದ್ಧಿಯಾದ ನಂತರ ನನ್ನ ಫೋಟೋಗಳನ್ನು AI ಬಳಸಿ ಮಾರ್ಫ್ ಮಾಡಲಾಗಿದೆ. ಕೆಲವು ವೀಡಿಯೊಗಳಲ್ಲಿ ನಾನು ವಿಚಿತ್ರವಾದ ಕೆಲಸಗಳನ್ನು ಮಾಡುತ್ತಿರುವಂತೆ ತೋರಿಸಲಾಗಿದೆ. ಕೆಲವು ಚಿತ್ರಗಳಲ್ಲಿ ನನ್ನ ಬಟ್ಟೆಗಳೇ ಕಾಣೆಯಾಗಿವೆ. ವೈರಲ್ ಸುದ್ದಿಗಳು ಮತ್ತು ವಿಚಿತ್ರ ಕಾಮೆಂಟ್‌ಗಳನ್ನು ನನ್ನ ಕುಟುಂಬ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನಾನು ಕೂಡ ಅದನ್ನು ತಮಾಷೆಯಾಗಿ ನೋಡುತ್ತಿದ್ದೆ. ಆದರೆ, ಕೆಲವು ಡಿಎಮ್‌ಗಳಲ್ಲಿ ಬಂದ ಸಂದೇಶಗಳು ನನಗೆ ಆಘಾತ ತಂದವು. ‘ನಿಮಗಾಗಿ ಏನು ಬೇಕಾದರೂ ಮಾಡುತ್ತೇನೆ, ಒಂದು ರಾತ್ರಿ ನನಗೆ ನೀವು ಬೇಕು, ಎಷ್ಟು ದುಡ್ಡಾದರೂ ಕೊಡುತ್ತೇನೆ’ ಎಂಬಂತಹ ಅಸಭ್ಯ ಸಂದೇಶಗಳು ನಿರಂತರವಾಗಿ ಬರುತ್ತಿವೆ,” ಎಂದು ಅವರು ಹೇಳಿದರು.
ಈ ವರ್ಚುವಲ್ ಜಗತ್ತಿನ ವಿಚಿತ್ರ ನಡವಳಿಕೆಯನ್ನು ಉಲ್ಲೇಖಿಸುತ್ತಾ ಗಿರಿಜಾ ತಮ್ಮ ಬಲವಾದ ಅಭಿಪ್ರಾಯವನ್ನು ಹಂಚಿಕೊಂಡರು. “ಸಂದೇಶ ಕಳುಹಿಸುವ ಜನರು ನಿಜ ಜೀವನದಲ್ಲಿ ನನ್ನತ್ತ ನೋಡುವುದಿಲ್ಲ. ನನ್ನ ಮುಂದೆ ಬಂದು ಈ ರೀತಿ ಮಾತನಾಡಿದರೆ ಏನಾಗುತ್ತದೆ ಎಂಬುದು ಅವರಿಗೆ ಗೊತ್ತು. ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯ ಕಾಮೆಂಟ್ ಮಾಡುವ ಅದೇ ಜನರು ನಿಜ ಜೀವನದಲ್ಲಿ ಪ್ರೀತಿ ಮತ್ತು ಗೌರವದಿಂದ ವರ್ತಿಸುತ್ತಾರೆ,” ಎಂದು ಅವರು ಹೇಳಿದರು.
ಮಾರ್ಫಿಂಗ್ ಕುರಿತು ಮಾತನಾಡುವಾಗ ಗಿರಿಜಾ ಸ್ಪಷ್ಟಪಡಿಸಿದರು: “ಪರದೆಯ ಮೇಲೆ ನಿಕಟ ದೃಶ್ಯ ಮಾಡುವುದಕ್ಕೂ ನನ್ನ ಫೋಟೋಗಳನ್ನು ಮಾರ್ಫ್ ಮಾಡುವುದಕ್ಕೂ ವ್ಯತ್ಯಾಸವಿದೆ. ನನ್ನ ಅನುಮತಿಯಿಲ್ಲದೆ ಮಾಡಲಾಗುತ್ತಿರುವ ಯಾವುದೇ ಕೆಲಸವೂ ತಪ್ಪು.” ಈ ಮೂಲಕ ಅವರು ಸಾಮಾಜಿಕ ಮಾಧ್ಯಮದ ಕರಾಳ ಮುಖವನ್ನು ಬಹಿರಂಗಪಡಿಸಿದರು. ಅನೇಕ ನಟಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಮೂಲಕ ಗಿರಿಜಾ ಓಕ್ ತಮ್ಮ ಧ್ವನಿಯನ್ನು ಬಲವಾಗಿ ವ್ಯಕ್ತಪಡಿಸಿದ್ದಾರೆ.




