ಗುರೂಜಿ ಹನುಮಂತನಿಗೆ ರಾಜ ಯೋಗ ಅಂತ ಭವಿಷ್ಯ ಹೇಳಿದ್ದಾರೆ ;ಒಲಿಯುತ್ತಾ ಬಿಗ್ ಬಾಸ್ ಕಪ್?

ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಇನ್ನು ಕೆಲವೇ ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಅನ್ನೋ ಲೆಕ್ಕಾಚಾರಗಳು ಕೂಡ ಜೋರಾಗಿ ನಡೀತಾ ಇದೆ ಜೋರಾಗಿ ಹನುಮಂತು ಅವರ ಹೆಸರೇ ಕೇಳಿ ಬರ್ತಾ ಇದೆ ಹನುಮಂತು ಅವರೇ ವಿನ್ನರ್ ಆಗ್ಬೇಕು ಅವರೊಬ್ಬ ಪ್ರಾಮಾಣಿಕ ಆಟಗಾರ ಅಂತ ಸಾಕಷ್ಟು ಜನ ಹಾರೈಸ್ತಾ ಇದ್ದಾರೆ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಅವರನ್ನ ಭಾರಿ ಪ್ರಮಾಣದಲ್ಲಿ ಬೆಂಬಲಿಸಲಾಗ್ತಾ ಇದೆ ಸಾಕಷ್ಟು ಜನ ಅವರಿಗೆ ಬೆಂಬಲವನ್ನು ಕೊಡ್ತಾ ಇದ್ದಾರೆ ಬಡವರ ಮನೆಯ ಹುಡುಗ ಎತ್ತರಕ್ಕೆ ಏರಬೇಕು ಅವರು ವಿನ್ನರ್ ಆಗ್ಬೇಕು ಅಂತ ಶುಭವನ್ನ ಹಾರೈಸ್ತಾ ಇದ್ದಾರೆ ಇದರ ಮಧ್ಯೆ ಇದೀಗ ಅವರ ರಾಜಯೋಗದ ಬಗ್ಗೆ ಬಿಗ್ ಬಾಸ್ ಮನೆಗೆ ಎಂಟ್ರಿ
ಕೊಟ್ಟಂತಹ ಜ್ಯೋತಿಷಿಗಳು ಮಾತನಾಡಿದ್ದು ಸದ್ಯಕ್ಕೆ ಅವರ ಅಭಿಮಾನಿಗಳು ಈ ಬಾರಿ ಬಿಗ್ ಬಾಸ್ ವಿನ್ನರ್ ಹನುಮಂತ್ ಅವರು ಹಾಗೆ ಆಗ್ತಾರೆ ಅನ್ನೋ ನಂಬಿಕೆಯನ್ನ ಹುಟ್ಟುಹಾಕಿದೆ ನೆನ್ನೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಮನೆಯೊಳಗೆ ಕಲರ್ಸ್ ಕನ್ನಡ ವಾಹಿನಿಯ ಮಹರ್ಷಿ ದರ್ಶನ ಕಾರ್ಯಕ್ರಮದ ಜ್ಯೋತಿಷಿ ವಿದ್ಯಾಶಂಕರಾನಂದ ಸರಸ್ವತಿ ಅವರು ಆಗಮಿಸುತ್ತಾರೆ ಈ ಸಂದರ್ಭದಲ್ಲಿ ಅವರು ಪ್ರತಿ ಸ್ಪರ್ಧೆಯ ಜಾತಕದ ಆಧಾರದ ಮೇಲೆ ಅವರ ಭವಿಷ್ಯವನ್ನ ಹೇಳ್ತಾರೆ ಅದರಂತೆ ಹನುಮಂತು ಅವರ ಜಾತಕವನ್ನ ತೋರಿಸಿದಾಗ ಮೊದಲಿಗೆ ಗುರೂಜಿ ಏನು ನಿನ್ನ ಸಮಸ್ಯೆ ಅಥವಾ ಏನು ಕೇಳೋದಕ್ಕೆ ಇಷ್ಟ ಪಡ್ತಿಯ ಅಂತ ಕೇಳಿದಾಗ ಹನುಮಂತ್ ಅವರು ಏನಿಲ್ಲರಿ ಅಂತ ತಮ್ಮದೇ ಸ್ಟೈಲ್ ಅಲ್ಲಿ ಹೇಳ್ತಾರೆ ಹಾಗಾದ್ರೆ ನೀನು ಸುಮ್ನೆ
ಬಂದ್ಯಾ ಬಿಗ್ ಬಾಸ್ ಮನೆಗೆ ಅಂತ ಗುರೂಜಿ ಮರು ಪ್ರಶ್ನೆಯನ್ನ ಹಾಕ್ತಾರೆ ಅದಕ್ಕೆ ಹನುಮಂತು ಏನಿಲ್ಲರಿ ನಾನು ಆರಾಮ ಇದ್ದೀನಿ ಮುಂದೆ ಆರಾಮ ಇದ್ರೆ ಸಾಕು ಅಪ್ಪ ಅಮ್ಮನ ನೋಡ್ಕೊಂಡು ಚೆನ್ನಾಗಿದ್ರೆ ಸಾಕು ಅನ್ನೋ ಮಾತನ್ನ ಹೇಳ್ತಾರೆ ನೋಡ್ಕೊಳ್ತಿಯ ಚೆನ್ನಾಗಿ ಅಷ್ಟು ಒಳ್ಳೆ ಬುದ್ದಿ ಇದೆಯಾ ಅಂತ ಗುರೂಜಿ ಮರು ಪ್ರಶ್ನೆಯನ್ನ ಹಾಕಿದಾಗ ನೋಡ್ಕೊಳ್ತೀನಿ ಅನ್ನೋ ಉತ್ತರವನ್ನ ಹನುಮಂತು ಕೊಡ್ತಾರೆ ಇಲ್ಲಿಂದ ಹೋಗಿ ಮದುವೆ ಆಗ್ತೀನಿ ಅಂತ ಒಂದು ಕಳ್ಳ ನಗೆಯನ್ನ ಬೀರ್ತಾರೆ ಹನುಮಂತು ಬಳಿಕ ಅವರ ಜಾತಕದ ಆಧಾರದ ಮೇಲೆ ಗುರೂಜಿ ಒಂದಷ್ಟು ವಿಚಾರಗಳನ್ನ ಹೇಳ್ತಾರೆ ನಿನ್ನ ಜಾತಕದ ಪ್ರಕಾರ 2026 ಮಾರ್ಚ್ ವರೆಗೂ ನಿನಗೆ ತುಂಬಾನೇ ಒಳ್ಳೆಯ ಯೋಗ ಇದೆ ರಾಜಯೋಗ ಇದೆ ಸದ್ಯಕ್ಕೆ ನಿನಗೆ ಒಳ್ಳೆಯ
ಟೈಮ್ ನಡೀತಾ ಇದೆ ಸರಿಯಾಗಿ ಉಪಯೋಗಿಸಿಕೊಂಡರೆ ನಿನಗೆ ಒಳ್ಳೆಯದೇ ಆಗುತ್ತೆ ಹೀಗಂತ ಅಂತ ಗುರೂಜಿ ಹೇಳ್ತಾರೆ ಈ ಮಾತನ್ನ ಕೇಳಿಸಿಕೊಂಡಿರುವಂತಹ ವೀಕ್ಷಕರು ಹಾಗಾದ್ರೆ ಈ ಬಾರಿ ಬಿಗ್ ಬಾಸ್ ವಿನ್ನರ್ ಹನುಮಂತು ಆಗೋದು ಪಕ್ಕಾನಾ ಅಂತ ಲೆಕ್ಕಾಚಾರ ಹಾಕ್ತಾ ಇದ್ದಾರೆ ಸದ್ಯಕ್ಕೆ ನಿನ್ನ ಭವಿಷ್ಯದಲ್ಲಿ ರಾಜಯೋಗ ಇದೆ ನಿನಗೆ ನೀನು ಹುಟ್ಟಿದ್ದೆಲ್ಲವೂ ಚಿನ್ನ ಅನ್ನೋ ರೀತಿಯ ಟೈಮ್ ಇದೆ ಹಾಗಾಗಿ ನಿನಗೆ ಒಳ್ಳೆಯದಾಗುತ್ತೆ ಇಲ್ಲಿಂದ ಹೋದ ಬಳಿಕ ಕೂಡ ನಿನಗೆ ಒಳ್ಳೆಯದೇ ಆಗುತ್ತೆ ಆದ್ರೆ ನೀನು ಯಾವ ರೀತಿ ಆ ಒಂದು ಯೋಗವನ್ನ ಬಳಸಿಕೊಳ್ಳುತ್ತಿ ಅನ್ನೋದು ಮುಖ್ಯ ಆಗುತ್ತೆ ನೀನು ಬಳಕೆ ಯಾವ ರೀತಿ ಮಾಡ್ಕೊಳ್ತಿಯೋ ಅದರ ಮೇಲೆ ನಿನ್ನ ಭವಿಷ್ಯ ಒಳ್ಳೆಯದಾಗುತ್ತೆ ಅನ್ನೋ ಮಾತನ್ನ ಗುರೂಜಿ ಹೇಳ್ತಾರೆ
ಇದೀಗ ಗುರೂಜಿ ಹೇಳಿದ ಮಾತನ್ನು ಕೇಳಿದ ಬಳಿಕ ಅಂತೂ ಬಿಗ್ ಬಾಸ್ ವೀಕ್ಷಕರು ಅದರಲ್ಲೂ ಕೂಡ ಅಭಿಮಾನಿಗಳು ಯಾರಿದ್ದಾರೆ ಹನುಮಂತು ಅವರ ಇವರೇ ವಿನ್ನರ್ ಆಗೋದು ಫಿಕ್ಸ್ ಅನ್ನೋ ಮಾತನ್ನ ಹೇಳ್ತಿದ್ದಾರೆ ಇದೆಲ್ಲ ನೋಡ್ತಾ ಇದ್ರೆ ಹಾಗಾದ್ರೆ ಈ ಬಾರಿಯ ಬಿಗ್ ಬಾಸ್ ಕಪ್ ಹನುಮಂತು ಅವರ ಮೂಡಿಗೇರುತ್ತಾ ಅನ್ನೋ ಕುತೂಹಲ ಹೆಚ್ಚಾಗಿದೆ ಇನ್ನು ಕೆಲವೇನು ದಿನಗಳಲ್ಲಿ ಅದಕ್ಕೆ ಉತ್ತರ ಸಿಗುತ್ತೆ ಸ್ವಾಮೀಜಿ ಹೇಳಿದ್ದು ನಿಜ ಆಗುತ್ತಾ ಅವರ ಜಾತಕದಲ್ಲಿ ಇರುವಂತೆ ಅವರಿಗೆ ರಾಜಯೋಗ ಏನು ನಡೀತಾ ಇದೆ ಅಂತ ಗುರೂಜಿ ಹೇಳಿದ್ದಾರೆ ಅದೆಲ್ಲವೂ ಕೂಡ ನಿಜ ಆಗುತ್ತಾ ಅನ್ನೋದಕ್ಕೆ ನಾಲ್ಕೇ ನಾಲ್ಕು ದಿನದಲ್ಲಿ ಉತ್ತರ ಸಿಗುತ್ತೆ
( video credit :Yen gotta ? )