ಹರಿಪ್ರಿಯಾ - ಮುದ್ದಾದ ಮಗುವಿಗೆ ಜನ್ಮ ನೀಡಿದಾರೆ | ಯಾವ ಮಗು ನೋಡಿ

ಹರಿಪ್ರಿಯಾ - ಮುದ್ದಾದ ಮಗುವಿಗೆ ಜನ್ಮ ನೀಡಿದಾರೆ | ಯಾವ ಮಗು ನೋಡಿ

ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ  ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇನ್ನೂ 2023ರಲ್ಲಿ ವಸಿಷ್ಠ ಸಿಂಹ  ಜೊತೆ ನಟಿ ಹಸೆಮಣೆ ಏರಿದ್ದರು. ಹಲವು ವರ್ಷಗಳ ಪ್ರೀತಿಗೆ ನಟಿ ಮದುವೆಯ ಮುದ್ರೆ ಒತ್ತಿದ್ದರು.

ಹೌದು,  2023ರ ಜನವರಿ 26ರಂದು ಹರಿಪ್ರಿಯಾ, ವಸಿಷ್ಠ ಸಿಂಹ ಅವರು ಮೈಸೂರಿನಲ್ಲಿ ಮದುವೆಯಾಗಿದ್ದರು. ಈಗ ಇದೇ ದಿನ ಹರಿಪ್ರಿಯಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇಂದು  ನಟಿ ಹರಿಪ್ರಿಯಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ವಸಿಷ್ಠ ಸಿಂಹ- ಹರಿಪ್ರಿಯಾ ಬಾಳಲ್ಲಿ ಈಗ ಪುತ್ರನ ಆಗಮನವಾಗಿದೆ.


ಹರಿಪ್ರಿಯಾ, ವಸಿಷ್ಠ ಸಿಂಹ ಅವರು ವರ್ಷಗಳ ಕಾಲ ಪ್ರೀತಿಸಿದ್ದರು. ಇನ್ನು ದುಬೈನಲ್ಲಿ ಇವರಿಬ್ಬರು ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದ ವಿಡಿಯೋ, ಡ್ಯಾನ್ಸ್‌ ಮಾಡುತ್ತಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಈ ಬಗ್ಗೆ ಗಾಸಿಪ್‌ ಹರಡಿದಾಗ ಈ ಜೋಡಿ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆ ನಂತರ ಇವರಿಬ್ಬರು ಮನೆಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡು, ನಾವಿಬ್ಬರು ಮದುವೆ ಆಗುತ್ತಿರೋದು ಪಕ್ಕಾ ಎಂದು ತಿಳಿಸಿತ್ತು. ಆಮೇಲೆ ಈ ಜೋಡಿ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆಯಾಗಿತ್ತು. ಈ ಮದುವೆಗೆ ಸ್ಯಾಂಡಲ್‌ವುಡ್‌ ಗಣ್ಯರು, ಎರಡು ಕುಟುಂಬಸ್ಥರು ಆಗಮಿಸಿದ್ದರು.