ಡಿಕೆಡಿ ಶೋನಲ್ಲಿ ಅನುಶ್ರೀ ಜೊತೆ ಸಕ್ಕತ್ ಸ್ಟೆಪ್ ಹಾಕಿದ್ದ ಜಗ್ಗು ದಾದಾ

ಹೌದು ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಶೋಗೆ ಕರ್ನಾಟಕದ ಕ್ರಶ್ ಲಾಯರ್ ಜಗದೀಶ್ ಬಂದಿದ್ದಾರೆ. ಬರ್ತಲೇ ಸಖತ್ ಸ್ಟೆಪ್ಸ್ ಇಟ್ಟಿದ್ದಾರೆ. ಮಾತ್ರವಲ್ಲ ಶಿವಣ್ಣ ಅವರನ್ನುಹೊಗಳಿದ್ದಾರೆ. ಹಾಗೇ ರಕ್ಷಿತಾ ಅವರನ್ನು ನೋಡಿ ಈ ದಿನ ಶಾರುಖ್ ಆಗಿದ್ದಿನಿ ನಾನು ಎಂದು ಹೇಳಿದ್ದಾರೆ.
ಇದೀಗ ಅವರಿಗೆ ಬಿಗ್ಬಾಸ್ನಿಂದ ಬಂದ ಮೇಲೆ ಸಹಜವಾಗಿ ಡಿಮ್ಯಾಂಡ್ ಹೆಚ್ಚಾಗಿದೆ. ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಗೆ ಅವರು ಆಗಮಿಸಿದ್ದಾರೆ. ಬಿಗ್ಬಾಸ್ನಿಂದ ಬರುವ ಸ್ಪರ್ಧಿಗಳಿಗೆ ಸಾಮಾನ್ಯವಾಗಿ ಎಲ್ಲಾ ರಿಯಾಲಿಟಿ ಷೋಗಳಲ್ಲಿ ಅವಕಾಶ ನೀಡುವುದು ಹಿಂದಿನಿಂದಲೂ ನಡೆದು ಬಂದಿದೆ. ಅದೇ ರೀತಿ ಡಿಕೆಡಿಯಲ್ಲಿ ಜಗದೀಶ್ ಅವರು ಡಾನ್ಸ್ ಮಾಡಿದ್ದಾರೆ. ಇದೇ ವೇಳೆ ತೀರ್ಪುಗಾರರಾಗಿರುವ ನಟಿ ರಕ್ಷಿತಾ ಅವರನ್ನು ನೋಡಿ, ಏನೋ ಹೇಳೋಕೆ ಬಂದೆ. ರಕ್ಷಿತಾ ಅವರನ್ನು ನೋಡಿ ಎಲ್ಲಾ ಮರೆತು ಹೋಗಿ ಬಿಟ್ಟೆ ಎಂದಿದ್ದಾರೆ. ಅದಕ್ಕೆ ರಕ್ಷಿತಾ ಅವರು ನಾಚಿಕೊಂಡಿದ್ದಾರೆ. ಬಳಿಕ ರಕ್ಷಿತಾ ನೀವು ನಾಟಿ ಆ್ಯಟ್ ಫಾರ್ಟಿ (naughty at forty) ಸರ್ ಎಂದು ತಮಾಷೆ ಮಾಡಿದ್ದಾರೆ.
ಬಿಗ್ ಬಾಸ್ ಸಿಸನ್ 11ರ ಸ್ಪರ್ಧಿಯಾಗಿದ್ದ ಲಾಯರ್ ಜಗದೀಶ್ ಮನೆಯೊಳಗೆ ಮಾತ್ರ ಅಲ್ಲ ಹೊರಗಡೆಯೂ ಸಖತ್ ಮಿಂಚುತ್ತಿದ್ದಾರೆ. ಹೊರಗಡೆ ಬಂದ ಬಳಿಕ ಫ್ಯಾನ್ಸ್ ಜತೆಗೆ ಸಮಯ ಕಳೆದಿದ್ದಾರೆ. ಮಾತ್ರವಲ್ಲ ಇದೀಗ ಸಖತ್ ಸ್ಟೆಪ್ಸ್ ಬೇರೆ ಇಟ್ಟಿದ್ದಾರೆ.
ಇದೇ ವೇಳೆ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆ ಮೇಲೆ ಸಕತ್ ಸ್ಟೆಪ್ ಹಾಕಿದ್ದಾರೆ ಜಗ್ಗು ದಾದಾ. ಜೊತೆಗೆ ಒಂದಿಷ್ಟು ಡೈಲಾಗ್ಗಳನ್ನು ಹೊಡೆದಿದ್ದಾರೆ. ಅದೇ ಇನ್ನೊಂದೆಡೆ ಜಗದೀಶ್ ಅವರನ್ನು ವಾಪಸ್ ಬಿಗ್ಬಾಸ್ಗೆ ಕರೆಸಿಕೊಳ್ಳಬೇಕು ಎನ್ನುವ ಮಾತು ಕೇಳಿಬರುತ್ತಿದೆ. ( video credit : Kannada suddi samachara)