ನಟ ಚಿಕ್ಕಣ್ಣಗೆ ಕಡೆಗೂ ಕೂಡಿ ಬಂತು ಕಂಕಣ ಭಾಗ್ಯ! ಹುಡುಗಿ ಯಾರು ನೋಡಿ ?

ನಟ ಚಿಕ್ಕಣ್ಣಗೆ  ಕಡೆಗೂ ಕೂಡಿ ಬಂತು ಕಂಕಣ ಭಾಗ್ಯ! ಹುಡುಗಿ  ಯಾರು ನೋಡಿ ?

ಚಿಕ್ಕಣ್ಣ ಅವರು ತಮ್ಮ ಹಾಸ್ಯನಟನೆಯಿಂದ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ. ಇಲ್ಲಿವೆ ಅವರ ಸಾಧನೆಗಳ ಕೆಲವು ಮುಖ್ಯಾಂಶಗಳು:

ಚಿತ್ರರಂಗ ಪ್ರವೇಶ: ಕಿರಾತಕ (2011) ಚಿತ್ರದ ಮೂಲಕ ಚಿಕ್ಕಣ್ಣ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ರಾಜ ಹುಲಿ (2013) ಮತ್ತು ಅಧ್ಯಕ್ಷ (2014) ಚಿತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು.

ಪ್ರಶಸ್ತಿ ಗೋಷ್ಠಿಗಳು: ರಾಜ ಹುಲಿ ಮತ್ತು ಅಧ್ಯಕ್ಷ ಚಿತ್ರಗಳಿಗೆ ಅತ್ಯುತ್ತಮ ಹಾಸ್ಯನಟನಾಗಿ SIIMA ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕೋಟಿಗೊಬ್ಬ 2 ಸಿನಿಮಾಕ್ಕೆ IIFA ಉತ್ಸವ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ಫೇಮಸ್‌ ಹಾಸ್ಯ ನಟ ಚಿಕ್ಕಣ್ಣ ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಮೈಸೂರಿನ ಹುಡುಗಿಯನ್ನ ಕನ್ನಡದ ಫೇಮಸ್‌ ಹಾಸ್ಯ ನಟ ಚಿಕ್ಕಣ್ಣ ವರಿಸಲಿದ್ದಾರೆ ಎಂಬ ಸುದ್ದಿ ಸಿನಿರಂಗದಲ್ಲಿ ಹರಿದಾಡುತ್ತಿದೆ. ನಿನ್ನೆ ಹೆಣ್ಣು ನೋಡಲು ಹೋಗಿದ್ದರು ನಟ ಚಿಕ್ಕಣ್ಣ ಕಟುಂಬಸ್ಥರು ಹೋಗಿದ್ದರು ಎಂಬ ಮಾಹಿತಿ ಸಿಕ್ಕಿದೆ.   ಚಿಕ್ಕಣ್ಣ ಮದುವೆ ಆಗೋ ಹುಡುಗಿ ಸಿನಿಮಾ ಕ್ಷೇತ್ರದವರಲ್ಲ ಎಂಬ ಅಪ್‌ಡೇಟ್‌ ದೊರೆತಿದೆ. ಹಾಗಾದ್ರೆ ಚಿಕ್ಕಣ್ಣ ಮದುವೆ ಆಗೋ ಆ ಹುಡುಗಿ ಯಾರು ಅನ್ನೋ ಚರ್ಚೆ ಕೂಡ ಶುರುವಾಗಿದೆ.
ಚಿಕ್ಕಣ್ಣ ನಟನೆಯ “ಉಪಾಧ್ಯಕ್ಷ“ ಸಿನಿಮಾ ಸೂಪರ್ ಹಿಟ್ ಆಯ್ತು. . ನಾಯಕನಾದ ಮೊದಲ ಸಿನಿಮಾದಲ್ಲೇ ಯಶಸ್ಸು ಸಿಕ್ಕ ಖುಷಿಯಲ್ಲಿ ಚಿಕ್ಕಣ್ಣ ”ಲಕ್ಷ್ಮೀಪುತ್ರ“ನಾಗಲು ಭರ್ಜರಿ ತಯಾರಿ ಮಾಡಿಕೊಂಡು ಇದೇ  ಸೋಮವಾರ ಅಂದ್ರೆ ಮಾರ್ಚ್ 10ರಂದು ಶೂಟಿಂಗ್ ಶುರು ಮಾಡುತ್ತಿದ್ದಾರೆ. ಜೀ ಕನ್ನಡ ನ್ಯೂಸ್ ಗೆ ಮಾಹಿತಿ ಕೊಟ್ಟ ಚಿಕ್ಕಣ್ಣ ಮೇಲುಕೋಟೆಯಲ್ಲಿ ಮೊದಲ ಶೆಡ್ಯೂಲ್ ಶೂಟಿಂಗ್ ಆಗುತ್ತಿದೆ ಅಂದ್ರು. 

“ಲಕ್ಷ್ಮೀಪುತ್ರ” ಅದ್ಬುತ ಕಥೆ ಹೊಂದಿದ್ದು ಈ ಸಿನಿಮಾ ಮೂಲಕ ಮನೆಮಾತಾಗುವ ಕಾನ್ಫಿಡೆನ್ಸ್ ಹೊಂದಿದ್ದಾರೆ ನಟ ಚಿಕ್ಕಣ್ಣ. ಕನ್ನಡದ ಎಲ್ಲಾ ಸ್ಟಾರ್ ಗಳ ಜೊತೆ ತೆರೆಹಂಚಿಕೊಂಡಿರೋ ಚಿಕ್ಕಣ್ಣ ಪ್ರೇಕ್ಷಕಪ್ರಭುಗಳ ನಾಡಿಮಿಡಿತ ಅರಿತುಕೊಡಿದ್ದಾರೆ. ಈ ವರ್ಷವೇ ಶೂಟಿಂಗ್ ಪೂರ್ಣಗೊಳಿಸಿ ತೆರೆ ಮೇಲೆ ಬಂದೇ ಬರುತ್ತೀವಿ ಅನ್ನೋ ವಿಚಾರವನ್ನ ಜೀ ಕನ್ನಡ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. 

ಇದು ನಮಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದ ಮಾಹಿತಿ ಆದರಿಸಿ  ಹೇಳಲಾಗಿದೆ  ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ