ಬ್ರಹ್ಮಗಂಟು ಧಾರವಾಹಿ ಮೂಲಕ ಖ್ಯಾತಿ ಪಡೆದಿದ್ದ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!!

ಬ್ರಹ್ಮಗಂಟು ಧಾರವಾಹಿಯ ಮೂಲಕ ಕನ್ನಡ ತೆರೆ ಮೇಲೆ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಶೋಭಿತಾ ಶಿವಣ್ಣ, ದುರಂತವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಜನಿಸಿದ ಈ ಪ್ರತಿಭಾವಂತ ನಟಿ, ಹೈದರಾಬಾದಿನಲ್ಲಿ ತಮ್ಮ ಜೀವನ ಅಂತ್ಯಗೊಳಿಸಿರುವ ಮಾಹಿತಿಯು ಕೇಳಿಬಂದಿದೆ.
ಶೋಭಿತಾ ಶಿವಣ್ಣ, ತಮ್ಮ ಕಲಾವಿದ ಜೀವನದಲ್ಲಿ ಮಿಂಚುತಿದ್ದಕಾಲದಲ್ಲಿಯೇ, ಈ ಘಟನೆ ಅವರ ಅಭಿಮಾನಿಗಳಿಗೆ ಹಾಗೂ ಕನ್ನಡ ಚಿತ್ರರಂಗಕ್ಕೆ ಅತಿಯಾದ ಹಾನಿಯಾಗಿದೆ. ಅವರ ಅದ್ಭುತ ಅಭಿನಯ ಹಾಗೂ ಕಠಿಣ ಶ್ರಮದ ಮೂಲಕ ಶೋಭಿತಾ, ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಬ್ರಹ್ಮಗಂಟು, ನಿನ್ನಿಂದಲೇ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಶೋಭಿತಾ ಎರಡೊಂದ್ಲಾ ಮೂರು.., ಎಟಿಎಮ್ , ಒಂದ್ ಕಥೆ ಹೇಳ್ಲಾ ಸಿನಿಮಾದಲ್ಲಿ ಕೂಡ ನಟಿಸಿದ್ದರು.
ಈ ಆತ್ಮಹತ್ಯೆಯ ಹಿನ್ನಲೆಯಲ್ಲಿ ಕಾರಣಗಳ ಬಗ್ಗೆ ಇನ್ನೂ ಸ್ಪಷ್ಟತೆಯಾಗಿಲ್ಲ, ಆದರೆ ಅವರ ಹಠಾತ್ ನಿರ್ಧಾರದ ಬಗ್ಗೆ ಹಲವು ಶಂಕೆಗಳು ಮತ್ತು ಪ್ರಶ್ನೆಗಳು ಹೊರಹೊಮ್ಮಿವೆ. ಈ ಘಟನೆ ಕನ್ನಡದ ಕಲಾವಿದರ ಸಮುದಾಯದಲ್ಲಿ ಆಘಾತವನ್ನು ಸೃಷ್ಟಿಸಿದೆ.
ಶೋಭಿತಾ ಶಿವಣ್ಣ ಅವರ ಅಗಲಿಕೆಯ ಸುದ್ದಿ ಕೇಳಿದ ತಕ್ಷಣವೇ, ಅಭಿಮಾನಿಗಳು ಮತ್ತು ಸಂಗಾತಿ ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ದುಃಖಭರಿತ ಸಂದೇಶಗಳನ್ನು ಹಂಚಿದ್ದಾರೆ. ಅವರ ನಟನೆಯ ಶಕ್ತಿ ಮತ್ತು ಕೀರ್ತಿಯನ್ನು ನೆನೆದು, ಅವರ ಜೀವಿತದ ಚಿನ್ನದ ಕ್ಷಣಗಳನ್ನು ಸ್ಮರಿಸುತ್ತಿದ್ದಾರೆ.