ಮೂರನೇ ಮದುವೆಯಾದ ನಟಿಗೆ ಶಾಕ್! ಗಂಡನ ಹಿನ್ನೆಲೆ ಬಹಿರಂಗ

Updated: Tuesday, June 30, 2020, 09:02 [IST]

ಮೂರನೇ ಮದುವೆಯಾದ ನಟಿಗೆ ಶಾಕ್! ಗಂಡನ ಹಿನ್ನೆಲೆ ಬಹಿರಂಗ
ಮೊನ್ನೆ ಮೂರನೇ ಮದುವೆ ಆದ 40 ರ ನಟಿ ವನಿತಾ ವಿಜಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದ್ದರು. ಎರಡು ಮದುವೆ ಆಗಿ ಮಕ್ಕಳೂ ಇದ್ದು ಮತ್ತೆ ಮೂರನೇ ಮದುವೆ ಆಗಿದ್ದು ಜನರಿಗೆ ಅದರಲ್ಲೂ ಅವರ ತಂದೆ ವಿಜಯ್ ಕುಮಾರ್ ಅಭಿಮಾನಿಗಳು ರೊಚ್ಚಿಗೇಳುವಂತೆ ಮಾಡಿತ್ತು. ಈಗ ವನಿತಾ ವಿಜತಗ ಕುಮಾರ್ ಮದುವೆಯಾಗಿ ಎರಡು ದಿನ ಕಳೆಐವಷ್ಟರಲ್ಲಿ ಶಾಕಿಂಗ್ ನ್ಯೂಸ್ ಕೇಳಿದ್ದಾಳೆ.


ವನಿತಾಳ ಗಂಡ ಪೀಟರ್ ಪೌಲ್ ಗೆ ಈಗಾಗಲೇ ಮದುವೆ ಆಗಿದ್ದು ಎರಡು ಮಕ್ಕಳು ಕೂಡ ಇದ್ದಾರೆ. ಈಗ ಮದುವೆ ಆಗಿ ಎರಡು ದಿನಗಳ ನಂತರ ಅವನ ಮೊದಲ ಹೆಂಡತಿ ಎಲಿಜಬೆತ್ ಹೆಲೆನ್ ಪೊಲೀಸ್ ದೂರು ಕೊಟ್ಟಿದ್ದಾಳೆ. ನನ್ನ ಗಂಡ ನನಗೆ ವಿಚ್ಚೇದನವನ್ನೂ ನೀಡದೇ ಮದುವೆ ಆಗಿ ಮೋಸ ಮಾಡಿದ್ದಾನೆ ಎಂದು ದೂರು ನೀಡಿದ್ದಾಳೆ.
ಇದರಿಂದ ವನಿತಾ ಮತ್ತು ಪೀಟರ್ ಗೆ ಕಾನೂನು ಸಂಕಷ್ಟ ಎದುರಾಗಿದೆ. ಆದರೆ ಈ ಬಗ್ಗೆ ಮಾತನಾಡಿರುವ ವನಿತಾ ನನ್ನ ಪೀಟರ್ ಬಹಳ ಒಳ್ಳೆಯವನು. ಅವರನ್ನು ನಾನು ಏಳು ತಿಂಗಳು ಬಲ್ಲೆ. ಅವರು ತನ್ನ ಮೊದಲ ಪತ್ನಿಯಿಂದ ಏಳು ವರ್ಷಗಳಿಂದ ದೂರ ಇದ್ದಾನೆ. ನಾವು ಮದುವೆ ಆಗುವುದಕ್ಕೆ ಮೊದಲು ಮೊದಲ ಹೆಂಡತಿಯ ಬಳಿ ಮಾತನಾಡಿ ಮಕ್ಕಳಿಗೆ ಪರಿಹಾರ ಕೊಡಿಸುವುದಾಗಿ ಹೇಳಿ ಮದುವೆ ಆಗಿದ್ದೇವೆ. ಈಗ ಏಕಾಏಕಿ ಅವಳು ದೂರು ನೀಡಿರುವುದು ನನಗೆ ಆಗದವರ ಕೈವಾಡ.ಅಥವಾ ಅವಳಿಗೆ ಪ್ರಚಾರದ ಹುಚ್ಚಿರಬೇಕು ಎಂದು ಹೇಳಿದ್ದಾರೆ.


ಖ್ಯಾತ ನಟ ವಿಜಯ್ ಕುಮಾರ್ ತಮಿಳಿನಲ್ಲಿ ಹಲವಾರು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ತಮಿಳಿನಲ್ಲಿ ಅತ್ಯುತ್ತಮ ಪೋಷಕ ನಟರಲ್ಲಿ ಒಬ್ಬರು. ಖ್ಯಾತ ತಮಿಳು ನಟ ಅರುಣ್ ವಿಜಯ್ ಇವರಿಗೆ ಮಗ. ಒಬ್ಬ ಮಗಳು ಇದ್ದಾಳೆ. ಅವಳ ಹೆಸರು ವನಿತಾ ವಿಜಯ್ ಕುಮಾರ್. ವನೀತಾ ವಿಜಯ್ ಕುಮಾರ್ ಅರುಣ್ ವಿಜಯ್ ಮತ್ತು ತಂದೆ ವಿಜಯ್ ಕುಮಾರ್ ರಂತೆ ಅಲ್ಲ. ಸದಾ ವಿವಾದಗಳಿಂದ ಹೆಚ್ಚು ಹೆಚ್ಚು ಸುದ್ದಿಯಾಗಿ ಇವರ ಕುಟುಂಬಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ.


ವನಿತಾ ವಿಜಯ್ ಕುಮಾರ್ ಮೊದಲು ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದರು. ಸಿನಿಮಾ ಇವರಿಗೆ ಕೈ ಹಿಡಿಯಲಿಲ್ಲ. 2000 ರಲ್ಲಿ ಆಕಾಶ್ ಎಂಬುವವರನ್ನು ಮದುವೆ ಆದರು. ಅವರಿಗೆ ಒಬ್ಬ ಮಗ, ಒಬ್ಬ ಮಗಳು ಹುಟ್ಟಿದರು. ಆದರೆ ಇವರ ಸಂಸಾರ ಹೆಚ್ಚು ವರ್ಷ ಉಳಿಯಲಿಲ್ಲ. 2005 ರಲ್ಲಿ ವನಿತಾ ತನ್ನ ಗಂಡನಿಂದ ಡೈವೋರ್ಸ್ ಪಡೆದುಕೊಂಡಳು. ಕಡೆಗೆ 2007 ರಲ್ಲಿ ಉದ್ಯಮಿ ಆನಂದ್ ಜಯ ರಾಜನ್ ರನ್ನು ಮದುವೆಯಾದಳು. ಎಂದಿನಂತೆ ಅವರಿಂದಲೂ ವಿಚ್ಚೇದನ ಪಡೆದು ಸುದ್ದಿಯಾದಳು

.
ಬಿಗ್ಬಾಸ್ ತಮಿಳಿನಲ್ಲಿ ಎಂಟ್ರಿ ಆಗಿ ಅಲ್ಲೋಲ ಕಲ್ಲೋಲ ಉಂಟು ಮಾಡಿದಳು. ವಿವಾದಾತ್ಮಕ ಹೇಳಿಕೆ ಕೊಟ್ಟು ಅಲ್ಲಿಗೇ ಪೋಲಿಸರು ಬಂದಿದ್ದರು. ನಂತರ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಬಿಗ್ಬಾಸ್ ನಲ್ಲಿ ವಿವಾದಕ್ಕೀಡಾದಳು. ಕಡೆಗೆ ತನ್ನದೇ ಆದ ಯೂಟ್ಯೂಬ್ ಅಕೌಂಟ್ ಓಪನ್ ಮಾಡಿದಳು. ಆಗ ಇವಳ ವೀಡಿಯೋವನ್ನು ಎಡಿಟ್ ಮಾಡಲು ಪೀಟರ್ ರನ್ನು ಸಹಾಯ ಕೇಳಿದ್ದಳು. ಇಬ್ಬರೂ ಸ್ನೇಹಿತರಾದರು. ಸ್ನೇಹ ಪ್ರೀತಿ ಆಯಿತು. ಈಗ ಆ ಪ್ರೀತಿ ಮದುವೆಯವರೆಗೆ ಬಂದಿದೆ. ಈಗ ಮದುವೆಯಾದ ಎರಡೇ ದಿನದಲ್ಲಿ ಕಾನೂನು ಸಂಕಷ್ಟ ಎದುರಾಗಿದೆ.