ಬ್ರೇಕಿಂಗ್ ನ್ಯೂಸ್ : ನಟ ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲು

Updated: Tuesday, October 20, 2020, 13:47 [IST]

ಬ್ರೇಕಿಂಗ್ ನ್ಯೂಸ್ : ನಟ ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲು

 

Advertisement
 

ನಟ ರಕ್ಷಿತ್ ಶೆಟ್ಟಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ. ನಿರ್ದೇಶಕ ಹೇಮಂತ್ ಎಂಬುವವರು ದೂರು ನೀಡಿದ್ದು, ರಿಚ್ಚಿ ಎಂಬ ಹೆಸರಿನಲ್ಲಿ ರಕ್ಷಿತ್ ಶೆಟ್ಟಿಗೂ ಮೊದಲೇ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇವೆ. ಎರಡು ವರ್ಷದ ಮೊದಲೇ ಚಿತ್ರದ ಟೈಟಲ್ ನೋಂದಣಿ ಮಾಡಲಾಗಿದೆ. ಟೈಟಲ್ ರಿನಿವಲ್ ಕೂಡ ಆಗಿದೆ. ಆದರೆ ರಕ್ಷಿತ್ ಶೆಟ್ಟಿ ಕೂಡ ರಿಚ್ಚಿ ಟೈಟಲ್‍ನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.

 

Advertisement

ರಿಚ್ಚಿ ಚಿತ್ರದ ಶೇಕಡಾ 70 ರಷ್ಟು ಶೂಟಿಂಗ್ ಕೂಡ ಮುಗಿದಿದೆ.ಈಗ ಏಕಾಏಕಿ ಈ ಚಿತ್ರದ ಹೆಸರನ್ನು ಬಳಸಿ ರಕ್ಷಿತ್ ಶೆಟ್ಟಿ ಬಳಸಿರುವುದು ನೋವುಂಟು ಮಾಡಿದೆ. ನಮ್ಮ ಚಿತ್ರದ ಮೇಲೂ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಈ ಹಿಂದೆ ಕೂಡ ಈ ಬಗ್ಗೆ ದೂರು ನೀಡಿದ್ದೆ.ಆದರೆ ಪ್ರಯೋಜನ ಆಗಲಿಲ್ಲ ‌ . ಹೀಗಾಗಿ ಮತ್ತೆ ದೂರು ನೀಡುತ್ತಿದ್ದೇನೆ ಎಂದರು.