ನಟಿ ರಾಗಿಣಿಗೆ ಬಿಗ್ ಶಾಕ್! ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ

Updated: Wednesday, September 16, 2020, 12:36 [IST]

ನಟಿ ರಾಗಿಣಿಗೆ ಬಿಗ್ ಶಾಕ್! ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ

ಸ್ಯಾಂಡಲ್​ವುಡ್ ಡ್ರಗ್ಸ್​ ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಕೋರಿ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಎರಡನೇ ಬಾರಿಯೂ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಇಂದು ನಟಿ ರಾಗಿಣಿಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಶೇಷ ಕೋರ್ಟ್​ ಅರ್ಜಿ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿದೆ. ಈ ಪ್ರಕರಣದಲ್ಲಿ ಹೊಸ ಎಸ್​ಪಿಪಿಗಳ ನೇಮಕ ಹಿನ್ನೆಲೆಯಲ್ಲಿ ಹೊಸ ಅಭಿಯೋಜಕರಿಂದ ಕಾಲಾವಕಾಶ ಕೋರಲಾಗಿದೆ. ಆಕ್ಷೇಪಣೆ ಸಲ್ಲಿಸಲು ಅಭಿಯೋಜಕರು ಕಾಲಾವಕಾಶ ಕೋರಿದ್ದರಿಂದ ರಾಗಿಣಿಗೆ ಸದ್ಯಕ್ಕೆ ಯಾವುದೇ ರಿಲೀಫ್ ಇಲ್ಲ.

   

Advertisement

ಸೋಮವಾರ ರಾತ್ರಿ ಪರಪ್ಪನ ಅಗ್ರಹಾರ ಸೇರಿರುವ ರಾಗಿಣಿಯನ್ನ ಕಾಣಲು ಪೋಷಕರು ಜೈಲಿನ ಬಳಿ ಆಗಮಿಸಿದ್ದರು. ಆದ್ರೆ ಅವಕಾಶ ಸಿಗದ ಹಿನ್ನೆಲೆ ವಾಪಾಸ್ಸಾದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದ ರಾಗಿಣಿ ತಾಯಿ ರೋಹಿಣಿ ದ್ವಿವೇದಿ, ನನ್ನ ಮಗಳು ಹತ್ತು ವರ್ಷಗಳಿಂದ ಕನ್ನಡ ಇಂಡಸ್ಟ್ರಿಯಲ್ಲಿ ದುಡಿದಿದ್ದಾಳೆ. ನಮ್ಮ ಬಳಿ ಇರುವುದು ಒಂದೇ ಫ್ಲ್ಯಾಟ್. ಮಾಧ್ಯಮಗಳಲ್ಲಿ ಮೂರು ಮೂರು ಫ್ಲ್ಯಾಟ್ ಗಳಿವೆ ಎಂದು ಬಿಂಬಿಸಲಾಗುತ್ತಿದೆ. ನಾವು ಇಡಿ ಗೆ ಈಗಾಗಲೆ ಮಾಹಿತಿ ನೀಡಿದ್ದೇವೆ. ಆಕೆ ಹೆಣ್ಣು ಸಿಂಹ ಇದ್ದ ಹಾಗೆ. ನಾವು ಯಾವುದಕ್ಕು ಹೆದರುವುದಿಲ್ಲ ಎಂದು ಹೇಳಿದ್ದರು.