ಹಿರಿಯ ನಟಿ ಸುಧಾರಾಣಿಯವರ ತಂದೆ ವಿಧಿವಶ..! ಸಂತಾಪ ಸೂಚಿಸಿದ ಸುಧಾರಾಣಿ..!

Updated: Saturday, January 16, 2021, 11:58 [IST]

ಹೌದು ನಿನ್ನೆಯಷ್ಟೇ ಈ ವಿಷಯ ಮಾಧ್ಯಮ ಮೂಲಕ ತಿಳಿದುಬಂದಿದ್ದು, ನಮ್ಮ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಸುಧಾರಾಣಿಯವರ ತಂದೆಯವರು  ವಿಧಿವಶರಾಗಿದ್ದಾರೆ ಎಂಬುದಾಗಿ ಸುದ್ದಿ ಕೇಳಿಬಂದಿದೆ. ನಟಿ ಸುಧಾರಾಣಿಯವರ ತಂದೆಯಾದ, ಹೆಚ್.ಎಸ್. ಗೋಪಾಲಕೃಷ್ಣ (93) ವಿಧಿವಶರಾಗಿದ್ದಾರೆ. ನಟಿಯ ತಂದೆ ಗೋಪಾಲಕೃಷ್ಣ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ ಎನ್ನುವ ಮಾಹಿತಿ ಇದೀಗ ತಿಳಿದುಬಂದಿದೆ..  

ನಟಿ ಸುಧಾರಾಣಿಯವರ ತಂದೆ, ನಗರದ ಮಲ್ಲೇಶ್ವರಂನ ನಿವಾಸದಲ್ಲಿ ನಿಧನರಾಗಿದ್ದು,   

ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ಅಂತ್ಯಸಂಸ್ಕಾರ ನಡೆಯಲಿದೆ ಎನ್ನುವ ಮಾತುಗಳು ಮಾಧ್ಯಮ ಮೂಲಕ ವರದಿಯಾಗಿವೆ. ಸತ್ಯ ಹರಿಶ್ಚಂದ್ರ ಘಾಟ್​​ನಲ್ಲಿಯೇ ಇಂದು ನಟಿ ಸುಧಾರಾಣಿ ತಂದೆಯ ಅಂತ್ಯಸಂಸ್ಕಾರ ನೆರವೇರಲಿದ್ದು, ನಟಿಯ ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ.