ಸೀರೆಯಲ್ಲೇ ಕಾರ್ಟ್ ವೀಲ್ ಜಂಪ್ ಮಾಡಿದ ಅದಾಶರ್ಮಾ - ವೀಡಿಯೋ ನೋಡಿ

Updated: Thursday, January 14, 2021, 18:01 [IST]

ಸೀರೆಯುಟ್ಟು ಕಾರ್ಟ್‍ವೀಲ್ ಫ್ಲಿಪ್ ಮಾಡಿದ ಅದಾ ಶರ್ಮಾ

 

Advertisement

 ಸೀರೆಯುಟ್ಟ ಅದಾ ಶರ್ಮಾ ಕಡಲ ತೀರದಲ್ಲಿ ಕಾರ್ಟ್‍ವೀಲ್ ಫ್ಲಿಪ್ ಮಾಡಿದ್ದಾರೆ. ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

 

Advertisement

ಹಾಟ್ ಫೋಟೋ ಶೂಟ್‍ಗಳಿಂದಲೇ ಸದಾ ಸುದ್ದಿಯಲ್ಲಿರುವ ನಟಿ ಅದಾ ಶರ್ಮಾ. ಇದೀಗ ಸಮುದ್ರದ ತಟದಲ್ಲಿ ಕಾರ್ಟ್‍ವೀಲ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಕಾರ್ಟ್‍ವೀಲ್ ಮಾಡಿರುವುದರಲ್ಲಿಯೂ ಒಂದು ವಿಶೇಷತೆ ಇದೆ. ಸೀರೆಯನ್ನು ತೊಟ್ಟು ಕಾರ್ಟ್‍ವೀಲ್ ಮಾಡಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮೆಚ್ಚುಗೆ ಮತ್ತು ಉತ್ತಮ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುವ ನಟಿಮಣಿಯರಲ್ಲಿ ಅದಾ ಶರ್ಮಾ ಕೊಂಚ ವಿಭಿನ್ನವಾಗಿದ್ದಾರೆ. ಇತ್ತೀಚೆಗೆ ಇವರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಹಾಟ್ ಫೋಟೋಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೆ ತಮ್ಮ ಲೆಟೆಸ್ಟ್ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆ ಫೋಟೋಗಳು ಸಖತ್ ವೈರಲ್ ಆಗಿದ್ದವು. ಫೋಟೋಗಳ ಜೊತೆಗೆ ತಮ್ಮ ವಿಭಿನ್ನವಾದ ವಿಡಿಯೋಗಳ ಮೂಲಕವೂ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ಅದಾ ಶರ್ಮಾ 16 ವರ್ಷದವರಿದ್ದಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. 2008ರಲ್ಲೇ ಅದಾ ಅವರ ಬಣ್ಣದ ಜಗತ್ತಿನ ಪಯಣ ಆರಂಭವಾಗಿತ್ತು. ವಿಕ್ರಂ ಭಟ್ ಅವರ ಸಿನಿಮಾ ಮೂಲಕ ಅದಾ ಬಾಲಿವುಡ್‍ಗೆ ಕಾಲಿಟ್ಟಿದ್ದಾರೆ. ಇದೀಗ ತಮ್ಮ ಉತ್ತಮ ನಟನೆಯ ಮೂಲಕವಾಗಿ ರಂಜಿಸುತ್ತಿದ್ದಾರೆ.