ಪಾರಿಜಾತ ಬೆಡಗಿ ನಟಿ ಐಂದ್ರಿತ ರೈ ಕಡಿದಾದ ಬಂಡೆ ಏರುವ ಸಾಹಸಮಯ ಸ್ಟಂಟ್..! ಅದು ಹೇಗೆ ಗೊತ್ತಾ ಇಲ್ಲಿ ನೋಡಿ.

Updated: Monday, July 6, 2020, 18:51 [IST]

ಪಾರಿಜಾತ ಸಿನಿಮಾ ಮೂಲಕ ಮನೆಮಾತಾಗಿರುವ ನಟಿ ಐಂದ್ರಿತಾ ರೈ, ದಿಗಂತ್ ಕೆಲ ದಿನಗಳ ಹಿಂದಷ್ಟೇ ಮದುವೆಯಾಗಿರುವುದು  ಎಲ್ಲರಿಗೂ ಗೊತ್ತಿರುವ ವಿಚಾರ. ಐಂದ್ರಿತಾ ರೈ ಮದುವೆಯ ನಂತರವೂ ಗರುಡ ಮತ್ತು ಪ್ರೇಮಂ ಪೂಜ್ಯಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಗರುಡ ಸಿನಿಮಾ ಪ್ರೊಡಕ್ಷನ್ ಹಂತದಲ್ಲಿದ್ದರೆ ಪ್ರೇಮಂ ಪೂಜ್ಯಂ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿರುವು
ದರಿಂದ ಐಂದ್ರಿತಾ ರೈ ಹಾಗೂ ದಿಗಂತ್ ಕುಟುಂಬದವರು ಫುಲ್ ಎಂಜಾಯ್ ಮಾಡುತ್ತಿದ್ದಾರೆ. 

Advertisement

ಐಂದ್ರಿತ ರೈ ಹಾಗೂ ದಿಗಂತ್ ಜಾಲಿ ಮೂಡ್ ನಲ್ಲಿ ಇದ್ದು. ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಬೆಟ್ಟ-ಗುಡ್ಡಗಳ ಅಲೆದಾಟದಲ್ಲಿ ತೊಡಗಿದ್ದಾರೆ. ಮತ್ತು ಸಾಹಸಮಯ ಸ್ಟಂಟ್ ಮಾಡುತ್ತಿದ್ದಾರೆ. ಕಡಿದಾದ ಬಂಡೆಗಳನ್ನು ಏರುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ತಂಡದಲ್ಲಿ ದಿಗಂತ್ ಕೂಡ ಇದ್ದು ತಮ್ಮದೇ ಆದ ಗುಂಪು ಕಟ್ಟಿಕೊಂಡು ಬೆಟ್ಟ ಗುಡ್ಡಗಳಿಗೆ ಹೋಗುತ್ತಿದ್ದಾರೆ. ಐಂದ್ರಿತಾ ರೈ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎಲ್ಲಾ ಅಪ್ಡೇಟ್ ಮಾಡುತ್ತಿದ್ದು. ನಿಜವಾಗಿಯೂ ಇದು ತುಂಬಾ ಕಠಿಣ ಇದು ನನ್ನ ಮೂರನೆಯ ಪ್ರಯತ್ನ.  

ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ಬಂಡೆಯನ್ನು ಹತ್ತುವಾಗ ಒಂದು ಕ್ಷಣ ಹೃದಯ ಬಡಿತವೇ ನಿಂತಂತಾಯಿತು. ಆದರೆ ಪೂರ್ತಿಯಾಗಿ ಮೇಲಕ್ಕೆ ಹೋದಾಗ ಅದ್ಭುತ ಸಂತೋಷವಾಯಿತು. ಇದಕ್ಕೆಲ್ಲಾ ಪತಿ ದಿಗಂತ್ ಅವರನ್ನು ಕೂಡ ಸೇರಿಸಿ ನಾಲ್ವರನ್ನು ಟ್ಯಾಗ್ ಮಾಡಿದ್ದಾರೆ. ಇವರ ಪ್ರೋತ್ಸಾಹದಿಂದಲೇ ಮೇಲಕ್ಕೆ ಹತ್ತಲು ಸಾಧ್ಯವಾಯಿತು. ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳು ಐಂದ್ರಿತ ರೈ ಅವರಿಗೆ ಸೂಪರ್,ಅಮೇಜಿಂಗ್ ಆದರೆ ಇನ್ನೂ ಕೆಲವರು ಹುಷಾರ್ ಎಂದು ಕಾಮೆಂಟ್ ಮಾಡಿದ್ದಾರೆ  ಎನ್ನಲಾಗಿದೆ. ಐಂದ್ರಿತಾ ರೈ, ದಿಗಂತ್  ಹಾಗೂ ತಮ್ಮ ಟೀಮ್ ಜೊತೆ ಸೈಕ್ಲಿಂಗ್ ಸೇರಿದಂತೆ ಹಲವಾರು ದೇಹ ದಂಡಿಸುವ ಚಟುವಟಿಕೆಯಲ್ಲಿ ತೊಡಗಿದ್ದಾರೆ.ಎಂದು ಸಾಮಾಜಿಕ ಜಾಲತಾಣಗಳಿಂದ ತಿಳಿದುಬಂದಿದೆ