ಹೆಣ್ಣು ಮಗುವಿಗೆ ಜನ್ಮ ನೀಡಿದ ಬಿಗ್ಬಾಸ್ ಅಕ್ಷತಾ ಪಾಂಡವಪುರ.! ಮಗಳ ಬಗ್ಗೆ ಸಿಹಿ ಹೇಳಿಕೆ..!

Updated: Sunday, January 17, 2021, 10:05 [IST]

ಹೌದು ಪಲ್ಲಟ ಸಿನಿಮಾದ ಖ್ಯಾತಿಯ ಪೋಷಕ ನಟಿ ಅಕ್ಷತಾ ಪಾಂಡವಪುರ ಇದೀಗ ಹೆಣ್ಣು ಮಗಳಿಗೆ ಜನ್ಮ ನೀಡಿದ್ದು, ಈ ವಿಷಯವನ್ನು ಅಕ್ಷತಾ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ತಮ್ಮ ಗರ್ಭಿಣಿ ಫೋಟೋವನ್ನ ಕೂಡ ಹಂಚಿಕೊಂಡಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿತ್ತಿದ್ದ ಹಾಗೆ, ಅಕ್ಷತಾ ಪಾಂಡವಪುರ ಅವರಿಗೆ ಸ್ನೇಹಿತರಿಂದ ಮತ್ತು ಅವರ ಕುಟುಂಬದಿಂದ ಶುಭಾಶಯಗ ಮಹಾಪೂರ ಹರಿದು ಬರುತ್ತಿದ್ದು, ನಟಿ ಅಕ್ಷತಾ ಮಗಳ ಖುಷಿಯಲ್ಲಿ ಇದೀಗ ತೇಲಾಡುತ್ತಿದ್ದಾರೆ.ಹೌದು ಸಿನಿಮಾರಂಗದಲ್ಲಿ ಹಾಗೂ ಕಿರುತೆರೆಯಲ್ಲಿ,  

ಹಾಗೂ ಬಿಗ್ ಬಾಸ್ ಕಾರ್ಯಕ್ರಮದ ಮಾಜಿ ಸದಸ್ಯೆ ಅಕ್ಷತಾ ಪಲ್ಲಟ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಕೂಡ ಇವರು ಪಡೆದುಕೊಂಡಿದ್ದಾರೆ, ಹಾಗೂ ಎಲ್ಲಾ ಕ್ಷೇತ್ರದಲ್ಲಿ ಕೂಡ ಇವರು ಚಿರಪರಿಚಿತರು. ಇದೀಗ ಹೆಣ್ಣುಮಗಳ ತಾಯಿ ಆಗಿದ್ದು, ಮಗಳ ಆಗಮನದ ವಿಷಯ ಹೇಳಿ, "ಮಗಳು.. ಧನ್ಯವಾದಗಳು ದೇವರೆ. ಬೇಬಿ ಗರ್ಲ್‌" ಎಂದು ನಟಿ ಬರೆದುಕೊಂಡಿದ್ದಾರೆ. 

ಮತ್ತು ಈ ಹಿಂದೆ ಅಕ್ಷತಾ ಪಾಂಡವಪುರ ಅವರು ತಮ್ಮ ಗರ್ಭಿಣಿ ಆಗಿದ್ದ ಸಕತ್ತಾಗಿ ಫೋಟೋಶೂಟ್ ಮಾಡಿಸಿ,  ಸೋಷಿಯಲ್ ಮಿಡಿಯಾದಲಿ ಶೇರ್ ಮಾಡಿಕೊಂಡು, ತುಂಬಾ ಸುದ್ದಿಯಲ್ಲಿದ್ದರು. ಹಾಗೆ ಈ ವಿಷಯ ತುಂಬಾ ಚರ್ಚೆ ಆಗಿ ಫೋಟೋಗಳು ಹೆವಿ ವೈರಲ್ ಆಗಿದ್ದವು. ಇದೀಗ ಮಗಳು ಹುಟ್ಟಿದ್ದು, ಈಗಲೂ ತುಂಬಾ ಸುದ್ದಿ ಆಗುತ್ತಿದ್ದಾರೆ. ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ, ಈ ಮಾಹಿತಿಯನ್ನ ಶೇರ್ ಮಾಡಿ ಧನ್ಯವಾದಗಳು....