ಅನುಷ ರೈ ಧರ್ಮ ಕೀರ್ತಿರಾಜ್ 2 ವರ್ಷ ಪ್ರೀತಿಸಿ ಬ್ರೇಕಪ್ ಆಗಿದ್ದು ಯಾವ ಕಾರಣಕ್ಕೆ ಗೊತ್ತಾ ?

ನನ್ನ ಲೈಫ್ ಅಲ್ಲಿ ಒಂದು ಲವ್ ಸ್ಟೋರಿ ಇದೆ. ಆದರೆ, ಅದು ಮೂರು ವರ್ಷದ ಹಿಂದೇನೆ ಬ್ರೇಕ್ ಆಗಿದೆ. ಈಗಲೂ ಆ ಹುಡುಗನ ಮೇಲೆ ಕ್ರಶ್ ಇದೆ. ಹಾಗಂತ ಇಲ್ಲಿ ಹೆಸರು ಹೇಳೋದು ಬೇಡ್ವೇ ಬೇಡ. ಹೀಗೆ ಅನುಷಾ ರೈ ಮನದ ಮಾತು ಹೇಳಿಕೊಂಡಿದ್ದಾರೆ. ಉಗ್ರಂ ಮಂಜು ಕೇಳಿದ ಪ್ರಶ್ನೆಗೆ ಅನುಷಾ ತಮ್ಮ ಬ್ರೇಕ್ ಅಪ್ ಲವ್ ಸ್ಟೋರಿ ಕಥೆ ಹೇಳಿದ್ದಾರೆ.
ಉಗ್ರಂ ಮಂಜು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಮಾತು ಆರಂಭಿಸಿದ್ದರು. ಹೇಳ್ರಮ್ಮ ನಿಮ್ಮ ನಿಮ್ಮ ಲವ್ ಸ್ಟೋರಿ ಅಂತಲೇ ಕೇಳ್ತಾ ಇದ್ದರು. ಆಗಲೇ ಅನುಷಾ ಹೇಳಮ್ಮ ನಿಮ್ಮ ಲವ್ ಸ್ಟೋರಿ ಅಂತಲೇ ಕೇಳಿದ್ರು. ಆಗಲೇ ಅನುಷಾ ನನ್ನದು ಒಂದು ಲವ್ ಸ್ಟೋರಿ ಇತ್ತು. ಆದರೆ, ಅದು ಬ್ರೇಕ್ ಆಯಿತು ಅಂತಲೇ ಹೇಳಿದ್ರು.ಆದರೆ, ಉಗ್ರಂ ಮಂಜು ಒತ್ತಾಯ ಮಾಡಿದಾಗ, ಪಕ್ಕದಲ್ಲಿಯೇ ಇದ್ದ ಧರ್ಮ ಕೀರ್ತಿರಾಜ್ ಹೆಸರು ಹೇಳಿಯೇ ಬಿಟ್ಟರು. ಇವನೇ ನನ್ನ ಲವರ್ ಅನ್ನುವ ಅರ್ಥದಲ್ಲಿಯೇ ಅನುಷಾ ರೈ ಹೇಳಿದರು. ಆದರೆ, ಧರ್ಮ ಕೀರ್ತಿರಾಜ್ ಅದು ಸಿನಿಮಾ ಲವ್ ಸ್ಟೋರಿಯಮ್ಮ ಅಂತ ಹೇಳಿ ಸುಮ್ನೆ ಆದರು.
ನಟಿ ಅನುಷಾ ರೈ ಹಾಗೂ ಧರ್ಮ ಕೀರ್ತಿರಾಜ್ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದರು. ಇದರಿಂದ ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಇಬ್ಬರೂ ಈ ಗೆಳೆತನ ಬಿಗ್ ಬಾಸ್ ಮನೆಯಲ್ಲೂ ಮುಂದುವರಿದಿದೆ. ಇದೇ ವಿಚಾರ ಇಟ್ಟುಕೊಂಡು ಕೆಲವರು ನಾಮಿನೇಟ್ ಮಾಡಿದ್ದೂ ಇದೆ. ಈಗ ಅನುಷಾ ಅವರು ತಮ್ಮ ಹಾಗೂ ಧರ್ಮ ಮಧ್ಯೆ ಇರುವ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
ನಾನು ಧರ್ಮ ಫ್ರೆಂಡ್ಸ್ ಅಷ್ಟೇ. ಯಾಕೆ ಎಲ್ಲರೂ ನಮ್ಮನ್ನು ಬೇರೆ ರೀತಿಯಲ್ಲಿ ನೋಡುತ್ತೀರಿ’ ಎಂದು ಅನುಷಾ ಅವರು ಮನೆಯಲ್ಲಿ ಕೆಲವರನ್ನು ಕೇಳಿದ್ದಾರೆ.
ಅನುಷ ರೈ ಕಡೆಗೂ ಬ್ರೇಕಪ್ ಆಗಿದ್ದು ಯಾವ ಕಾರಣಕ್ಕೆ ಎಂದು ತಿಳಿಸಲೇ ಇಲ್ಲ . ಅಂದ್ರೆ ಈಗಲೂ ಸಹ ಅವರಿಬ್ಬರ ನಡುವೆ ಪ್ರೀತಿ ಇದೆ ಎಂದು ನಂಬಲಾಗಿದೆ ( video credit : News Boxx )