ವಿಜ್ಞಾನಕ್ಕೆ ಸವಾಲ್..! ಮಾನವ ಮುಖ, ಗೂಬೆ ಕಣ್ಣು ಹೋಲುವ ಮೇಕೆ ಮರಿ ಜನನ..!

Updated: Saturday, January 16, 2021, 22:27 [IST]

ಮನುಷ್ಯನ ಮುಖ ಮತ್ತು ಗೂಬೆ ಆಕಾರದ ಕಣ್ಣಿನ ಮೇಕೆ ಮರಿಯೊಂದು ಜನಿಸಿದ ಅಚ್ಚರಿಯ ಘಟನೆ ಕೊರಟಗೆರೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಪಾತಗಾನಗಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವೆಂಗಳಮ್ಮನ ಹಳ್ಳಿಯ ರೈತ ಕುಮಾರ್ ಎಂಬುವರ ಮನೆಯಲ್ಲಿ ಈ ವಿಚಿತ್ರವಾದ ಮೇಕೆ ಮರಿ ಜನಿಸಿದ್ದು, ಹಳ್ಳಿ ಪ್ರದೇಶ ಆಗಿರೋದ್ರಿಂದ ಮನೆಯವರು ಆತಂಕಕ್ಕೆ ಈಡಾಗಿದ್ದಾರೆ. ಮನುಷ್ಯನ ಮುಖ ಮತ್ತು ಗೂಬೆ ಆಕಾರದ ಕಣ್ಣಿನ ಮೇಕೆ ಮರಿಯನ್ನು ನೋಡಲು ಊರವರು ಕುಮಾರ್ ಮನೆಗೆ ಭಾರೀ ಸಂಖ್ಯೆಯಲ್ಲಿ ಬರುತ್ತಿದ್ದಾರೆ.   

ಮೇಕೆ ಮರಿಯ ನಾಲ್ಕು ಕಾಲುಗಳು ಮತ್ತು ಎರಡು ಕಿವಿಗಳು ಮೇಕೆಯನ್ನೇ ಹೋಲುತ್ತಿದ್ದು, ಮನುಷ್ಯ ರೂಪದ ತಲೆ ಮತ್ತು ಗೂಬೆಯನ್ನು ಹೋಲುವ ಕಣ್ಣು ಮಾತ್ರ ವಿಚಿತ್ರವಾಗಿ ಕಾಣಿಸಿದೆ. ಇನ್ನುಳಿದಂತೆ ಮೇಕೆ ಮರಿಯ ನಾಲಿಗೆ ಬಾಯಿಯಿಂದ ಹೊರಗಡೆ ಚಾಚಿದೆ. ಗೂಬೆ ಕಣ್ಣಿನಂತೆ ಕಾಣುತ್ತಿರುವ ಮಿಂಚಿನ ನೋಟದ ಮೇಕೆಯ ಕಣ್ಣು ರೈತಾಪಿವರ್ಗಕ್ಕೆ ಮತ್ತು ಪ್ರಕೃತಿಗೆ ಸವಲಾಗಿರುವ ಪರಿಣಾಮ ನೋಡುಗರ ಗಮನ ಸೆಳೆದಿದೆ.  

ರೈತ ಕುಮಾರ್ ಅವರು ಕಳೆದ ಕೆಲವಾರಗಳ ಹಿಂದೆ 14ಸಾವಿರ ವೆಚ್ಚದ ಮೇಕೆಯನ್ನು ಖರೀದಿ ಮಾಡಿದ್ದರು. ಗರ್ಭಿಣಿಯಾಗಿದ್ದ ಮೇಕೆ ಶುಕ್ರವಾರ ಮಧ್ಯಾಹ್ನ ವಿಚಿತ್ರ ರೂಪದ ಮೇಕೆಗೆ ಜನನ ನೀಡಿರೋದು ರೈತನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.