ಚೀನಾ ದೇಶದಲ್ಲಿ ಈ ರೀತಿ ನಡೆಯುತ್ತೆ ಅಂತ ನೀವು ಯಾವತ್ತು ನಂಬಲು ಸಾಧ್ಯವಿಲ್ಲ

Updated: Saturday, November 21, 2020, 21:09 [IST]

ಇವತ್ತು ಚೀನಾದ ಕೆಲವೊಂದು ಕುತೂಹಲಕಾರಿ ಸುದ್ದಿಗಳನ್ನು ತಿಳಿಯೋಣ.
1. ಚೀನಾದ ಕೆಲವೊಂದು ಶಾಲೆಗಳಲ್ಲಿ ಯೂರಿನ್ನನ್ನು ಬಾತ್ರೂಮಿನಲ್ಲಿ ಮಾಡುವಂತ್ತಿಲ್ಲವಂತ್ತೆ. ಅದಕ್ಕಾಗಿ ವಿಶೇಷವಾಗಿ ಏರ್ಪಾರ್ಟ್  ಮಾಡಿರುವ ಬಕೆಟ್ನಲ್ಲಿ ಮಾಡಬೇಕಂತೆ. ಏನಕ್ಕೆ ಈ ರೂಲ್ಸ್ ಅಂತೀರಾ? ಈ ಯೂರಿನಲ್ಲಿ ಮೊಟ್ಟೆ ಬೇಯಿಸುವುದಕ್ಕೆ. ಹೌದು ಚೀನಾದಲ್ಲಿ ಯೂರಿನ್  ನಲ್ಲಿ ಬೇಯಿಸಿದ  ಮೊಟ್ಟೆ ಅಂದರೆ ತುಂಬಾ ಫೇಮಸ್. ಇದನ್ನ ಅವರು ವರ್ಜಿನ್ ಮೊಟ್ಟೆ ಅಂತ ಕರೆಯುತ್ತಾರೆ. ಮೊಟ್ಟೆಯನ್ನು ತಿಂದರೆ ಶಕ್ತಿ ಬರುತ್ತದೆ ಅಂತ ಅವರ ನಂಬಿಕೆ.

Advertisement

2. ಚೀನಾದಲ್ಲಿ ಒಂದು ಹಬ್ಬ ನಡೆಯುತ್ತೆ. ಅದರ ಹೆಸರು ಯುಲಿನ್ ಡಾಗ್ ಫೆಸ್ಟಿವಲ್ . ಇದರಲ್ಲಿ ಪಾಲ್ಗೊಳ್ಳುವಂತ ಎಲ್ಲರೂ ನಾಯಿಗಳನ್ನು ಬೇಯಿಸಿಕೊಂಡು ತಿನ್ನುತ್ತಾರೆ. ಈ ಹಬ್ಬ ಮಾಡುವುದಕ್ಕೆ ಅವರು ಚೀನಾದ ಊರು ಊರು ಮತ್ತು ಬೀದಿ ಬೀದಿಯಲ್ಲಿ ನಾಯಿಗಳನ್ನು ಹುಡುಕಿ ತರುತ್ತಾರೆ. ಈ ಹಬ್ಬದ ಎರಡು ದಿನಗಳ ಮುಂಚೆ ಚೀನಾದ ಊರಿನಲ್ಲಿ ಒಂದು ನಾಯಿನು ಕಾಣಿಸುವುದಿಲ್ಲ. ಯಾಕೆಂದರೆ ನಾಯಿನ ಪ್ರೀತಿಸುವವರು ಅವರ ಸಾಕು ನಾಯಿಯನ್ನ ಅವರ ಮನೆಯಲ್ಲಿ ಮುಚ್ಚಿಟ್ಟು ಕೊಂಡಿರುತ್ತಾರೆ. ಯಾಕಂದರೆ ನಾಯಿ ಕಳ್ಳರಿಂದ ತಪ್ಪಿಸಿಕೊಳ್ಳೋಕೆ. ಈ ಹಬ್ಬಕ್ಕೆ ಚೀನಾದಲ್ಲಿ ಭಾರೀ ವಿರೋಧ ಕೂಡ ಇದೆ.

3. ಪ್ರಪಂಚದಲ್ಲಿ ಅತಿ ಹೆಚ್ಚು ಪಾಂಡಗಳು ನಮಗೆ ಚೀನಾದಲ್ಲಿ ಕಾಣಿಸುತ್ತದೆ. ಈ ಪಾಂಡಗಳನ್ನು ಬೇರೆ ದೇಶದವರು ಜೂ಼ಗಳಿಗೆ ಬೇಕು ಅಂದರೆ ಅದನ್ನ ಅವರು ಲೋನ್ ಮುಖಾಂತರ ಕೊಡುತ್ತಾರಂತೆ. ಅಷ್ಟೇ ಅಲ್ಲ ಒಂದು ವೇಳೆ ಆ ಪಾಂಡಗಳಿಗೆ ಮರಿಗಳೇನಾದರೂ ಆದರೆ ಅದನ್ನು ಚೀನಾದವರಿಗೆ ವಾಪಸ್ ಕೊಡಬೇಕಂತೆ. ಇದಕ್ಕೆಲ್ಲ ಅಗ್ರಿಮೆಂಟ್ ಪ್ರೋಸೆಸ್ ಗಳು ಇರುತ್ತವೆ. 

Advertisement

4.ನೀವು ಟ್ರಾಫಿಕ್ ಜಾಮ್ ನಲ್ಲಿ ಎಷ್ಟು ಹೊತ್ತು ಇದ್ದೀರಾ? ಅಂದಾಜಿಗೆ 1 ಗಂಟೆ, 5 ಗಂಟೆ ಅಥವಾ 10 ಗಂಟೆ. ಆದರೆ ಚೀನಾದಲ್ಲಿ ಒಂದು ಸಾರಿ 12 ದಿನಗಳ ಕಾಲ ಟ್ರಾಫಿಕ್ ಜಾಮ್ ಆಗಿತ್ತಂತೆ. ಇದು ಬರೋಬ್ಬರಿ 62 ಕಿಲೋಮೀಟರ್ ಉದ್ದ ಇರುವ ಟ್ರಾಫಿಕ್ ಜಾಮ್. ಇದು ಪ್ರಪಂಚದಲ್ಲಿ ಅತಿ ದೊಡ್ಡ ಟ್ರಾಫಿಕ್ ಜಾಮ್.
5. ಚೀನಾದ ಕೆಲವು ಕಡೆ ವಿಚಿತ್ರವಾದ ರೂಲ್ಸ್ ಗಳಿವೆಯಂತೆ. ಅದೇನೆಂದರೆ ಹೆಣ್ಣುಮಕ್ಕಳಿಗೆ 20ವರ್ಷ ಆಗುವುದಕ್ಕಿಂತ ಮುಂಚೆನೇ ಮದುವೆ ಮಾಡಬೇಕಂತೆ. ಇಲ್ಲ ಅಂದರೆ ಅವರನ್ನು ವೇಶ್ಯೆಯರು ಅಂತ ಲೆಕ್ಕಚಾರ ಮಾಡುತ್ತಾರೆ. 

6. ಚೀನಾದವರು 2009 ನೇ ಇಸವಿಯಿಂದ ಫೇಸ್ಬುಕ್ ಮತ್ತು ಟ್ವಿಟರ್ ಅನ್ನು ಬ್ಯಾನ್ ಮಾಡಿರುತ್ತಾರೆ.
7.ನೀವು ಗೂಗಲ್ ನಲ್ಲಿ ಚೀನಾ ಅಂತ ಟೈಪ್ ಮಾಡಿ ಸರ್ಚ್ ಮಾಡಿದರೆ ಅಲ್ಲಿ ಬರುವ ಫೋಟೋಗಳಲ್ಲಿ ಯಾವುದಾದರೂ ಒಂದರಲ್ಲಿ ಮಾಸ್ಕ್ ಹಾಕಿರುವ ಫೋಟೋ ಬರುತ್ತೆ. ಅದಕ್ಕೆ ಕಾರಣ ಅಲ್ಲಿರುವ ಪೊಲ್ಲ್ಯೂಷನ್, ಚೀನಾದ ಬೀಜಿಂಗ್ ಸಿಟಿಯಲ್ಲಿ ಒಂದು ದಿನ ಉಸಿರಾಡಿದರೆ ಹತ್ತರಿಂದ ಹದಿನೈದು ಸಿಗರೇಟ್ ಸೇದಿದಂತೆ ಆಗುತ್ತಂತೆ. ನೀವೇ ಲೆಕ್ಕಹಾಕಿ ಎಷ್ಟು ಪೊಲ್ಯೂಷನ್ ಇರಬೇಕು ಅಂತ.

Advertisement

8‌ ಚೀನಾದಲ್ಲಿ ಮದುವೆಯಾಗಿರುವ ದಂಪತಿಗಳು ಮಕ್ಕಳೇನಾದರೂ ಬೇಕು ಅಂದುಕೊಂಡರೆ, ಮೂರು ತಿಂಗಳ ಮುಂಚೆನೇ ಸರಕಾರಕ್ಕೆ ಅಪ್ಲಿಕೇಶನ್ ಹಾಕಬೇಕು. ಸರಕಾರ ಈ ಅಪ್ಲಿಕೇಶನ್ ಪಾಸ್ ಮಾಡಿದ ನಂತರವೇ ಅವರು ಮಕ್ಕಳನ್ನು ಮಾಡಿಕೊಳ್ಳಬೇಕು.
9. ನಮ್ಮ ಪ್ರಪಂಚದಲ್ಲಿ ಯಾವುದೇ ಒಂದು ವಸ್ತು ಫೇಮಸ್ ಆದರೆ ಅದನ್ನ ಚೀನಾ ಡುಬ್ಲಿಕೇಟ್ ಮಾಡುತ್ತೆ. ನಾವು ತಲೆ ಮೇಲೆ ಹಾಕಿರುವ ಟೋಪಿಯಿಂದ ಹಿಡಿದು ಕಾಲಿಗೆ ಹಾಕುವ ಚಪ್ಪಲಿಯವರೆಗೂ, ನಾವು ಪ್ರತಿನಿತ್ಯ ಬಳಕೆಮಾಡುವ ಎಲ್ಲಾ ವಸ್ತುವನ್ನು ಚೀನಾ ಡೂಪ್ಲಿಕೇಟ್ ಮಾಡುತ್ತೆ. ಕೊನೆಗೆ ಅಕ್ಕಿ, ಮೊಟ್ಟೆ,ಮಾಂಸವನ್ನು ಕೂಡ ಡುಬ್ಲಿಕೇಟ್ ಮಾಡುತ್ತೆ.

Advertisement

ಶೇರ್ ಮಾಡಲು ಮರೆಯದಿರಿ