ಹ್ಯಾಪಿ ಬರ್ತ್ ಡೇ ಚಿರುಸರ್ಜಾ : ಇಂದು ಕ್ಷತ್ರಿಯ ಟ್ರೇಲರ್ ಬಿಡುಗಡೆ

Updated: Saturday, October 17, 2020, 10:03 [IST]

    

ಹ್ಯಾಪಿ ಬರ್ತ್ ಡೇ ಚಿರುಸರ್ಜಾ : ಇಂದು ಕ್ಷತ್ರಿಯ ಟ್ರೇಲರ್ ಬಿಡುಗಡೆ

 

ಚಿರಂಜೀವಿ ಸರ್ಜಾರ ಕೊನೆಯ ಚಿತ್ರ ಕ್ಷತ್ರಿಯ ದ ಟ್ರೇಲರ್ ಇಂದು ಬಿಡುಗಡೆ ಆಗುತ್ತಿದೆ. ಇಂದು ಚಿರುರವರ ಹುಟ್ಟಿದ ದಿನ.ಆ ನೆನಪಿಗಾಗಿ ಅವರ ಕೊನೆಯ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗುತ್ತಿದೆ. ಕ್ಷತ್ರಿಯ ಚಿತ್ರ ವನ್ನು ಅನಿಲ್ ಮಂಡ್ಯ ನಿರ್ದೇಶನ ಮಾಡಿದ್ದಾರೆ.ಚಿತ್ರದ ಬಹುತೇಕ ಎಲ್ಲ ಭಾಗಗಳೂ ಶೂಟಿಂಗ್ ಆಗಿವೆ. ಸ್ವಲ್ಪ ಭಾಗವಷ್ಟೇ ಉಳಿದಿದೆ. ಚಿರು ಇಲ್ಲದುದರಿಂದ ಅದನ್ನು ಯಾವ ರೀತಿಯಲ್ಲಿ ಶೂಟಿಂಗ್ ಮಾಡಿ ಮುಗಿಸುತ್ತಾರೋ ಕಾದು ನೋಡಬೇಕು.

 

ಇನ್ನೂ ಚಿರು ಪಾತ್ರಕ್ಕೆ ಧ್ರುವ ಸರ್ಜಾ ವಾಯ್ಸ್ ಡಬ್ ಮಾಡಿದ್ದಾರೆ. ‌ಚಿತ್ರ ಕೆಲ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ನಿನ್ನೆ ಶಿವಾರ್ಜುನ ಚಿತ್ರ ಬಿಡುಗಡೆ ಆಗಿದ್ದು ಚಿರು ಮತ್ತು ಧ್ರುವ ಅಭಿಮಾನಿಗಳು ಮುಗಿ ಬಿದ್ದು ಚಿತ್ರವನ್ನು ನೋಡುತ್ತಿದ್ದಾರೆ. ಚಿರುವಿನ ತಾಯಿ ಕೂಡ ನಿನ್ನೆ ಸಿನಿಮಾವನ್ನು ನೋಡಿದ್ದಾರೆ. ಇಂದು ಧ್ರುವ ಸರ್ಜಾ ಸಂತೋಷ್ ಥಿಯೇಟರ್ ಗೆ ಬರುವ ನಿರೀಕ್ಷೆ ಇದೆ.

ಈಗಾಗಲೇ ಮೇಘನಾರಾಜ್ ರ ಸೀಮಂತ ಕಾರ್ಯ ಮಾಡಲಾಗಿದೆ. ಇಂದು ಕೆಲ ಥಿಯೇಟರ್ ಗಳಲ್ಲಿ ಚಿರುಸರ್ಜಾ ನೆನಪಿಗಾಗಿ ಅವರ ಹುಟ್ಟಿದ ದಿನಕ್ಕಾಗಿ ಸಿಹಿ ಹಂಚಲಾಗುತ್ತದೆ.