ಮತ್ತೆ ಚಿರು ನೆನಪಾಗುವಂತೆ ಮೂಡಿಬಂದಿದೆ ರಾಜಮಾರ್ತಾಂಡ ಚಿತ್ರದ ಹೀರೋ ಇಂಟ್ರೊ ಸಾಂಗ್..! ವಿಡಿಯೋ ನೋಡಿ

Updated: Saturday, October 17, 2020, 13:23 [IST]

ಕನ್ನಡ ಚಿತ್ರರಂಗದ ಯುವ ನಾಯಕ ನಟ ಚಿರಂಜೀವಿ ಸರ್ಜಾ ಅವರು ಜೂನ್ ಏಳನೇ ತಾರೀಕು ತಮ್ಮ ಕುಟುಂಬವನ್ನು ಮತ್ತು ಇಡೀ ಕರ್ನಾಟಕದ ಜನತೆಯನ್ನು ಸಾಕಷ್ಟು ಅಭಿಮಾನಿ ಬಳಗವನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟರು. ಅಂದಿನ ಆ ವಿಷಯ ಕೇಳಿದ ಬಳಿಕ ಇಡೀ ಕನ್ನಡ ಜನತೆಗೆ ಶಾಕ್ ಬಡಿದಂತಾಗಿತ್ತು. ಇಡೀ ಸರ್ಜಾ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿತ್ತು. ಆಮೇಲೆ ಇಡೀ ಸರ್ಜಾ ಕುಟುಂಬ ಮಾತ್ರವಲ್ಲದೆ ಸಾಕಷ್ಟು ಕನ್ನಡ ಅಭಿಮಾನಿಗಳು ಮತ್ತು  

Advertisement

ಚಿರಂಜೀವಿ ಅಭಿಮಾನಿಗಳು ಚಿರು ಅವರ ಅಕಾಲಿಕ ಮರಣದಿಂದಾಗಿ ಕಣ್ಣೀರು ಹಾಕಿ ನೋವಿನಲ್ಲೇ ಚಿರುಗೆ ವಿದಾಯ ಹೇಳಿದ್ದರು.  ಮತ್ತು ಚಿರು ಪತ್ನಿ ಮೇಘನಾ ಸರ್ಜಾ ಅವರ ಆಗಿನ ಪರಿಸ್ಥಿತಿ ನೋಡಿ, ದೇವರೇ ಇಲ್ಲವೇನೋ ಎನ್ನುವ ಮಟ್ಟಕ್ಕೆ ಸಾಕಷ್ಟು ಜನರು ಆಡಿಕೊಂಡಿದ್ದು ಉಂಟು, ಇದೆಲ್ಲಾ ನೋವಿನ ಬಳಿಕ ಇತ್ತೀಚೆಗೆ ಮೇಘನಾ ರಾಜ್ ಅವರ ಸೀಮಂತ ಕಾರ್ಯ ಕೂಡ ಜರುಗಿದ್ದು, ತಮ್ಮ ಹೊಟ್ಟೆಯಲ್ಲಿ ಮತ್ತೆ ಚಿರು ಮಗುವಾಗಿ ಹುಟ್ಟಿ ಬರಲಿದ್ದಾನೆ ಎನ್ನುವ ಸಂತೋಷದಲ್ಲಿದ್ದಾರೆ. ಮತ್ತು ವೈದ್ಯರು ಹೇಳಿದ ಪ್ರಕಾರ ಇಂದು ಚಿರು ಪತ್ನಿ ಮೇಘನ ಅವರು ಮಗುವಿಗೆ ಜನ್ಮ ನೀಡುವ ದಿನವಾಗಿದೆ. 

Advertisement

ಜೊತೆಗೆ ಚಿರು ಅವರ ಹುಟ್ಟಿದ ದಿನವೂ ಕೂಡ ಇಂದಾಗಿದ್ದು, ರಾಜಮಾರ್ತಾಂಡ ಸಿನಿಮಾ ತಂಡವು ಚಿರಂಜೀವಿ ಅವರ ಹುಟ್ಟು ಹಬ್ಬದ ವಿಶೇಷವಾಗಿ ಹೀರೋ ಇಂಟ್ರೋ ಸಾಂಗ್ ಅನ್ನು ಬಿಡುಗಡೆ ಮಾಡಿದ್ದಾರೆ. ಮತ್ತು ಈ ಹಾಡು ಸದ್ಯ ಯೂಟ್ಯೂಬ್ನಲ್ಲಿ ಸಕ್ಕತ್ತು ಸೌಂಡ್ ಮಾಡುತ್ತಿದ್ದು, ಈಗಾಗಲೇ ಒಂದು ಲಕ್ಷ ವೀಕ್ಷಣೆಯತ್ತ ಸಾಗುತ್ತಿದೆ. ಜೊತೆಗೆ ಮತ್ತೆ ಚಿರಂಜೀವಿ ಅವರನ್ನು ನೋಡಿ ಕಣ್ತುಂಬಿಕೊಳ್ಳುವ ಹಾಡು ಇದಾಗಿದೆ. ನೀವು ಕೂಡ ನೋಡಿ ಚಿರು ಹೇಗೆ ಕಾಣಿಸುತ್ತಿದ್ದಾರೆ ಎಂಬುದಾಗಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು....