ಚಿರುವಿನ ರಾಜಾಮಾರ್ತಾಂಡ ಚಿತ್ರಕ್ಕೆ ದರ್ಶನ್ - ಧ್ರುವ‌ ಸರ್ಜಾ ದನಿ

Updated: Tuesday, June 30, 2020, 10:23 [IST]

ಚಿರುವಿನ ರಾಜಾಮಾರ್ತಾಂಡ ಚಿತ್ರಕ್ಕೆ ದರ್ಶನ್ - ಧ್ರುವ‌ ಸರ್ಜಾ ದನಿ
ಚಿರು ಸರ್ಜಾ ನಮ್ಮನ್ನು ಬಿಟ್ಟು ಜೂನ್ 7 ರಂದು ಅಗಲಿದರು. ಆ ನೋವು ಅವರ ಮನೆಯವರಿಗೆ ಈಗಲೂ ಇದೆ. ಅವರ ಅಗಲಿಕೆ ಅವರಿಗೆ ತುಂಬಲಾರದ ನಷ್ಟ. ಈಗ ಚಿರು ಸರ್ಜಾ ನಟಿಸಿ ಅರ್ಧಕ್ಕೆ ಬಿಟ್ಟ ಚಿತ್ರಗಳ ನಿರ್ಮಾಪಕರು ಮುಂದೆ ಏನು ಮಾಡಬೇಕು ಎಂದು ಚಿಂತಿತರಾಗಿದ್ದರು. ಆದರೆ ಅವರಿಗೆ ಚಿರುವಿನ ತಮ್ಮ ಧ್ರುವ ಸರ್ಜಾ ಭರವಸೆ ನೀಡಿದ್ದಾರೆ.

 
ಅಣ್ಣನ ಅರ್ಧ ಬಿಟ್ಟ ಚಿತ್ರಗಳು ಧ್ರುವ ಸರ್ಜಾರ ನೆರವಿನಿಂದ ಪೂರ್ತಿಗೊಳ್ಳಲಿದೆ. ಇದಕ್ಕೆ ಮುನ್ನುಡಿ ಎಂಬಂತೆ ಮೊದಲು ರಾಜಾ ಮಾರ್ತಾಡ ಚಿತ್ರಕ್ಕೆ ಧ್ರುವ ಸರ್ಜಾ ನೆರವಾಗಿದ್ದಾರೆ. ರಾಜಾ ಮಾರ್ತಾಂಡ ಚಿತ್ರ ಪೂರ್ತಿ ಚಿತ್ರೀಕರಣ ಮುಗಿಸಿತ್ತು. ಕೇವಲ ಡಬ್ಬಿಂಗ್ ಮಾತ್ರ ಬಾಕಿ ಇತ್ತು. ಅಷ್ಟರಲ್ಲಿ ಚಿರು ಸರ್ಜಾ ಅಗಲಿದರು. ಈಗ ಅಣ್ಣನ ಈ ಚಿತ್ರಕ್ಕೆ ಧ್ರುವ ಸರ್ಜಾ ಅವರಿಗೆ ವಾಯ್ಸ್ ಡಬ್ ಮಾಡಲಿದ್ದಾರೆ.'

 
ವಿಶೇಷವಾಗಿ ನಟ ದರ್ಶನ್ ಇದಕ್ಕೆ ಮುಂದೆ ಬಂದಿದ್ದಾರೆ. ಚಿರು ಸರ್ಜಾರ ರಾಜಾ ಮಾರ್ತಾಂಡ ಚಿತ್ರಕ್ಕೆ ಅವರೂ ಕೂಡ ಹಿನ್ನಲೆ ದನಿ ನೀಡಿದ್ದಾರೆ. ತನ್ನ ಆತ್ಮೀಯ ಸ್ನೇಹಿತನ ಅಗಲಿಕೆ ಅವರಿಗೆ ಬಹಳ ದುಃಖ ನೀಡಿದೆ. ಅದಕ್ಕೆ ಅವರೂ ರಾಜಾ ಮಾರ್ತಾಂಡ ಚಿತ್ರ ಪೂರ್ತಿಗೊಳಿಸಲು ನೆರವಾಗುತ್ತಿದ್ದಾರೆ.
ಚಿರು ಸರ್ಜಾರು ರಣಂ, ರಾಜಾ ಮಾರ್ತಾಂಡ, ಕ್ಷತ್ರಿಯ, ಎಪ್ರಿಲ್ ಹಾಗು ನಾಗಾಭರಣರ ಜುಗಾರಿ ಕ್ರಾಸ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವೆಲ್ಲವೂ ಅರ್ಧಕ್ಕೆ ನಿಂತಿದ್ದು ಇವು ಯಾವಾಗ ಬಿಡುಗಡೆ ಆಗುತ್ತವೆ ಎಂದು ಕಾದು ನೋಡಬೇಕು