ಶಾಕಿಂಗ್ ನ್ಯೂಸ್ - ಗಾಳಿಯಲ್ಲಿ ಹರಡುತ್ತೆ ಕೊರೋನಾ- ಬೆಚ್ಚಿ ಬೀಳಿಸಿದೆ ವಿಜ್ಞಾನಿಗಳ ವರದಿ

Updated: Monday, July 6, 2020, 10:39 [IST]

ಶಾಕಿಂಗ್ ನ್ಯೂಸ್ - ಗಾಳಿಯಲ್ಲಿ ಹರಡುತ್ತೆ ಕೊರೋನಾ- ಬೆಚ್ಚಿ ಬೀಳಿಸಿದೆ ವಿಜ್ಞಾನಿಗಳ ವರದಿ
ಕೊರೊನಾ ವೈರಸ್ ಗಾಳಿಯಲ್ಲೂ ಹರಡುತ್ತವೆ ಎಂಬುದಕ್ಕೆ ಸಾಕ್ಷಿಗಳಿವೆ ಎಂದು ಹೇಳಿರುವ ನೂರಾರು ವಿಜ್ಞಾನಿಗಳು ಹೇಳಿದ್ದಾರೆ. ಕೊರೊನಾ ರೋಗ ಲಕ್ಷಣಗಳ ಪಟ್ಟಿಯನ್ನು ಪರಿಷ್ಕರಿಸುವಂತೆ ಸೂಚಿಸಿದ್ದಾರೆ.
ಕೊರೊನಾ ವೈರಸ್ ಆರಂಭಿಕ ಹಂತದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಅಥವಾ ಉಸಿರಾಟದಿಂದ ಮೂಗು ಹಾಗೂ ಬಾಯಿಯಿಂದ ಹರಡುತ್ತದೆ ಎಂದು ಇದುವರೆಗೂ ಹೇಳಲಾಗಿತ್ತು. ಆದರೆ ಇದು ಪ್ರಾಥಮಿಕ ಹಂತದಲ್ಲಿ ಮಾತ್ರ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Advertisement

ಕರೊನಾ ವೈರಸ್‌ ಹರಡಲು ಇರುವ ಕಾರಣಗಳ ಪೈಕಿ ಅತಿಮುಖ್ಯವಾದದ್ದು, ಕೆಮ್ಮುವುದು ಹಾಗೂ ಸೀನುವುದು. ಸೋಂಕಿತ ವ್ಯಕ್ತಿಯಿಂದ ಕೆಮ್ಮಿದಾಗ ಅಥವಾ ಸೀನಿದಾಗ ಹೊರಡುವ ಚಿಕ್ಕಚಿಕ್ಕ ಹನಿಗಳು ಬೇರೊಬ್ಬರಿಗೆ ಹರಡಿ ಅದರಿಂದ ಸೋಂಕು ತಗಲುವುದಾಗಿ ಇಲ್ಲಿಯವರೆಗೂ ನಡೆಸಿರುವ ಅಧ್ಯಯನದಲ್ಲಿ ತಿಳಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಅದನ್ನೇ ಹೇಳುತ್ತಿದೆ.

ಆದರೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ವಿಜ್ಞಾನಿಗಳ ತಂಡ ಇದಕ್ಕಿಂತಲೂ ಆತಂಕಕಾರಿ ಎನ್ನುವಂಥ ವರದಿಯನ್ನು ಹೊರತಂದಿದ್ದು, ಅದನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಂದಿಟ್ಟಿದ್ದಾರೆ. 32 ದೇಶಗಳ 239 ವಿಜ್ಞಾನಿಗಳ ತಂಡ ನಡೆಸಿರುವ ಈ ಅಧ್ಯಯನದಿಂದ ಹೊರಬಂದಿರುವ ವಿಷಯ ಇದಾಗಿದೆ.
ಅದೇನೆಂದರೆ, ಕರೊನಾ ಸೋಂಕು ಗಾಳಿಯಲ್ಲಿಯೇ ತೇಲಾಡುತ್ತಿದೆ.ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಸೋಂಕು ಕೊಠಡಿಯಲ್ಲಿ ದೀರ್ಘಕಾಲ ಇರಬಲ್ಲದು ಅಥವಾ ಬಹುದೂರದವರೆಗೆ ಸಾಗಬಲ್ಲದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಮೂಲಕ ಹಲವಾರು ಜನರಿಗೆ ಸೋಂಕಿತರ ಸಂರ್ಪಕ ಇಲ್ಲದೇ ಇದ್ದರೂ ಸೋಂಕು ಕಂಡು ಬರುತ್ತಿದೆ ಎಂದು ವರದಿಯಲ್ಲಿ ವಿವರಿಸಿದ್ದಾರೆ.