ತಿಂಗಳಲ್ಲಿ 24 ಗಂಟೆ ಚಪ್ಪಲಿ ಧರಿಸಿ – 4 ಲಕ್ಷ ರೂ. ಸಂಬಳ ಪಡೆಯಿರಿ

Updated: Thursday, January 14, 2021, 09:54 [IST]

ತಿಂಗಳಲ್ಲಿ 24 ಗಂಟೆ ಚಪ್ಪಲಿ ಧರಿಸಿ – 4 ಲಕ್ಷ ರೂ. ಸಂಬಳ ಪಡೆಯಿರಿ

 

Advertisement

ನೀವು ಕೆಲಸ ಹುಡುಕುತ್ತಿದ್ದೀರಾ, ಇಲ್ಲಿದೆ ಅದ್ಭುತ ಅವಕಾಶ. ಫುಟ್‍ವೇರ್ ಕಂಪನಿಯೊಂದು ಕೆಲಸದ ಜಾಹೀರಾತು ಪ್ರಕಟಿಸಿದ್ದು, ತಿಂಗಳಲ್ಲಿ 24 ಗಂಟೆಗಳ ಕಾಲ ಚಪ್ಪಲಿ ಧರಿಸಿದರೆ 4 ಲಕ್ಷ ರೂ. ಸಂಬಳ ನೀಡುವುದಾಗಿ ಘೋಷಿಸಿದೆ.

ಬ್ರಿಟನ್‍ನ ಬೆಡ್‍ರೂಮ್ ಅಥ್ಲೆಟಿಕ್ಸ್ ಸಂಸ್ಥೆ ಈ ಭರ್ಜರಿ ಕೆಲಸ ನೀಡುತ್ತಿದ್ದು, ‘ಸ್ಲಿಪ್ಪರ್ ಟೆಸ್ಟರ್’ ಕೆಲಸಕ್ಕೆ ಅರ್ಜಿ ಆಹ್ವಾನಿಸಿದೆ. ಇದಕ್ಕಾಗಿ ಆಕರ್ಷಕ ಸಂಬಳವನ್ನು ಸಹ ಘೋಷಿಸಿದೆ. ಕಂಪನಿಯ ಇತ್ತೀಚಿನ ಹೊಸ ಚಪ್ಪಲಿ ಹಾಗೂ ಶೂಗಳ ವಿನ್ಯಾಸ ಪರೀಕ್ಷಿಸಲು ಹಾಗೂ ಪರಿಶೀಲಿಸಲು ಮುಂದಾಗಿದ್ದು, ಇದಕ್ಕಾಗಿ ಸ್ಲಿಪ್ಪರ್ ಟೆಸ್ಟರ್ಸ್ ಗಳನ್ನು ಕೆಲಸಕ್ಕೆ ಆಹ್ವಾನಿಸಿದೆ.

 

Advertisement

ಸ್ನೇಹಶೀಲ ಪಾದರಕ್ಷೆಗಳ ಬಗ್ಗೆ ನಿಮ್ಮ ಹೊಸ ತಜ್ಞರ ಒಳನೋಟಕ್ಕಾಗಿ ಹಣ ಪಡೆಯುವ ಕನಸು ಇದ್ದರೆ, ನೀವು ಸ್ಲಿಪ್ಪರ್ ಪರೀಕ್ಷಕರಾಗಿ ಅರ್ಜಿ ಸಲ್ಲಿಸಬಹುದು ಮತ್ತು ಪಾತ್ರಕ್ಕಾಗಿ ಶೂ-ಇನ್ ಆಗಿರಬಹುದು.

ಆದರೆ ಸಂಸ್ಥೆ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷನಿಗೆ ಮಾತ್ರ ಅವಕಾಶ ನೀಡುತ್ತಿದ್ದು, ಕೆಲಸಕ್ಕೆ ಆಯ್ಕೆಯಾದವರು ಕಂಪನಿ ನೀಡುವ ಚಪ್ಪಲಿಗಳನ್ನು ತಿಂಗಳಿಗೆ ಕೇವಲ ಎರಡು ದಿನ, ಪ್ರತಿ ದಿನ 12 ಗಂಟೆಗಳ ಕಾಲ ಧರಿಸಬೇಕು. ಹೀಗೆ ಒಂದು ವರ್ಷ ಕೆಲಸ ಮಾಡಬೇಕು. ಬಳಿಕ ತಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಬೇಕು. ಸಂಸ್ಥೆ ಅವರಿಗೆ ಪ್ರತಿ ತಿಂಗಳು ನಾಲ್ಕು ಲಕ್ಷ ರೂ. ಸಂಬಳ ನೀಡಲಿದೆ.

ಆಸಕ್ತರು ಬೆಡ್‍ರೂಮ್ ಅಥ್ಲೆಟಿಕ್ಸ್ ವೆಬ್‍ಸೈಟ್‍ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ ನೀವು ಈ ಕೆಲಸಕ್ಕೆ ಯಾಕೆ ಸೂಕ್ತ ವ್ಯಕ್ತಿ ಎಂಬ ಕಾರಣವನ್ನು ನೀಡಬೇಕಿದೆ. ಬಳಿಕ ಸಂಸ್ಥೆ ಇಬ್ಬರನ್ನು ಮಾತ್ರ ಆಯ್ಕೆ ಮಾಡಲಿದೆ.