ಎರಡನೇ ಮದುವೆ ಮಾಡ್ಕೊಂಡ್ರ ನಟ ನಿರ್ದೇಶಕ ಪ್ರಭುದೇವ್..? ಯಾರ್ ಗೊತ್ತಾ ವಿಡಿಯೋ ಇಲ್ನೋಡಿ..!

Updated: Sunday, November 22, 2020, 13:10 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ನಟ-ನಿರ್ದೇಶಕ ಪ್ರಭುದೇವರು 1995 ರಲ್ಲಿ ಮೊದಲನೇ ಮದುವೆ ಮಾಡಿಕೊಂಡಿದ್ದರು. ಈ ದಂಪತಿಗೆ ಮೂರು ಮಕ್ಕಳು ಕೂಡ ಇದ್ದೂ, 2011ರಲ್ಲಿ ಪ್ರಭುದೇವ್ ಅವರು ಹೇಮಲತಾ ಅವರ ಜೊತೆ ಕೆಲ ವಿಷ್ಯಯಗಳಿಂದ ವಿಚ್ಛೇದನ ಮಾಡಿಕೊಂಡಿದ್ದರು. ಇದಾದ ಬಳಿಕ ನಟಿ ನಯನತಾರ ಅವರ ಜೊತೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬಂದಿದ್ದು,  

Advertisement

ಈ ವಿಷಯ ಕೂಡ ಅಲ್ಲಿಗೆ ನಿಂತುಹೋಗಿತ್ತು.ಆದರೆ ಇದೀಗ ರಾಷ್ಟ್ರೀಯ ಮಾಧ್ಯಮವೊಂದರ ಮೂಲಕ, ನಟ ನಿರ್ದೇಶಕ, ಪ್ರಭುದೇವ ಅವರಿಗೆ ಎರಡನೇ ಮದುವೆ ಕೂಡ ಮುಗಿದುಹೋಗಿದೆ, ಎನ್ನುವ ಇನ್ನೊಂದು ಸುದ್ದಿಯೊಂದು ತಿಳಿದುಬಂದಿದೆ. ಹೌದು ಅಷ್ಟಕ್ಕೂ ಪ್ರಭುದೇವ ಅವರು ಎರಡನೇ ಮದುವೆ ಮಾಡಿಕೊಂಡ ಯುವತಿ ಯಾರೆಂಬುದು ಸಾಕಷ್ಟು ಜನರಿಗೆ ಗೊತ್ತಿಲ್ಲ. ಹೌದು ಇತ್ತೀಚಿಗಷ್ಟೇ ಪ್ರಭುದೇವರು ಮುಂಬೈನಲ್ಲಿ ಬೆನ್ನುನೋವಿನ ಕಾರಣಕ್ಕೆ ಫಿಸಿತೆರಪಿ ಚಿಕಿತ್ಸೆ ಪಡೆಯಲು ಹೋಗಿದ್ದರು.ಅದೇ ವೇಳೆ ಫಿಸಿತೆರಪಿಸ್ಟ್ ಆದ, ಬಿಹಾರ ಮೂಲದ ಒಬ್ಬ ಯುವತಿಯನ್ನು, ನಟ ಪ್ರಭುದೇವ ಅವರು ಅಲ್ಲಿಯೇ ಇಷ್ಟಪಟ್ಟು ತದನಂತರ ಡೇಟ್ ಕೂಡ ಮಾಡಿ ಇತ್ತೀಚಿಗಷ್ಟೇ ಮದುವೆಯಾಗಿದ್ದಾರೆ  

Advertisement

ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಮತ್ತು ಈ ಜೋಡಿ ಸದ್ಯ ಚೆನ್ನೈನಲ್ಲಿ ನೆಲೆಸಿದೆ ಎಂಬುದಾಗಿ ಕೇಳಿಬಂದಿದೆ. ಆದರೆ ಇದರ ಬಗ್ಗೆ ಪ್ರಭುದೇವ್ ಅವರು, ಎಲ್ಲಿಯೂ ಅಧಿಕೃತವಾಗಿ ಯಾವ ವಿಷಯವನ್ನು ತಿಳಿಸಿಲ್ಲ. ಹೌದು ಈ ಮೇಲಿನ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮತ್ತು ಪ್ರಭುದೇವ್ ಅವರ, ಈ ಎರಡನೇ ಮದುವೆ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಜೊತೆಗೆ ಶೇರ್ ಮಾಡಿ ಧನ್ಯವಾದಗಳು.