ರೇವಣ್ಣರಿಗೆ ಕೊರೋನಾ ಭಯ- ನಾಲ್ವರು ಗನ್ ಮ್ಯಾನ್ ಗಳಿಗೆ ಪಾಸಿಟಿವ್

Updated: Tuesday, June 30, 2020, 17:01 [IST]


ರೇವಣ್ಣರಿಗೆ ಕೊರೋನಾ ಭಯ- ನಾಲ್ವರು ಗನ್ ಮ್ಯಾನ್ ಗಳಿಗೆ ಪಾಸಿಟಿವ್
ಎಚ್ ಡಿ ರೇವಣ್ಣನವರ ಒಂಬತ್ತು ಗನ್ ಮ್ಯಾನ್ ಗಳನ್ನು ಪರೀಕ್ಷೆ ಮಾಡಲಾಗಿದ್ದು ಅದರ ವರದಿ ಇಂದು ಬಂದಿದೆ. ಅವರಲ್ಲಿ ನಾಲ್ಕು ಜನ ಗನ್ ಮ್ಯಾನ್ ಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ತಕ್ಷಣ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ. ಇದರಿಂದ ಎಚ್‌ಡಿ ರೇವಣ್ಣನವರಿಗೂ ಕೊರೊನಾ ಭಯ ಶುರುವಾಗಿದ್ದು ಅವರೂ ಕೂಡ ಪರೀಕ್ಷೆ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.

 

ಇಂದು ಹಾಸನದಲ್ಲಿ 15 ಕೊರೊನಾ ಪಾಸಿಟಿವ್ ಪ್ರಕರಣಗಳು ಬಂದಿವೆ ಎಂದು ಹಾಸನದ ಡಿಎಚ್‍ಒ ಸತೀಶ್ ಹೇಳಿದ್ದಾರೆ. ಹೊಳೆನರಸೀಪುರ ತಾಲೂಕು ಒಂದರಲ್ಲೇ 11 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 11 ಜನ ಪೊಲೀಸರಲ್ಲಿ ನಾಲ್ಕು ಜನ ಪೊಲೀಸರಿಗೆ ಪಾಸಿಟಿವ್ ಬಂದಿದೆ. ನಾಲ್ಕು ಜನ ಪೊಲೀಸರಲ್ಲಿ ಮೂವರು ಗಂಟಲು ದ್ರವ ಪರೀಕ್ಷೆಗೆ ತೆಗೆದುಕೊಂಡ ನಂತರ ಬೆಂಗಳೂರಿಗೆ ಹೋಗಿದ್ದಾರೆ. ಹೀಗಾಗಿ ಮೂವರು ಬೆಂಗಳೂರಿನಲ್ಲಿಯೇ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ..