ಡ್ರಗ್ಸ್​ ದಂಧೆಯ ಕಿಂಗ್​ಪಿನ್​ ಜತೆ ಐಂದ್ರಿತಾ ಪೋಸ್.! ಈ ಒಂದು ಕಾರಣದಿಂದ ತಗಲಾಕಿಕೊಂಡರಾ?

Updated: Wednesday, September 16, 2020, 13:02 [IST]

ಹೌದು ರಾಜ್ಯದಲ್ಲಿ ಕೇಳಿಬರುತ್ತಿರುವ ಡ್ರಗ್ಸ್ ದಂಧೆಯ ವಿಚಾರ ದಿನದಿಂದ ದಿನಕ್ಕೆ ಎಷ್ಟು ಅಗೆದರೂ ಒಳಗೆ ಹೋಗುತ್ತಿದೆ. ಇತ್ತೀಚಿಗಷ್ಟೇ ನಟಿ ರಾಗಿಣಿ ಕೂಡ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ,ಸಿಸಿಬಿ ಅಧಿಕಾರಿಗಳ ವಶದಲ್ಲಿದ್ದು, ವಿಚಾರಣೆ ನಡೆಸಿ, ಕೋರ್ಟಿಗೆ ಸಬ್ಮಿಟ್ ಮಾಡಿದಾಗ ನ್ಯಾಯಾಂಗದಲ್ಲಿ 14 ದಿನ ಜೈಲಿಗೆ ಹಾಕುವ ಹಾಗೆ ಆದೇಶ ನೀಡಿದರು. ಮತ್ತು ಸಂಜನಾಳನ್ನು ಸಿಸಿಬಿ ಕಸ್ಟಡಿಗೆ ಇನ್ನಷ್ಟು ವಿಚಾರಣೆ ಮಾಡಲು ಹೇಳಿದ್ದಾರೆ.. 

Advertisement

ಜೊತೆಗೆ ಈಗ ಬಂದಿರುವ ಮಾಹಿತಿ ಪ್ರಕಾರ, ನಟಿ ಐಂದ್ರಿತಾ ರೈ ಮತ್ತು ದಿಗಂತ್ ಅವರಿಗೂ ಕೂಡ ಸಿಸಿಬಿ ಅಧಿಕಾರಿಗಳು ನೋಟಿಸ್ ಕಳಿಸಿದ್ದು, ಇದೆ ಡ್ರಗ್  ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಿಸಿಬಿ ಕಚೇರಿಗೆ ಹಾಜರಾಗಲು ಹೇಳಿದ್ದರು. ಜೊತೆಗೆ ಈಗ ನಟಿ ಐಂದ್ರಿತಾಳ ಒಂದು ಫೋಟೋ ಕೂಡ ಡ್ರಗ್ಸ್ ಕಿಂಗ್ಪಿನ್ ಶೇಕ್ ಫಾಜಿಲ್ ಜೊತೆ ಕಂಡುಬಂದಿದ್ದು, ಕೆಸಿನೋ ಆಯೋಜನೆ ಮಾಡಿದ ಶೇಕ್ ಫಾಝಿಲ್ ಜೊತೆ ಆ ಸಮಯದಲ್ಲಿ ನಟಿ ಐಂದ್ರಿತಾ ರೈ ಕೂಡ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ... 

ಮತ್ತು ಈ ಫೋಟೋ ನೋಡಿ ಸಿಸಿಬಿ ಅವರು ನೋಟೀಸ್ ಕಳುಹಿಸಲು ಮುಖ್ಯ ಕಾರಣ ಎನ್ನಲಾಗಿದೆ. ಮತ್ತು ಕೆಲ ಆರೋಪಿಗಳು ಐಂದ್ರಿತಾ ರೈ ಅವರ ಬಗ್ಗೆ ಕೆಲ ಮಾಹಿತಿ ಬಹಿರಂಗಪಡಿಸಿದ ಕಾರಣಕ್ಕೆ ಸಿಸಿಬಿ ಅವರು ನೋಟಿಸ್ ಕಳಿಸಿ ವಿಚಾರಣೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ಈ ದಂಪತಿಗಳಿಬ್ಬರು ಸಿಸಿಬಿ ವಿಚಾರಣೆಯಲ್ಲಿ ಡ್ರಗ್ಸ್ ಗೆ ಸಂಬಂಧಿಸಿದ್ದೆ ಆದಲ್ಲಿ ,ಇವರಿಗೂ ಶಿಕ್ಷೆ ಆಗುವುದು ಖಚಿತ ಎನ್ನುತ್ತಿವೆ ಮೂಲಗಳು. ನಟಿ ಐಂದ್ರಿತಾ ಆಗಾಗ ಕೆಸಿನೋ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು ಎನ್ನುವ ಬಹಿರಂಗ ಮಾಹಿತಿ ಕೂಡ ಈ ಫೋಟೋ ಮೂಲಕ ತಿಳಿಯುತ್ತದೆ.