ಬಿಗ್ ಶಾಕ್ : ಶೂಟಿಂಗ್ ನಲ್ಲಿರುವಾಗಲೇ ಎದೆನೋವಿನಿಂದ ಖ್ಯಾತ ನಟ ಸಾವು

Updated: Sunday, October 18, 2020, 09:54 [IST]

ಬಿಗ್ ಶಾಕ್ : ಶೂಟಿಂಗ್ ನಲ್ಲಿರುವಾಗಲೇ ಎದೆನೋವಿನಿಂದ ಖ್ಯಾತ ನಟ ಸಾವು

Advertisement

ಚಿತ್ರರಂಗ ಈ ವರ್ಷ ಹಲವಾರು ಖ್ಯಾತ ನಟ ನಟಿಯರನ್ನು ಕಳೆದುಕೊಂಡಿದೆ. ಈ ವರ್ಷ ಅತಿ ಕೆಟ್ಟ ವರ್ಷವಾಗಿದೆ. ನಿನ್ನೆ ಧಾರಾವಾಹಿಯ ಶೂಟಿಂಗ್ ನಲ್ಲಿರುವಾಗಲೇ ಕನ್ನಡದ ಖ್ಯಾತ ಹಿರಿಯ ನಟ ಕೃಷ್ಣಮೂರ್ತಿ ನಾಡಿಗ್ ರವರು ಹೃದಯಾಘಾತದಿಂದ ನಿಧನರಾದರು.

Advertisement

ನಿನ್ನೆ ಧಾರಾವಾಹಿಯೊಂದರ ಶೂಟಿಂಗ್ ನಲ್ಲಿ ಇದ್ದರು. ಆಗ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ.ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾದರು.

ಕೃಷ್ಣಮೂರ್ತಿ ನಾಡಿಗ್ ಸುಮಾರು ಐವತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಲೇಖಕನಾಗಿ ಹಲವಾರು ಧಾರಾವಾಹಿಗಳಿಗೆ ಚಿತ್ರ ಕತೆ,ಸಂಭಾಷಣೆ ಬರೆದಿದ್ದಾರೆ. ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

Advertisement

ಇಂದು ಚಾಮರಾಜನಗರ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ನವೀನ್ ಕೃಷ್ಣ,ಟಿ ಎನ್ ಸೀತಾರಾಮ್ ಸೇರಿದಂತೆ ಅನೇಕ ನಿರ್ದೇಶಕರು, ನಟರು ಅವರಿಗೆ ಸಂತಾಪ ಸೂಚಿಸಿದ್ದಾರೆ.