ತನ್ನ ನಿಧನ ವಾರ್ತೆಯನ್ನು ತಾನೇ ಬರೆದು ಸತ್ತ ವ್ಯಕ್ತಿಯ ಪೋಸ್ಟ್ ವೈರಲ್

Updated: Sunday, October 18, 2020, 20:40 [IST]

ತನ್ನ ನಿಧನ ವಾರ್ತೆಯನ್ನು ತಾನೇ ಬರೆದು ಸತ್ತ ವ್ಯಕ್ತಿಯ ಪೋಸ್ಟ್ ವೈರಲ್

   

Advertisement

ಇದೊಂದು ವಿಚಿತ್ರ ಘಟನೆ. ವ್ಯಕ್ತಿ ಮೃತಪಟ್ಟ ಮೇಲೆ ಅವರ ನಿಧನದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ತಮ್ಮ ನಿಧನದ ಸುದ್ದಿಯನ್ನು ತಾವೇ ಬರೆದಿದ್ದಾರೆ. ಅವರು ಮೃತಪಟ್ಟ ಮೇಲೆ ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

   

Advertisement

ಇಂಥದ್ದೊಂದು ಅಪರೂಪದ ರೀತಿಯಲ್ಲಿ ನಿಧನದ ಸುದ್ದಿ ಮಾಡಿದವರು ಚೆನ್ನೈನ ಎಜ್ಜಿ ಕೆ. ಉಮಾಮಹೇಶ್​ ಎನ್ನುವವರು. ತಮ್ಮ ನಿಧನ ವಾರ್ತೆಯನ್ನು ತಾವೇ ಬರೆದಿಟ್ಟಿರುವ ಈ 72 ವರ್ಷದ ವ್ಯಕ್ತಿ ಇದೀಗ ಮೃತಪಟ್ಟಿದ್ದಾರೆ. ಅವರೇ ಬರೆದಿರುವ ನಿಧನದ ಸುದ್ದಿ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿದೆ.

 

ತಮ್ಮ ನಿಧನದ ಸುದ್ದಿಯನ್ನು ಬರೆದು ಅದನ್ನು ತಮ್ಮ ಕುಟುಂಬದವರಿಗೆ ನೀಡಿದ್ದ ಎಜ್ಜಿ, ತಾವು ಮೃತಪಟ್ಟ ಮೇಲೆ ಅದನ್ನು ಫೇಸ್​ಬುಕ್​, ಟ್ವಿಟರ್​ನಲ್ಲಿ ಪ್ರಕಟಿಸುವಂತೆ ಹೇಳಿದ್ದರು.

   

Advertisement

ಅದರಂತೆ ಅವರ ಕುಟುಂಬದವರು ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಅವರು ಬರೆದಿರುವುದು ಇಷ್ಟು…
ಇದು ಎಜ್ಜಿ ಕೆ. ಉಮಾಮಹೇಶ್ ಅವರಿಂದ ಸ್ವಯಂ-ಲಿಖಿತ ನಿಧನವಾರ್ತೆ. ಜನ್ಮಜಾತ ವಿಲಾಸಿಯಾಗಿರುವ, ಸದಾ ಒಂದಿಲ್ಲೊಂದು ಅನ್ವೇಷಣೆಯಲ್ಲಿ ತೊಡಗಿಕೊಂಡಿರುವ, ಜೀವಿತಾವಧಿ ಪೂರ್ತಿಯಾಗಿ ಹೌಸ್​ಹಸ್​ಬಂಡ್​ ಹಾಗೂ ಹೋಮ್​ ಮೇಕರ್​ ಆಗಿ ಕೆಲಸ ಮಾಡಿರುವ, ರಂಗಭೂಮಿ ಮತ್ತು ಚಿತ್ರದ ನಟನಾಗಿರುವ, ಅಂತಾರಾಷ್ಟ್ರೀಯ ಕಾರು ರ್ಯಾಲಿ ಚಾಲಕ ಆಗಿರುವ, ಸಂಘಟಕ, ವಿಚಾರವಾದಿ, ಮಾನವತಾವಾದಿ, ನಾಸ್ತಿಕ, ಮುಕ್ತ ಚಿಂತಕ.. ಹೀಗೆ . ಇನ್ನೂ ಏನೇನೋ… ಆಗಿರುವ ಇವರು ನಿಧನರಾಗಿದ್ದಾರೆ.

 

ಈಗ ಮುಂದೆ ಹೇಳುತ್ತಿರುವ ವಿಷಯ ನನ್ನ ಶತ್ರುಗಳಿಗೆ, ನನ್ನ ಮಿತ್ರರಿಗೆ ಹಾಗೂ ಶತ್ರು-ಮಿತ್ರದ ನಡುಭಾಗದಲ್ಲಿ ಇರುವವರಿಗೆ. ಅದೇನೆಂದರೆ, ನನ್ನ ರೋಚಕ ಜೀವನವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನಾನು ಕೊಡಿಸುವ ಪಾರ್ಟಿ ಇಂದಿಗೆ ಮುಗಿದಿದೆ. ನನ್ನಂದಿ ಇದುವರೆಗೆ ಪಾರ್ಟಿ ಪಡೆದುಕೊಂಡಿರುವವರು ಎಲ್ಲರೂ ಹ್ಯಾಂಗ್​ಓವರ್​ನಿಂದ ಹೊರಕ್ಕೆ ಬಂದಿರುವುದಾಗಿ ನಾನು ಭಾವಿಸುತ್ತೇನೆ. ಇನ್ನು ಮುಂದೆ ಆ ಸಮಯ ಬರುವುದಿಲ್ಲ. ಚೆನ್ನಾಗಿ ಬದುಕು, ನಿಮ್ಮ ಜೀವನವನ್ನು ಆನಂದಿಸಿ ಮತ್ತು ಪಾರ್ಟಿಯನ್ನು ಮುಂದುವರಿಸಿ. ಚಿಯರ್ಸ್​ ಮತ್ತು ಬೈ ಬೈ… ಇತಿ ನಿಮ್ಮ ಇಜ್ಜಿ…

ಈ ಪೋಸ್ಟ್​ ನೋಡಿ ಅನೇಕ ಮಂದಿ ಕಂಬನಿ ಮಿಡಿದಿದ್ದಾರೆ. ಇಜ್ಜಿಯವರ ಹೃದಯವೈಶಾಲ್ಯತೆಯ ಹಲವಾರು ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಈಗ ಈ ನಿಧನವಾರ್ತೆ ಭಾರಿ ವೈರಲ್​ ಆಗಿದೆ.

ಈ ಹಿಂದೆ ತಮ್ಮ ವಿಂಟೇಜ್​ ಕಾರು ಹಾನಿಗಳಗಾದ ಸಂದರ್ಭದಲ್ಲಿಯೂ ಅದರ ನಿಧನವಾರ್ತೆಯನ್ನು ಅತ್ಯಂತ ನೋವಿನಿಂದ ಬರೆದು ಶೇರ್​ ಮಾಡಿಕೊಂಡಿದ್ದರು.


ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಅಂದರೆ ನೀವು ಅಂದುಕೊಂಡ ಅಂತಹ ಕೆಲಸವು ನಿಮ್ಮ ಕೈಹಿಡಿಯಬೇಕು ಎಂದರೆ ಒಂದು ಸಂಕಲ್ಪವನ್ನು ಮಾಡಿ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಈ ಲೇಖನದಲ್ಲಿ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ