ನಾನು ನಗಲು ಚಿರು ಕಾರಣ ಎಂದ ಮೇಘನಾ ರಾಜ್..! ಪತ್ನಿಯ ಭಾವನಾತ್ಮಕ ಸಾಲುಗಳನ್ನ ಒಮ್ಮೆ ಓದಿ..!

Updated: Tuesday, July 7, 2020, 14:09 [IST]

ನಾಯಕ ನಟ ಚಿರಂಜೀವಿ ಸರ್ಜಾ ಅವರು ಹೋದ ತಿಂಗಳು ಜೂನ್ 7 ರಂದು ಹೃದಯಾಘಾತವಾಗಿ ಮೃತಪಟ್ಟಿದ್ದರು. ತಮ್ಮ ಧ್ರುವ ಸರ್ಜಾ ಅವರ ಆಸೆಯಂತೆ ಅಣ್ಣನ ಅಂತ್ಯಕ್ರಿಯೆಯನ್ನು ನೆಲಗುಳಿಯ ಫಾರ್ಮ್ ಹೌಸ್‍ನಲ್ಲಿ ನೆರವೇರಿಸಿದ್ದರು. ಯುವ ನಾಯಕ ನಟ ಚಿರಂಜೀವಿ ಸರ್ಜಾ ಈಗಾಗಲೇ ಎಲ್ಲರಿಂದ ದೂರ ಆಗಿದ್ದಾರೆ ಮತ್ತು ದೈಹಿಕವಾಗಿ ಕೂಡ ದೂರವಾಗಿ ಇಂದಿಗೆ ತಿಂಗಳು ಆಗಿಹೋಗಿದೆ.    

Advertisement

ಪತ್ನಿ ಮೇಘನಾ ರಾಜ್ ಅವರು, ಗಂಡ ಚಿರುವಿನ ಫೋಟೋ ಮತ್ತು ಸ್ನೇಹಿತರು, ಆಪ್ತರು ಎಲ್ಲರೂ ಸೇರಿ, ಸ್ವಲ್ಪ ನಗುಮುಖದ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದಾರೆ ಜೊತೆಗೆ ಏನೆಲ್ಲಾ ಬರೆದುಕೊಂಡಿದ್ದಾರೇ ಗೊತ್ತಾ ಮುಂದೆ ಓದಿ. “ನನ್ನ ಪ್ರೀತಿಯ ಚಿರು…ಚಿರು ಒಂದು ಸೆಲೆಬ್ರೇಷನ್ ಆಗಿದೆ. ಈ ಆಚರಣೆ ಯಾವಾಗಲೂ ಇರುತ್ತದೆ. ಈಗಲೂ ಮತ್ತು ಮುಂದೆಯೂ ಇರುತ್ತದೆ. ಬೇರೆ ಯಾವ ರೀತಿಯನ್ನು ನೀನು ಇಷ್ಟಪಡುವುದಿಲ್ಲ ಎಂಬುದು ನನಗೆ ತಿಳಿದಿದೆ. ಆದರೆ ನಾನು ನಗಲು ಕಾರಣ ಚಿರು,    

“ಅವರು ನನಗೆ ಕೊಟ್ಟಿದ್ದು ಅತ್ಯಂತ ಅಮೂಲ್ಯವಾದುದ್ದು ನನ್ನ ಕುಟುಂಬ…ನಾವು ಮಾತ್ರವೇ. ನಾವು ಯಾವಾಗಲೂ ಒಟ್ಟಿಗೆ ಇರುತ್ತೇವೆ ಬೇಬಿಮಾ. ಪ್ರತಿ ದಿನವೂ ನೀವು ಇಷ್ಟಪಡುವ ರೀತಿಯಲ್ಲಿಯೇ ಇರುತ್ತೇವೆ. ಪ್ರೀತಿ, ನಗು, ಕುಚೇಷ್ಟೇಗಳು, ಪ್ರಾಮಾಣಿಕತೆ ಮತ್ತು ಮುಖ್ಯವಾಗಿ ಒಗ್ಗಟ್ಟಿನಿಂದ ಒಟ್ಟಾಗಿರುತ್ತೇವೆ. ನಾವು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ ಬೇಬಿಮಾ” ಎಂದು ತುಂಬಾ ನೋವಿನ ಸಾಲುಗಳನ್ನು ಹೇಣ್ತಿ ಮೇಘನಾ ಬರೆದುಕೊಂಡಿದ್ದಾರೆ..