ತಾಯಿಯ ಬೆತ್ತಲೆ ಫೋಟೋವನ್ನು ತೆಗೆದ ಎರಡು ವರ್ಷದ ಮಗಳು ಎಲ್ಲರಿಗೂ ಕಳಿಸಿಬಿಟ್ಟಳು

Updated: Saturday, October 17, 2020, 17:50 [IST]

    

ತಾಯಿಯ ಬೆತ್ತಲೆ ಫೋಟೋವನ್ನು ತೆಗೆದ ಎರಡು ವರ್ಷದ ಮಗಳು ಎಲ್ಲರಿಗೂ ಕಳಿಸಿಬಿಟ್ಟಳು

     

ಎರಡು ವರ್ಷದ ಹೆಣ್ಣು ಮಗುವೊಂದು ಮೊಬೈಲ್​ನಲ್ಲಿ ಅಮ್ಮನ ಬೆತ್ತಲೆ ಫೋಟೋಗಳನ್ನು ಕ್ಲಿಕ್ಕಿಸಿ, ಅಮ್ಮನ ಸಹೋದ್ಯೋಗಿಗಳು ಸೇರಿದಂತೆ ಕಾಂಟ್ಯಾಕ್ಟ್​ ಲೀಸ್ಟ್​ನಲ್ಲಿದ್ದ ಎಲ್ಲರಿಗೂ ಕಳುಹಿಸಿರುವ ವಿಚಿತ್ರ ಘಟನೆ ಅಮೆರಿಕದ ಓಹಿಯೋ ನಗರದದಲ್ಲಿ ನಡೆದಿದೆ.

     

ಓಹಿಯೋ ನಿವಾಸಿ ಎಮಿಲಿ ಸ್ಮಿತ್ (30) ಕಳೆದ ಭಾನುವಾರ ತನ್ನ ಮೊಬೈಲ್​ ಅನ್ನು ಆಟವಾಡಲೆಂದು ಮಗಳ ಕೈಗೆ ನೀಡಿದ್ದರು. ಇತ್ತ ಸ್ನಾನ ಮುಗಿಸಿದ್ದ ಎಮಿಲಿ, ಮಗಳ ಸಮೀಪವೇ ಬೆತ್ತಲೆಯಾಗಿ ನಿಂತು ತಲೆಗೂದಲು ಒಣಗಿಸುತ್ತಿದ್ದರು.


ಆಗ ಅವಳ ಎರಡು ವರ್ಷದ ಮಗಳು ತಾಯಿಯ ಬೆತ್ತಲೆ ಚಿತ್ರವನ್ನು ಫೋಟೋ ತೆಗೆದು ಸ್ನ್ಯಾಪ್ ಚಾಟ್ನಲ್ಲಿನ ಸುಮಾರು ಹದಿನೈದು ಸ್ನೇಹಿತರಿಗೆ ಕಳಿಸಿದ್ದಾಳೆ.

ಸ್ವಲ್ಪ ಸಮಯದ ನಂತರ ಮೊಬೈಲ್ ಹಿಡಿದ ತಾಯಿಗೆ ಬೆತ್ತಲೆ ಚಿತ್ರ ಕಳಿಸಿದ್ದಕ್ಕಾಗಿ ಧನ್ಯವಾದಗಳು ಎಂಬ ಮೆಸೇಜ್ ಬಂದಿದೆ.ಏನಾಗಿದೆ ಎಂದು ಓಪನ್ ಮಾಡಿ ನೋಡಿದಾಗ ಶಾಕ್ ಆಗಿದ್ದಾಳೆ.

ತಾಯಿಯ ಕಾಂಟ್ಯಾಕ್ಟ್​ ಲೀಸ್ಟ್​ನಲ್ಲಿದ್ದ ಸಹೋದ್ಯೋಗಿಗಳು, ಯೂನಿವರ್ಸಿಟಿ ಸ್ನೇಹಿತರು ಮತ್ತು ಪರಿಚಯಸ್ಥರು ಸೇರಿದಂತೆ ಸುಮಾರು 15 ಮಂದಿಗೆ ಮಗಳು ಅಮ್ಮನ ಬೆತ್ತಲೆ ಫೋಟೋಗಳನ್ನು ಕಳುಹಿಸಿದ್ದಾಳೆ. ಇದಾದ ಬೆನ್ನಲ್ಲೇ ಎಮಿಲಿ ಮಗುವಿನ ಅಚಾತುರ್ಯದ ಬಗ್ಗೆ ತಿಳಿಸಿ ಎಲ್ಲರ ಕ್ಷಮೆಯಾಚಿಸಿದ್ದಾರೆ. ಕೆಲವರು ಬೆತ್ತಲೆ ಫೋಟೋ ಬದಲು ಮನೆಯ ಸೀಲಿಂಗ್​ ಹಾಗೂ ಮಗುವಿನ ಕಾಲುಗಳ ಫೋಟೋ ಸ್ವೀಕರಿಸಿದ್ದಾಗಿ ಹೇಳಿದ್ದಾರೆ.

ಇನ್ನು ಮಗಳಿಂದ ತಾಯಿ ಅಷ್ಟೆಲ್ಲ ಮುಜುಗರ ಅನುಭವಿಸಿದರೂ ಆ ಬಗ್ಗೆ ಅಳುಕದೆ ಸಾಮಾಜಿಕ ಜಾಲತಾಣದಲ್ಲಿ ಧೈರ್ಯವಾಗಿ ಎಮಿಲಿ ಎಲ್ಲವನ್ನು ಹೇಳಿಕೊಂಡಿದ್ದಾರೆ. ಘಟನೆ ಬಗ್ಗೆ ಬರೆದುಕೊಂಡಿರುವ ಎಮಿಲಿ ನಿಜಕ್ಕೂ ತುಂಬಾ ಅವಮಾನ ಆದಂತಾಯಿತು. ಒಂದು ಕ್ಷಣ ಸತ್ತಂತಾಯಿತು. ಆದರೂ ತಿಳಿಯದೇ ಆದ ಘಟನೆಯಿಂದ ವಿಚಲಿತಗೊಳ್ಳಬಾರದೆಂದು ಸಮಾಧಾನ ಮಾಡಿಕೊಂಡೆ. ಎಲ್ಲರಿಗೂ ನಡೆದ ಘಟನೆಯನ್ನು ವಿವರಿಸಿ ಕ್ಷಮೆಯಾಚಿಸಿದೆ ಎಂದಿದ್ದಾರೆ.