ಉಪ್ಪು ತಿಂದವರು ನೀರು ಕುಡಿಯಲೇ ಬೇಕೆಂದು ಪುನೀತ್ ರಾಜ್ ಕುಮಾರ್ ಯಾರಿಗೆ ಹೇಳಿದರು. ನೋಡಿ ?

Updated: Sunday, October 18, 2020, 16:38 [IST]

ಇತ್ತೀಚಿಗೆ ಪುನೀತ್ ರಾಜಕುಮಾರ್ ಗಂಗಾವತಿಗೆ ಚಿತ್ರೀಕರಣಕ್ಕೆ ಆಗಮಿಸಿದ್ದ ವೇಳೆ ಪತ್ರಕರ್ತರೊಂದಿಂಗೆ ಸಂದರ್ಶನದ ವೇಳೆ ಏನೆಂದು ಹೇಳಿದ್ದಾರೆ ಇಲ್ಲಿ ನೋಡಿ. ಹೌದು ಕೆಲ ನಟಿಯರು ಡ್ರಗ್ಸ್ ದಂದೆಯಲ್ಲಿ ಸಿಲುಕಿ ಕೊಂಡಿರುವುದಕ್ಕೆ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ .ಕೋರೊನಾದಂತಹ ಸಂದರ್ಭದಲ್ಲಿ ಸಿನೆಮಾ ನಟ‌ನಟಿಯರಿಗೆ ಇದೆಲ್ಲ ಬೇಕಿತ್ತಾ ? ಇಡಿ ಜಗತ್ತು ಕೊರೊನಾ ರೋಗದಿಂದ ನರಳುವಾಗ ಡ್ರಗ್ಸ್ ನಂತಹ ಸಮಾಜ ವಿದ್ರೋಹಿ ಘಟನೆಯಿಂದ ಚಿತ್ರತಂಡ ತಲೆ ತಗ್ಗಿಸುವಂತಾಗಿದೆ. 

Advertisement

ಡ್ರಗ್ಸ್ ದಂಧೆಯಲ್ಲಿ ಎಂತಹ ಪ್ರಭಾವಶಾಲಿ‌ ಇದ್ದರೂ ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಉಪ್ಪು ತಿಂದವರು ನೀರು‌ ಕುಡಿಯಲೇ ಬೇಕೆಂದು ಚಿತ್ರ ನಟ ಪುನೀತ್ ರಾಜ್ ಕುಮಾರ್ ಹೇಳಿದರು.. ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಅಂಬ್ರೇಶ್, ಶಂಕರನಾಗ್ ಸೇರಿದಂತೆ ಕನ್ನಡ ಭಾಷೆ ನೆಲ, ಜಲದ ಬಗ್ಗೆ ಅಪಾರ ಗೌರವ ಹೊಂದಿದ ಕಲಾವಿದರಿಂದ ಇಡೀ ಭಾರತವೇ ಪ್ರೀತಿಸುವಂತೆ ನಡೆದುಕೊಂಡಿದ್ದಾರೆ. ಈಗ ಕೆಲ‌ ಸಿನೆಮಾ ಕಲಾವಿದರು ಡ್ರಗ್ಸ್ ದಂಧೆಯಲ್ಲಿರುವುದನ್ನು ಕಂಡರೆ ನೋವಾಗುತ್ತದೆ. ಸಿನೆಮಾಗಳಿಂದ ಯುವಜನರು ಪಾಠ ಕಲಿಯುತ್ತಾರೆ. 

Advertisement

ಕಳೆದ  7 ತಿಂಗಳಿಂದ ಕೊರೊನಾ ರೋಗದ ಪರಿಣಾಮ ಚಿತ್ರಕಲಾವಿದರು, ತಂತ್ರಜ್ಞರು ಕೆಲಸವಿಲ್ಲದೆ ಬಹಳ ಕಷ್ಟ ಅನುಭವಿಸಿದ್ದಾರೆ. ಇದೀಗ ಕೇಂದ್ರ ರಾಜ್ಯ ಸರಕಾರಗಳ ಮಾರ್ಗಸೂಚಿಯಂತೆ ಚಿತ್ರೀಕರಣ ಮತ್ತು ಸಿನೆಮಾ ಪ್ರದರ್ಶನಕ್ಕೆ ಅವಕಾಶ ದೊರಕಿದ್ದು ಕಲಾವಿದರಿಗೆ ನೆರವಾಗಿದೆ.

ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”