ರಾಧಿಕಾ ಪಂಡಿತ್ ಮೂರನೇ ಮಗುವಿಗೆ ಗರ್ಬಿಣಿಯೇ ? ಕುತೂಹಲ ಮೂಡಿಸಿದ ಯಶ್ ಪೋಸ್ಟ್

Updated: Tuesday, June 30, 2020, 09:46 [IST]

ರಾಧಿಕಾ ಪಂಡಿತ್ ಮೂರನೇ ಮಗುವಿಗೆ ಗರ್ಬಿಣಿಯೇ ? ಕುತೂಹಲ ಮೂಡಿಸಿದ ಯಶ್ ಪೋಸ್ಟ್
ರಾಧಿಕಾ ಪಂಡಿತ್ ಮತ್ತು ಯಶ್ ಇವರಿಬ್ಬರೂ ಕನ್ನಡದ ಸ್ಟಾರ್ ದಂಪತಿಗಳು. ಯಶ್ ತಮ್ಮ ಪತ್ನಿ ಮತ್ತು ಮಕ್ಕಳ ಬಗ್ಗೆ ಸದಾ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕುತ್ತಿರುತ್ತಾರೆ. ಅವರಿಗೆ ಇಬ್ಬರು ಮಕ್ಕಳಿದ್ದು ಇಬ್ಬರ ಹುಟ್ಟಿದ ಹಬ್ಬವನ್ನು ಗ್ರಾಂಡ್‌ ಆಗಿ ಆಚರಿಸಿದ್ದರು.

 
ಈಗ ಮೊನ್ನೆ ಯಶ್ ಲಾಕ್ಡೌನ್ ಕುರಿತು ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ನನ್ನ ಹೆಂಡತಿ ಕೂಡ ಲಾಕ್ಡೌನ್ ಮಾಡಿದ್ದಾಳೆ. ಪ್ರತಿ ದಿನ ರಾತ್ರಿ ಎಂಟು ಗಂಟೆಯ ಒಳಗೆ ಮನೆಯಲ್ಲಿ ಇರಬೇಕು. ಭಾನುವಾರ ಫುಲ್ ಲಾಕ್ಡೌನ್. ಆದಿನ ಪೂರ್ತಿ ಮನೆಯಲ್ಲಿ ಇರಬೇಕು ಎಂದು. ಇದು ಸರ್ಕಾರದ ಲಾಕ್ಡೌನ್ ಗೆ ಬೆಂಬಲ ಕೊಟ್ಟು ಯಶ್ ಈ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಅಭಿಮಾನಿಗಳು ತಿಳಿದುಕೊಂಡಿದ್ದರು.

 
ಈಗ ಆ ಪೋಸ್ಟ್ ಹಾಕಿದಾಗ ಒಂದು ಪೋಸ್ ಕೊಟ್ಟು ಫೋಟೋ ಹಾಕಿದ್ದರು . ಇದು ಹೊಸ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲಿ ನಟ ಯಶ್ ಮೂರು ಬೆರಳನ್ನು ಹಣೆಯ ಮೇಲೆ ಇಟ್ಟು ಪೋಸ್ ಕೊಟ್ಟಿದ್ದಾರೆ. ಇದಕ್ಕೆ ನಟಿ ರಾಧಿಕಾ ಪಂಡಿತ್ ಮೂರನೇ ಬಾರಿ ಗರ್ಭಿಣಿ ಆಗಿದ್ದಾರ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇದಕ್ಕೆ ರಾಧಿಕಾ ಪಂಡಿತ್ ನಗುತ್ತಲೇ ಉತ್ತರ ನೀಡಿದ್ದಾರೆ. ನಾನು ಗರ್ಭಿಣಿ ಆಗಿಲ್ಲ ಎಂದು ನಗುವ ಸಿಂಬಲ್ ಹಾಕಿ ಈ ವಿಷಯವನ್ನು ಸಹಜವಾಗಿ ತೆಗೆದುಕೊಂಡಿದ್ದಾರೆ.