ರಾಗಿಣಿ ಜೈಲಿಗೆ ಹೋಗಿದ್ದು ಏಕೆ ಗೊತ್ತಾ..? ಕಾರಣ ಇಲ್ಲಿದೆ ನೋಡಿ..!

Updated: Tuesday, September 15, 2020, 22:20 [IST]

ನಟಿ ಸಂಜನಾ ಮತ್ತು ನಟಿ ರಾಗಿಣಿ ದ್ವಿವೇದಿ ಅವರು ಈಗಾಗಲೇ ಈ ಮುಂಚೆ ಸಿಸಿಬಿ ಅವರ ಬಲೆಗೆ ಬಿದ್ದಿದ್ದು, ತದನಂತರ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರಿಗೂ ವಿಚಾರಣೆ ನಡೆಸಲಾಗಿತ್ತು. ನಿನ್ನೆಯಷ್ಟೇ ನಟಿ ರಾಗಿಣಿ ಅವರಿಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಸೇರಿಸಿದ್ದಾರೆ. ಜೊತೆಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಇನ್ನೊಂದು ವಿಷಯ ನಟಿ ರಾಗಿಣಿ ಅವರ ಬಗ್ಗೆ ಬಹಿರಂಗವಾಗಿ ಕೇಳಿಬರುತ್ತಿದೆ. ಹೌದು ಸಿಸಿಬಿ ಅಧಿಕಾರಿಗಳು ನಟಿ ರಾಗಿಣಿ ಅವರನ್ನು ವಿಚಾರಣೆ ಮಾಡುವ ವೇಳೆಯಲ್ಲಿ ರಾಗಿಣಿಯ ವಾಟ್ಸಪ್ ಚಾಟ್ ಮೂಲಕ ಸಿಕ್ಕ ಕೆಲ ಮಾಹಿತಿಗಳ ಪ್ರಕಾರ  ರಾಗಿಣಿ ಅರೆಸ್ಟ್ ಆಗಿ ಜೈಲು ಸೇರಲು ಇದೇ ಕಾರಣನಾ ಎನ್ನುವ ಮಾತುಗಳು ಕೇಳಿಬಂದಿವೆ.. 

Advertisement

ಹೌದು ನಟಿ ರಾಗಿಣಿ ಮತ್ತು ಸಂಜನಾ ಗಲ್ರಾನಿ ಅವರು ಈ ರೀತಿ ಡ್ರಗ್ ಪಾರ್ಟಿ ಹಮ್ಮಿಕೊಳ್ಳಬೇಕಾದಲ್ಲಿ ದೊಡ್ಡ ದೊಡ್ಡ ಐಷಾರಾಮಿ ಹೋಟೆಲ್ ಗಳನ್ನು ಬುಕ್ ಮಾಡಿಕೊಳ್ಳುತ್ತಿದ್ದರಂತೆ, ಮತ್ತು ಸಿಟಿಯ ಹೊರಗೆ ದೊಡ್ಡ ದೊಡ್ಡ ರೆಸಾರ್ಟ್ ಗಳಲ್ಲಿ ಈ ರೀತಿ ಪಾರ್ಟಿ ಮಾಡುತ್ತಿದ್ದರು ಎನ್ನುವ ಮಾಹಿತಿ ಸಿಸಿಬಿಗೆ ಗೊತ್ತಗಿದೆ. ಕೆಲವೊಮ್ಮೆ ಹೌಸ್ ಪಾರ್ಟಿಗಳನ್ನು ಕೂಡ ಆಯೋಜಿಸಿಕೊಂಡು , ಪಾರ್ಟಿ ಮುಗಿದ ನಂತರ ಖನ್ನ ಜೊತೆಗೆ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದರು ಎನ್ನುವ ಮಾಹಿತಿ ಕೂಡ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕಿದೆ. ಮತ್ತು ಇವರು ಡ್ರಗ್ಸ್ ಎನ್ನುವ ಪದ ಎಲ್ಲಿಯೂ ಬಳಸದೆ, ಅದು ಯಾವಾಗ ಬರುತ್ತೆ ?ಅದು ಎಲ್ಲಿದೆ ? ಇದು ಇಷ್ಟು ಕಮ್ಮಿಯಾಕಿದೆ ? ಮತ್ತು ಇಷ್ಟು ಲೇಟ್ ಯಾಕೆ? ಮತ್ತು ಅದರ ದುಡ್ಡೆಷ್ಟು ? ಎನ್ನುವ ಕೋಡ್ ವರ್ಡ್ ಪದಗಳನ್ನು ಬಳಸಿಕೊಂಡು ಡ್ರಗ್ಸ್ ವಿಚಾರವನ್ನು ಮಾತನಾಡುತ್ತಿದ್ದರಂತೆ. 

ಮತ್ತು ನಟಿ ರಾಗಿಣಿ ಅವರ ಆಪ್ತ ರವಿಶಂಕರ್ ಕೂಡ ಕೋಡ್ ವರ್ಡ್ ಪದಗಳನ್ನು ಹೆಚ್ಚಾಗಿ ಬಳಸುತ್ತಿದ್ದು, ಮೊದಲ ಹಂತದಲ್ಲಿ ಸ್ಟಪ್ 1 ಎಂಜಿ ಎನ್ನುವ ಹಾಗೆ ಮಾತನಾಡಿ ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದರು ಎಂದು ಕೇಳಿಬಂದಿದೆ. ಹಾಗಾಗಿ ಇವರಿಬ್ಬರ ವಾಟ್ಸಪ್ ಚಾಟ್ ಗಳನ್ನು ವೀಕ್ಷಣೆ ಮಾಡಿದ ಅಧಿಕಾರಿಗಳು ,ಈ ಮಾಹಿತಿಯನ್ನು ಇಟ್ಟುಕೊಂಡು ನಟಿ ರಾಗಿಣಿ ಜೈಲು ಸೇರುವಂತೆ ಮಾಡಿರಬಹುದು ಎನ್ನುವ ಸುದ್ದಿ  ಕೇಳಿಬಂದಿದೆ. ನಟಿ ಜೈಲಿಗೆ ಹೋಗಲು ಮುಖ್ಯ ಕಾರಣ ಇದು ಕೂಡ ಒಂದು ಎನ್ನಲಾಗಿದೆ..