ರವಿಚಂದ್ರನ್ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ

Updated: Thursday, January 14, 2021, 16:33 [IST]

ರವಿಚಂದ್ರನ್ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ

    

Advertisement

‘ಸಾಹೇಬ’ ಸಿನಿಮಾದ ಮೂಲಕ ಬೆಳ್ಳಿತೆರೆಯ ಮೇಲೆ ಮಿಂಚಿದ ‘ಬೃಹಸ್ಪತಿ’ ಮನುರಂಜನ್​, ಈಗ ‘ಪ್ರಾರಂಭ’ ಹಾಗೂ ‘ಮುಗಿಲ್​ಪೇಟೆ’ ಸಿನಿಮಾದ ಮೂಲಕ ಪ್ರೇಕ್ಷಕರನ್ನ ರಂಜಿಸಲು ಮುಂದಾಗಿದ್ದಾರೆ. ಇನ್ನು, ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದ ನಂತರ ಸುಕ್ಕ ಸೂರಿ, ರೆಬಲ್ ಸ್ಟಾರ್ ಸುಪುತ್ರ ಅಭಿಷೇಕ್ ಅಂಬರೀಶ್ ಅವರಿಗೆ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾವನ್ನ ಮಾಡುತ್ತಿದ್ದಾರೆ. ಈ ಸಂಕ್ರಾಂತಿ ಹಬ್ಬಕ್ಕೆ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಶೂಟಿಂಗ್ ಸ್ಪಾಟ್​​ಗೆ ತೆರಳಲಿದೆ.ಈಗ ಇದಕ್ಕೂ ಹೊಸ ವಿಷಯ ದುನಿಯಾ ಸೂರಿ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ನಂತರ ಕನಸುಗಾರನ ಪುತ್ರ ಮನುರಂಜನ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಅನ್ನೋದು. ಸೂರಿ ಸಿನಿಮಾದಲ್ಲಿ ಮನುರಂಜನ್ ನಟಿಸಲಿರುವ ಬಗ್ಗೆ ಸ್ವತಃ ಮನುರಂಜನ್ ಅವರೇ ಹೇಳಿಕೊಂಡಿದ್ದು, ಈ ವರ್ಷದ ಮಧ್ಯ ಭಾಗದಲ್ಲಿ ಸೂರಿ- ಮನುರಂಜನ್ ಸಿನಿಕಾಂಬೋ ಶುರುವಾಗೋ ಸಾಧ್ಯತೆ ಇದೆ.

    

Advertisement

ಇನ್ನೂ ಸಿಹಿ ಸುದ್ದಿ ಏನೆಂದರೆ ಮನೋರಂಜನ್ ಈ ವರ್ಷ ಮದುವೆ ಆಗುತ್ತಿದ್ದಾರೆ. 2021 ರಲ್ಲಿ ಖಂಡಿತ ಮದುವೆ ಆಗುತ್ತೇನೆ. ಮನೆಯಲ್ಲಿ ಸಿದ್ದತೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಆದರೆ ಹುಡುಗಿ ಮಾತ್ರ ತಂದೆ ತಾಯಿ ಒಪ್ಪಿದವರೇ ಆಗಿರುತ್ತಾರೆ ಎನ್ನುತ್ತಾರೆ. ಈ ಮೂಲಕ ಲವ್ ಮ್ಯಾರೇಜ್ ಎನ್ನುವ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ. 

ಇತ್ತೀಚೆಗೆ ರವಿಚಂದ್ರನ್ ರವರು ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು. ಈಗ ಈ ವರ್ಷ ತಮ್ಮ ಮಗನ ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಮನೋರಂಜನ್ ಗೆ 32 ತುಂಬಿದ್ದು ಈ ವರ್ಷ ಮದುವೆ ಆಗಲಿದ್ದೇನೆ ಎಂದು ಮನೋರಂಜನ್ ಹೇಳಿದರು.