ಅಬ್ಬೊ ಚಿಂದಿಯಾಗಿದೆ ಗುರು ಬಿಗ್ ಬಾಸ್ ಪ್ರಿಯಾಂಕ ಅಭಿನಯದ ಪ್ಯಾಂಟಸಿ ಟೀಸರ್..! ನೀವೂ ನೋಡಿ.!

Updated: Saturday, October 17, 2020, 10:56 [IST]

    

ಮೊದಲಿಗೆ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಚಂದ್ರಿಕಾ ಪತ್ರದಲ್ಲಿ ಕಾಣಿಸಿದ ನಟಿ ಪ್ರಿಯಾಂಕಾ ತಮ್ಮದೇ ಆದ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಜೊತೆಗೆ ತಮ್ಮ ಕಣ್ಣಿನ ಮೂಲಕವೇ ನಟನೆಯಲ್ಲಿ ಒಂದು ಚಾಪು ಮೂಡಿಸಿದ್ದಾರೆ ಎಂದರೆ ತಪ್ಪಾಗಲಾರದು. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರ ಮಾಡಿದ ಪ್ರಿಯಾಂಕಾ ಅವರು ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಎಲ್ಲರ ಮನೆಮಾತಾಗಿದ್ದರು.    

ಜೊತೆಗೆ ಇತ್ತೀಚೆಗೆ ಬಿಗ್ಬಾಸ್ ಮನೆಗೆ ಕೂಡ ಹೋಗಿ ಬಂದಿದ್ದರು. ತದನಂತರ ಲಾಕ್ಡೌನ್ ಮುಂಚೆ ಚಿತ್ರದ ನಿರ್ದೇಶಕ ಆರ್ ಪವನ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಫ್ಯಾಂಟಸಿ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಕೇಳಿಬಂದಿತ್ತು. ಜೊತೆಗೆ ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಫ್ಯಾಂಟಸಿ ಚಿತ್ರದ ಟೀಸರ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಹಾಗೇನೇ ಈಗಾಗಲೇ ಎಲ್ಲ ಚಿತ್ರೀಕರಣವನ್ನು ಮುಗಿಸಿರುವ ಫ್ಯಾಂಟಸಿ ತಂಡ ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ.     

ಮತ್ತು ಖಳನಾಯಕಿ ಪಾತ್ರದಲ್ಲಿ ಪ್ರಿಯಾಂಕಾ ರವರು ಫ್ಯಾಂಟಸಿ ಟೀಸರ್ ನಲ್ಲಿ ಕಾಣಿಸಿದ್ದು, ಸಕ್ಕತ್ ರಗಡ್ ಆಗಿ ಹೊರಹೊಮ್ಮಿದ್ದಾರೆ ಎಂದು ತಿಳಿದುಬಂದಿದೆ. ನೀವು ಕೂಡ ಟೀಸರ್ ನೋಡಿ ನಿಮ್ಮ ಅನಿಸಿಕೆಗಳನ್ನು ನಮ್ಮ ಕಮೆಂಟ್ ಬಾಕ್ಸ್ ಗೆ ತಿಳಿಸಿ. ಜೊತೆಗೆ ಶೇರ್ ಮಾಡಿ ಧನ್ಯವಾದಗಳು....