ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿನ ಬಸ್ ಕಂಡಕ್ಟರ್ ಆಗಿದ್ದ ವೇಳೆ ತೆಗೆದ ಫೋಟೋ ನೋಡಿ.!

Updated: Saturday, October 17, 2020, 09:32 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಡೀ ಭಾರತ ಸಿನಿಮಾರಂಗದಲ್ಲಿ ಮಾತ್ರ ತಮ್ಮ ಹೆಸರು ಮಾಡಿಲ್ಲ. ಜೊತೆಗೆ ಇಡೀ ಜಗತ್ತಿನಾದ್ಯಂತ ತಮ್ಮ ನಟನೆಯ ಮೂಲಕ ಹೆಸರು ಗೊತ್ತಿರುವಂತೆ ಮಾಡಿದ್ದಾರೆ. ಇಡೀ ದೇಶದ್ಯಾಂತ ಜಗತ್ತಿನಾದ್ಯಂತ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ ನಟ ರಜನಿಕಾಂತ್. ಮತ್ತು ಇಂದಿನ ಜನರೇಶನ್ ಅವರಿಗೆ ನಟ ಸೂಪರ್ ಸ್ಟಾರ್ ರಜನಿಕಾಂತ್ ಆಗುವ ಮುನ್ನ ರಜನಿಕಾಂತ್ ಅವರು ಕೇವಲ ಒಬ್ಬ ಕಂಡಕ್ಟರ್ ಆಗಿದ್ದರು ಎಂದು ನ್ಯೂಸ್ ಪೇಪರ್ ಮೂಲಕ ಮತ್ತು ಇನ್ನೊಬ್ಬರ ಬಾಯಲ್ಲಿ ಕೇಳಿ ತಿಳಿದುಕೊಂಡಿದ್ದಾರೆ ಅಷ್ಟೇ.ಆದರೆ ಸಾಕಷ್ಟು ಜನರಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬೆಂಗಳೂರಿನಲ್ಲಿ ಕಂಡಕ್ಟರ್ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಕಂಡುಬಂದಿರುವ ಯಾವ ಫೋಟೋಗಳನ್ನು ಇಲ್ಲಿಯವರೆಗೆ ಯಾರು ನೋಡಿರಲಿಲ್ಲ. 

Advertisement

ಅಂದಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಈ ಫೋಟೋ ಕಂಡುಬಂದಿದ್ದು, ಬಸ್ ಮುಂದೆ ನಿಂತಿರುವ ನಾಲ್ಕು ಜನರ ಪೈಕಿ, ಒಬ್ಬರು ರಜನಿಕಾಂತ್ ಎಂದು ತಿಳಿದುಬಂದಿದೆ. ಹೌದು ರಜನಿಕಾಂತ್ ಅವರು ಬೆಂಗಳೂರಿನಲ್ಲಿ ಹುಟ್ಟಿದ್ದು ಇವರ ಹೆಸರು ಶಿವಾಜಿ ಗಾಯಕ್ವಾಡ್, ಮರಾಠಿ ಕುಟುಂಬದಲ್ಲಿ ಹುಟ್ಟಿದ ಇವರು, ಮೊದಲನೆಯದಾಗಿ ತಮ್ಮ ವೃತ್ತಿ ಜೀವನದಲ್ಲಿ ಕಾರ್ಪೆಂಟರ್ ಕೆಲಸ ಮಾಡಿದ್ದರು ಎಂದು ಹೇಳಲಾಗುತ್ತಿದೆ.ತದನಂತರ ಬಿಟಿಎಸ್ ಬಸ್ಸಲ್ಲಿ ಕಂಡಕ್ಟರ್ ಆಗಿ ತಮ್ಮ ವೃತ್ತಿ ಆರಂಭ ಮಾಡಿದರು.ಜೊತೆ ಜೊತೆಗೆ ಸಣ್ಣಪುಟ್ಟ ನಾಟಕಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮತ್ತು ಸಿನಿಮಾ ಮೇಲಿದ್ದ ಆಸಕ್ತಿ ಇವರನ್ನು ಮದ್ರಾಸಿಗೆ ಹೋಗುವಂತೆ ಮಾಡಿ, ಡಿಪ್ಲೋಮಾ ಕೋರ್ಸ್ ಕೂಡ ಮುಗಿಸಿಕೊಂಡು ಬಂದರು ನಟ ರಜನಿಕಾಂತ್ ಅವರು. ಮತ್ತು ಕೆ ಬಾಲಚಂದಿರ್ ಅವರ ನಿರ್ದೇಶನದ ಅಪೂರ್ವ ರಾಗಂಗಳ್ ಎನ್ನುವ ಸಿನಿಮಾ ಮೂಲಕ 1975 ರಲ್ಲಿ ಪಾದರ್ಪಣೆ ಮಾಡಿದ್ದರು ಎಂದು ತಿಳಿದುಬಂದಿದೆ. 

Advertisement

ತದನಂತರ ಕನ್ನಡ ಸಿನಿಮಾ ಜರ್ನಿಯನ್ನು ಆರಂಭ ಮಾಡಿದರು. ರಜನಿಕಾಂತ್ ಒಂದಾನೊಂದು ಕಾಲದಲ್ಲಿ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ. ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ತಮ್ಮ ಅಭಿನಯದ ಮೂಲಕ ಸಾಕಷ್ಟು ವರ್ಷ ರಸದೌತಣ ನೀಡಿದ್ದಾರೆ. ಹೌದು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ವೇಳೆ ತೆಗೆದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಫೋಟೋ ಇಲ್ಲಿದೆ. ಸದ್ಯ ತುಂಬಾ ವೈರಲ್ ಆಗಿದೆ. ನೀವು ಕೂಡ ಫೋಟೋ ನೋಡಿ, ನಿಮ್ಮ ಅನಿಸಿಕೆಗಳನ್ನು ನಮ್ಮ ಕಮೆಂಟ್ ಬಾಕ್ಸ್ ಗೆ ಕಮೆಂಟ್ ಮಾಡಿ ತಿಳಿಸಿ ಜೊತೆಗೆ ಶೇರ್ ಮಾಡಿ ಧನ್ಯವಾದಗಳು....