ಇಂದಿನಿಂದ ಮತ್ತೆ ಪ್ರೇಕ್ಷಕರ ಎದುರು ಟಗರು ರೆಡಿ

Updated: Friday, October 23, 2020, 09:02 [IST]

ಇಂದಿನಿಂದ ಮತ್ತೆ ಪ್ರೇಕ್ಷಕರ ಎದುರು ಟಗರು ರೆಡಿ

2018 ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಪಡೆದ ಶಿವರಾಜ್ ಕುಮಾರ್ , ಧನಂಜಯ ನಟನೆಯ ಟಗರು ಮತ್ತೆ ಮರು ಬಿಡುಗಡೆ ಆಗುತ್ತಿದೆ. ದುನಿಯಾ ಸೂರಿ ನಿರ್ದೇಶನದ ಈ ಚಿತ್ರ ತನ್ನ ವಿಶಿಷ್ಟ ಸ್ಕ್ರೀನ್ ಪ್ಲೇ ಯಿಂದ ಸುದ್ದಿಯಾಗಿತ್ತು.

 

Advertisement

ಇದರಲ್ಲಿ ನಟ ಧನಂಜಯ ಗೆ ಡಾಲಿ ಪಾತ್ರದಿಂದ ಬಿಗ್ ಬ್ರೇಕ್ ಸಿಕ್ಕಿತು.ಅದುವರೆಗೂ ನಾಯಕನಟನಾಗಿ ಸೋಲು ಕಾಣುತ್ತಿದ್ದ ಧನಂಜಯ್ಗೆ ಡಾಲಿ ಪಾತ್ರ ಹೊಸ ಮರು ಹುಟ್ಟು ದೊರಕಿಸಿತು.ಡಾಲಿ ಧನಂಜಯ ಎಂದೇ ಆ ನಂತರ ಜನಪ್ರಿಯ ಆದ ಧನಂಜಯ್ ಈಗ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಬಿಜಿಯಾಗಿದ್ದಾರೆ.ಒಬ್ಬ ಕಲಾವಿದನನ್ನು ಪರಿಪೂರ್ಣವಾಗಿ ಬಳಸಿಕೊಂಡ ಚಿತ್ರ ಟಗರು.

 

Advertisement

ಶಿವರಾಜ್ ಕುಮಾರ್ ಪೋಲಿಸ್ ಅಧಿಕಾರಿಯಾಗಿ ಅಬ್ಬರಿಸಿದರು. ಈ ಚಿತ್ರದ ಪ್ರಮುಖ ಅಂಶ ಡೈಲಾಗ್. ಮಾಸ್ತಿಯವರ ಡೈಲಾಗ್ ಭಾರೀ ಚಪ್ಪಾಳೆ ಗಿಟ್ಟಿಸಿತು. ಚರ್ ರಾಜ್ ಸಂಗೀತದಲ್ಲಿ ಮೂಡಿ ಬಂದ ಟಗರು ಬಂತು ಟಗರು ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆಯಿತು. ಎಲ್ಲಾ ಆರ್ಕೆಸ್ಟ್ರಾ ಗಳಲ್ಲಿ ಟಗರು ಹಾಡು ಬಳಕೆಯಾಗುತ್ತದೆ ‌.

ಟಗರು ರಿರೀಲಿಸ್ ಕುರಿತು ಮಾತನಾಡಿದ ನಿರ್ಮಾಪಕ ಶ್ರೀಕಾಂತ್ ಸದ್ಯ ಟಗರು ಗೋಪಾಲನ್ ಮಾಲ್ ನಲ್ಲಿ ಮಾತ್ರ ಬಿಡುಗಡೆ ಆಗುತ್ತದೆ.ಇಂದಿನಿಂದ ಜನರು ವೀಕ್ಷಿಸಬಹುದು ಎಂದಿದ್ದಾರೆ.

ಚಿತ್ರದಲ್ಲಿ ಭಾವನಾ,ಮಾನ್ವಿತಾ,ವಶಿಷ್ಟ ಸಿಂಹ ಕಾಣಿಸಿಕೊಂಡಿದ್ದಾರೆ.