ಗುರುತೇ ಸಿಗದಷ್ಟು ಬದಲಾಗಿದ್ದಾರೆ ಸ್ಯಾಂಡಲ್​ವುಡ್​ನ ಈ ಖ್ಯಾತ ನಟಿ!

Updated: Tuesday, October 20, 2020, 08:39 [IST]

ಗುರುತೇ ಸಿಗದಷ್ಟು ಬದಲಾಗಿದ್ದಾರೆ ಸ್ಯಾಂಡಲ್​ವುಡ್​ನ ಈ ಖ್ಯಾತ ನಟಿ!

  

Advertisement

ಸಿನಿಮಾ ತಾರೆಯರಿಗೆ ವಯಸ್ಸೇ ಆಗುವುದಿಲ್ಲ ಎಂಬ ಮಾತಿದೆ. ಏಕೆಂದರೆ ಅವರ ಮೇಕಪ್, ವ್ಯಾಯಾಮ, ಅವರು ಆರೋಗ್ಯ ಹಾಗು ದೇಹದ ಬಗ್ಗೆ ತೆಗೆದುಕೊಳ್ಳುವ ಕಾಳಜಿ ಇವುಗಳಿಂದ ಅವರು ಯಂಗ್ ಆಗೇ ಇರುತ್ತಾರೆ. ಆದರೆ ಕೆಲ ಸಿನಿಮಾ ನಟಿಯರು ಈ ಮಾತಿಗೆ ಅಪವಾದ. ಅವರು ಮದುವೆ ಆದ ಮೇಲೆ ಗುರುತೇ ಸಿಗದಷ್ಟು ಬದಲಾಗುತ್ತಾರೆ. ಇವರೇನಾ ನಾವು ಅಭಿಮಾನ ಪಟ್ಟಿದ್ದ ನಟಿ ? ಎಂಬಷ್ಟರ ಮಟ್ಟಿಗೆ ಬದಲಾಗುತ್ತಾರೆ

  

Advertisement

ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿ ನಂತರ ಮದುವೆಯಾಗಿ ಹಾಯಾಗಿರುವ ನಟಿಯೊಬ್ಬರು ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಯಾರದು ಹೇಳುತ್ತೇವೆ ಬನ್ನಿ.

ಅಂಬರೀಶ್ ರವರ ದಿಗ್ವಿಜಯ ಚಿತ್ರದಲ್ಲಿ ಮಿಂಚಿದವರು ನಟಿ ರಾಧಾ. ಆ ಚಿತ್ರದ ಮ‌ೂಲಕ ನಾಯಕಿಯಾಗಿ ತೆರೆಗೆ ಬಂದರು. ಆ ಕಾಲದಲ್ಲಿ ಈಕೆ ಸುರದ್ರೂಪಿ ನಟಿ.ರಾಧರವರು ಜೂನ್ 3, 1965 ರಂದು ಕೇರಳದಲ್ಲಿ ಜನಿಸಿದರು. ತಂದೆ ಕುಂಜನ್ ನಾಯರ್, ತಾಯಿ ಸಾರಸಮ್ಮ. 80 ರ ದಶಕದಲ್ಲಿ ನಟಿ ರಾಧಾರವರು ತಮಿಳು, ತೆಲುಗು, ಮಲೆಯಾಳಂ ಸಿನಿಮಾಗಳಲ್ಲಿ  ನಟಿಸುವ ಮೂಲಕ ಮಿಂಚಿದ್ದರು.

  

Advertisement

ಕನ್ನಡದಲ್ಲಿ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ದಿಗ್ವಿಜಯ, ಸಾವಿರ ಸುಳ್ಳು, ಸೌಭಾಗ್ಯಲಕ್ಷ್ಮಿ, ರಣಚಂಡಿ ಚಿತ್ರಗಳಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್​ವುಡ್​ನಲ್ಲಿ  ಕಾಣಿಸಿಕೊಂಡಿದ್ದರು.ರಾಧ ಅವರು ನಟಿ ಅಂಬಿಕಾರವರ ಸ್ವಂತ ತಂಗಿ. 1991 ರಲ್ಲಿ ನಟಿ ರಾಧ ಉದ್ಯಮಿ ರಾಜಶೇಖರ್ ನಾಯರ್ ಎಂಬುವವರನ್ನು ಮದುವೆಯಾದರು.

ರಾಧಾರವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದಾನೆ. ಮಗಳು ಕಾರ್ತಿಕ ನಾಯರ್ ಕೂಡ ನಟಿಯಾಗಿದ್ದು , ತೆಲುಗು, ತಮಿಳು, ಮಲೆಯಾಳಂ, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.ಕಾರ್ತಿಕ ನಾಯರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜೊತೆ ಬೃಂದಾವನ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿದ್ದಾರೆ