ಬ್ರೇಕಿಂಗ್ ನ್ಯೂಸ್ - ಭಾರತದಲ್ಲಿ ಟಿಕ್ ಟಾಕ್ ,ಹಲೋ ಆಪ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ

Updated: Monday, June 29, 2020, 21:27 [IST]


ಬ್ರೇಕಿಂಗ್ ನ್ಯೂಸ್ - ಭಾರತದಲ್ಲಿ ಟಿಕ್ ಟಾಕ್ ,ಹಲೋ ಆಪ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರ ಟಿಕ್ ಟಾಕ್, ಯುಸಿ ಬ್ರೌಸರ್, ಹೆಲೋ ಆಪ್ ಸೇರಿದಂತೆ 59 ಚೀನಾ ಮೂಲದ ಆಪ್ ಗಳನ್ನು ನಿಷೇಧ ಮಾಡಿದೆ.
ಚೀನಾವು ಭಾರತದ 20 ಯೋಧರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಚೀನಾ ಉತ್ಪನ್ನಗಳನ್ನು ಬ್ಯಾನ್ ಮಾಡುವಂತೆ ಜನರಿಂದ ಒತ್ತಡ ಕಂಡು ಬಂದಿತ್ತು. ಆದ ಕಾರಣ ಸರ್ಕಾರ ಈ ಎಲ್ಲಾ ಆಪ್ ಗಳನ್ನು ನಿಷೇಧ ಮಾಡಿದೆ.
ಟಿಕ್ ಟಾಕ್ ,ಹಲೋ ಆಪ್ ಗಳನ್ನು ಮಿಲಿಯನ್ ಗಟ್ಟಲೆ ಭಾರತದಲ್ಲಿ ಡೌನ್‌ಲೋಡ್ ಮಾಡಿದ್ದಾರೆ. .

   
ಚೀನಾ ಜೊತಗಿನ ಗಡಿ ಘರ್ಷಣೆ ನಡುವೆ ಭಾರತ ಸರ್ಕಾರ ಮಹತ್ವದ ಆದೇಶವನ್ನು ಪ್ರಕಟಿಸಿದೆ. ಗಾಲ್ವಾನ ವ್ಯಾಲಿಯಲ್ಲಿ ಚೀನಾದ ಜೊತೆಗೆ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆ ಭಾರತದಲ್ಲಿ ಚೀನಾದ ವಸ್ತುಗಳ ಆಮದು ನಿಲ್ಲಿಸಬೇಕು. ಚೀನಾ ಆ್ಯಪ್ ಗಳನ್ನು ಬ್ಯಾನ್ ಮಾಡಬೇಕೆಂದ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.