ಶೌಚಾಲಯವಿಲ್ಲದೇ ಪರದಾಡುತ್ತಿದ್ದ ಆ ಊರಿನ ಹೆಣ್ಣು ಮಕ್ಕಳ ಸ್ಥಿತಿ ನೋಡಿ ತ್ರಿಷಾ ಮಾಡಿದ್ದೇನು ಗೊತ್ತೇ?

Updated: Monday, July 6, 2020, 12:16 [IST]

ಶೌಚಾಲಯವಿಲ್ಲದೇ ಪರದಾಡುತ್ತಿದ್ದ ಆ ಊರಿನ ಹೆಣ್ಣು ಮಕ್ಕಳ ಸ್ಥಿತಿ ನೋಡಿ ತ್ರಿಷಾ ಮಾಡಿದ್ದೇನು ಗೊತ್ತೇ?
ತ್ರಿಷಾ ದಕ್ಷಿಣ ಭಾರತದ ನಂಬರ್ ಒನ್ ನಟಿ. ಚಿತ್ರರಂಗಕ್ಕೆ ಬಂದು ಹತ್ತಾರು ವರ್ಷವಾದರೂ ಈಗಲೂ ತಮ್ಮ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಕಳೆದ ವರ್ಷ ಬ್ಲಾಕ್ ಬಸ್ಟರ್ ಹಿಟ್ ಚಿತ್ರ 99 ಗೆ ಈಕೆ ನಾಯಕಿಯಾಗಿ ತಮ್ಮ ಅಮೋಘ ಅಭಿನಯ ನೀಡಿದ್ದರು. ಈ ಚಿತ್ರ ಕನ್ನಡ ಸೇರಿದಂತೆ ತೆಲುಗು ಮಲಯಾಳಂ ಗೆ ರಿಮೇಕ್ ಕೂಡ ಆಯಿತು.


ತ್ರಿಷಾ ಕೇವಲ ಸಿನಿಮಾದಲ್ಲಿ ಮಾತ್ರ ಹೀರೋಯಿನ್ ಅಲ್ಲ. ನಿಜ ಜೀವನದಲ್ಲಿ ಕೂಡ ಆಕೆ ಜನ ಮೆಚ್ಚುವ ಕೆಲಸ ಮಾಡಿ ನಾಯಕಿಯಾಗಿ ಇದ್ದಾರೆ. ಆಕೆ ಬಾಲ್ಯವಿವಾಹ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ರಕ್ತ ಹೀನತೆ ಇವುಗಳ ಕುರಿತು ತಮಿಳು ನಾಡು, ಹಾಗೂ ಕೇರಳದಲ್ಲಿ ಊರೂರು ತಿರುಗುತ್ತಾ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಇದಕ್ಕೆ ಯುನಿಸೆಫ್ ಜೊತೆ ಸೇರಿ ಈ ಸಾಮಾಜಿಕ ಕಳಕಳಿಯ ಕೆಲಸ ಮಾಡುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಚಿತ್ರರಂಗದ ಗಣ್ಯರು, ಜನರು ಭೇಷ್ ಎಂದಿದ್ದಾರೆ.

 

Advertisement

ಈಗ ತ್ರಿಷಾ ತಮಿಳು ನಾಡಿನ ಒಂದು ಗ್ರಾಮದ ಒಂದು ಹಳ್ಳಿಯಲ್ಲಿ ಶೌಚಾಲಯ ನಿರ್ಮಾಣ ಮಾಡಿಸುವ ಮೂಲಕ  ಆ ಊರಿನ ಹೆಣ್ಣು ಮಕ್ಕಳು ಶೌಚಕ್ಕೆ ಹೊರಗಡೆ ಹೋಗುವುದನ್ನು ನಿಲ್ಲಿಸಿದ್ದಾರೆ. ಪ್ರತಿಯೊಂದು ಮನೆಗೂ ಒಂದು ಶೌಚಾಲಯ ನಿರ್ಮಿಸಿ ಹೆಣ್ಣು ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಒಂದು ಕಡೆ ಇಟ್ಟಿಗೆ ಇಟ್ಟು ಅದಕ್ಕೆ ಸಿಮೆಂಟ್ ಹಾಕುವ ಫೋಟೋ ಫುಲ್ ವೈರಲ್ ಆಗಿವೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.