ಬ್ರೇಕಿಂಗ್ ನ್ಯೂಸ್ - ವಿರಾಟ್ ಕೋಹ್ಲಿ ವಿರುದ್ಧ ದೂರು ದಾಖಲು

Updated: Monday, July 6, 2020, 09:38 [IST]

ಬ್ರೇಕಿಂಗ್ ನ್ಯೂಸ್ - ವಿರಾಟ್ ಕೋಹ್ಲಿ ವಿರುದ್ಧ ದೂರು ದಾಖಲು
ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ನಟ ವಿರಾಟ್ ಕೋಹ್ಲಿ ವಿರುದ್ದ ಸ್ವಹಿತಾಸಕ್ತಿಯ ಸಂಘರ್ಷ ಎದುರಿಸುವ ಸಂಕಷ್ಟ ಎದುರಾಗಿದೆ. ಏಕ ಕಾಲದಲ್ಲಿ ಎರಡೆರಡು ಹುದ್ದೆಗಳನ್ನು ಕೊಹ್ಲಿ ನಿರ್ವಹಿಸುತ್ತಿದ್ದಾರೆ ಎಂಬುದು ದೂರುದಾರರ ದೂರು.

 

Advertisement

ಬಿಸಿಸಿಐ ನಿಯಮ 38 (4) ರ ಅಡಿಯಲ್ಲಿ ಹಿತಾಸಕ್ತಿ ಸಂಘರ್ಷ ಷರತ್ತನ್ನು ಉಲ್ಲಂಘಿಸಿರುವ ಆರೋಪ ಕೊಹ್ಲಿ ವಿರುದ್ಧ ಕೇಳಿಬಂದಿದಿದ್ದು, ಮಧ್ಯಪ್ರದೇಶ ಕ್ರಿಕೆಟ್‌ ಮಂಡಳಿಯ ಸದಸ್ಯ ಸಂಜೀವ್‌ ಗುಪ್ತಾ ವಿರಾಟ್‌ ವಿರುದ್ಧ ಸ್ವಹಿತಾಸಕ್ತಿ ಸಂಘರ್ಷ ದೂರು ದಾಖಲಿಸಿದ್ದಾರೆ. ಕೊಹ್ಲಿ ಏಕಕಾಲದಲ್ಲಿ ಎರಡು ಹುದ್ದೆ ನಿಭಾಯಿಸುತ್ತಿದ್ದಾರೆ ಎನ್ನುವುದು ಅವರ ಆರೋಪ.
ಮಾಜಿ ಆಟಗಾರರಾದ ವಿವಿಎಸ್ ಲಕ್ಷ್ಮಣ್, ಸಚಿನ್ ತೆಂಡೂಲ್ಕರ್ ,ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಇವರೆಲ್ಲರೂ ಹಿಂದೆ ಇದೇ ತರಹದ ಆರೋಪವನ್ನು ಎದುರಿಸಿದ್ದರು.

 
ಬಿಸಿಸಿಐ ಅಧ್ಯಕ್ಷ ಗಂಗೂಲಿ, ಎನ್​ಸಿಎ ಮುಖ್ಯಸ್ಥ ದ್ರಾವಿಡ್​ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರ ಅನೇಕ ಹುದ್ದೆಗಳನ್ನು ಹೊಂದಿದ್ದರಿಂದ ಒಂದು ಹುದ್ದೆಯನ್ನು ತ್ಯಜಿಸಬೇಕಾಗಿದೆ. ಇದೀಗ ಪ್ರಸ್ತುತ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಸ್ಥಾನವನ್ನು ಪ್ರಶ್ನಿಸಿ ಸಂಜೀವ್​ ಗುಪ್ತಾ ಸುಪ್ರಿಂ ಕೋರ್ಟ್​ ನೇಮಿಸಿರುವ ಬಿಸಿಸಿಐ ಎಥಿಕ್ಸ್​ ಆಫೀಸರ್​ ಡಿ. ಕೆ ಜೈನ್​ ಅವರಿಗೆ ಪತ್ರ ಬರೆದಿದ್ದಾರೆ.
ಇನ್ನೂ ದೂರಿನಲ್ಲಿ ಹೇಳಿರುವಂತೆ ವಿರಾಟ್‌ ಕೊಹ್ಲಿ ಎರಡು ಹುದ್ದೆಯನ್ನು ಹೊಂದಿದ್ದಾರೆ. ಒಂದು ಟೀಂ ಇಂಡಿಯಾ ಆಟಗಾರನಾಗಿ ನಾಯಕತ್ವ ಪಡೆದಿರುವುದು ಮತ್ತೊಂದು ಆಟಗಾರರ ಜೊತೆಗಿನ ಒಪ್ಪಂದಗಳನ್ನು ನಿಭಾಯಿಸುವ ಕ್ರೀಡಾ ಮಾರ್ಕೆಟಿಂಗ್‌ ಸಂಸ್ಥೆಯೊಂದರ ನಿರ್ದೇಶಕನ ಹುದ್ದೆ ಅಲಂಕರಿಸಿರುವುದು. ಕೊಹ್ಲಿ, ಈ ಮೂಲಕ ಬಿಸಿಸಿಐ ಸಂವಿಧಾನದ ನಿಯಮ 38 (4)ರ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.