ಮಾಸ್ಕ್ ಧರಿಸು ಎಂದಿದ್ದಕ್ಕೆ ಬಟ್ಟೆಯನ್ನೇ ಎತ್ತಿ ಬಿಟ್ಟಳು!; ಮಹಿಳೆಯ ಅಶ್ಲೀ*ಲ ವರ್ತನೆ ಕಂಡು ಶಾಕ್

Updated: Sunday, October 18, 2020, 09:41 [IST]

ಮಾಸ್ಕ್ ಧರಿಸು ಎಂದಿದ್ದಕ್ಕೆ ಬಟ್ಟೆಯನ್ನೇ ಎತ್ತಿ ಬಿಟ್ಟಳು!; ಮಹಿಳೆಯ ಅಶ್ಲೀಲ ವರ್ತನೆ ಕಂಡು ಶಾಕ್

  

ಸರ್ಕಾರ ಕೋವಿಡ್ ನಿಯಂತ್ರಣ ಮಾಡಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಲೇ ಇದೆ. ಆದರೆ ನಿಯಂತ್ರಣಕ್ಕೆ ಬರುತ್ತಿಲ್ಲ. ಕೊರೊನಾ ಹೋಗಲು ಕೇವಲ ಸರ್ಕಾರ ಮಾತ್ರ ಕೆಲಸ ಮಾಡಿದರೆ ಸಾಲಲ್ಲ. ಜನ ಸಾಮಾನ್ಯರೂ ಕೂಡ ಸಾತ್ ಕೊಡಬೇಕು. ಜನ ಮಾಸ್ಕ್ ಧರಿಸದೇ ಗುಂಪುಗೂಡಿ ಓಡಾಡುವುದರಿಂದ ಕೊರೊನಾ ಹೆಚ್ಚು ಆಗುತ್ತದೆಯೇ ವಿನಃ ಕಡಿಮೆ ಆಗುವುದಿಲ್ಲ. ಇದಕ್ಕೆ ಆನಂತರ ಸರ್ಕಾರವನ್ನು ದೂಷಿಸಿದರೆ ಪ್ರಯೋಜನವಿಲ್ಲ.

  

ಅಂದ ಹಾಗೇ ಕ್ಯಾಲಿಪೋರ್ನಿಯಾದಲ್ಲಿ ವಿಚಿತ್ರ ಘಟನೆ ನಡೆದಿದೆ. ಮಹಿಳೆಯೊಬ್ಬಳು ಶಾಪಿಂಗ್ ಮಾಡಲು ಶಾಪ್ ಒಂದಕ್ಕೆ ಬರುತ್ತಾಳೆ.ಆದರೆ ಅವಳು ಮಾಸ್ಕ್ ಧರಿಸಿರಲಿಲ್ಲ. ಇದರಿಂದ ಅಂಗಡಿಯ ಓನರ್ ಮಾಸ್ಕ್ ಧರಿಸುವಂತೆ ವಿನಂತಿಸುತ್ತಾನೆ. ಧರಿಸಿ ಬಂದರೆ ಮಾತ್ರ ಅಂಗಡಿಯ ಒಳಗೆ ಬಿಡುತ್ತೇನೆ ಎನ್ನುತ್ತಾನೆ. ಆದರೆ ಮಹಿಳೆ ಇದಕ್ಕೆ ಕ್ಯಾಋಎ ಅನ್ನುವುದಿಲ್ಲ. ಸೀದಾ ಒಳಗೆ ನಡೆಯುತ್ತಾಳೆ.

ಅಂಗಡಿಯವನ ಜೊತೆ ಜಗಳಕ್ಕಿಳಿಯುತ್ತಾಳೆ. ಸ್ಟೋರ್ ಮಾಲೀಕ ಎಷ್ಟೇ ಹೇಳಿದರು ಆಕೆ ಮಾಸ್ಕ್ ಧರಿಸದೆ ಆತನೊಂದಿಗೆ ಜಗಳ ಮಾಡುತ್ತಾಳೆ. ಅಷ್ಟು ಮಾತ್ರವಲ್ಲದೆ, ಬಟ್ಟೆ ಎತ್ತಿ ಮೂತ್ರ ವಿಸರ್ಜನೆ ಮಾಡಲು ಮುಂದಾಗುತ್ತಾಳೆ.

ಇದರಿಂದ ಸಿಟ್ಟುಗೊಂಡ ಶಾಪ್ ಮಾಲೀಕ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸುತ್ತಾನೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲಿನ ಸಿಸಿ ಟಿವಿ ದೃಶ್ಯವಳಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಸದ್ಯ ತನಿಖೆ ಮುಂದುವರಿಯುತ್ತಿದೆ.ಅಮೆರಿಕದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕ್ಯಾಲಿಫೋರ್ನಿಯಾದಲ್ಲಿ 3, 91, 460 ಪ್ರಕರಣಗಳು ಈವರೆಗೆ ಬೆಳಕಿಗೆ ಬಂದಿದೆ. 7,710 ಜನರು ಮೃತ ಪಟ್ಟಿದ್ದಾರೆ.