ಜೀ ಕುಟುಂಬ ಕಾರ್ಯಕ್ರಮದಲ್ಲಿ ಬರೋಬ್ಬರಿ 15 ಅವಾರ್ಡ್ಸ್ ಪಡೆದ ನಂಬರ್ ವನ್ ಧಾರವಾಹಿ..! ಯಾವುದು ಗೊತ್ತಾ

Updated: Tuesday, October 27, 2020, 18:49 [IST]

    

ಕಳೆದ ವರ್ಷ ಇದೇ ಸಮಯಕ್ಕೆ ಸರಿಯಾಗಿ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮವನ್ನೂ ಅದ್ದೂರಿ ಯಾಗಿ ಆಯೋಜಿಸಲಾಗಿತ್ತು. ಅದರಲ್ಲಿ ಕಲಾವಿದರು ಜೊತೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಆದರೆ ಈ ವರ್ಷ ಕೋರೋನಾ ಕಾರಣದಿಂದಾಗಿ ಎಲ್ಲವನ್ನೂ ಸಂಕ್ಷಿಪ್ತವಾಗಿ ಆಚರಿಸಲಾಗಿದೆ. ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ನಿನ್ನೆತಾನೆ ಜರಗಿದ್ದು. ಕಾರ್ಯಕ್ರಮಕ್ಕೆ ಜೀ ಕುಟುಂಬದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. 

ಹೌದು.. ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಿರುತೆರೆಯಲ್ಲಿ ನಟಿಸುತ್ತಿರುವ ನಟ-ನಟಿಯರಿಗೆ ಬೆಸ್ಟ್ ನಟ-ನಟಿ.. ಬೆಸ್ಟ್ ಅಪ್ಪ-ಅಮ್ಮ.. ಬೆಸ್ಟ್ ಸಹೋದರ.. ಬೆಸ್ಟ್ ಕಾಮಿಡಿಯನ್.. ಬೆಸ್ಟ್ ವಿಲನ್.. ಬೆಸ್ಟ್ ನಿರ್ದೇಶಕ.. ಬೆಸ್ಟ್ ಜೋಡಿ.. ಬೆಸ್ಟ್ ಧಾರಾವಾಹಿ.. ಹೀಗೆ ನಾನಾ ವಿಧದ ಪಾತ್ರಗಳಿಗೆ ಅವಾರ್ಡ್ ಗಳನ್ನು ನೀಡಿ ಗೌರವಿಸಲಾಯಿತು.

ಕಳೆದ ವರ್ಷ ಜೊತೆ ಜೊತೆಯಲ್ಲಿ ದಾರವಾಹಿ ಪ್ರಾರಂಭವಾದ ಕೆಲವೇ ವಾರಗಳಲ್ಲಿ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ಆಯೋಜಿಸಿದ್ದರಿಂದ ಜೊತೆಯಲಿ ಧಾರಾವಾಹಿ ನಾಮಿನೇಟ್ ಮಾಡಿರಲಿಲ್ಲ. ಇದೀಗ ಜೊತೆ ಜೊತೆಯಲಿ ಧಾರಾವಾಹಿ ನಾಮಿನೇಟ್ ಆಗಿದ್ದು ಬರೋಬ್ಬರಿ 15 ಅವಾರ್ಡ್ಸ್ ಗಳನ್ನು ಮುಡಿಗೇರಿಸಿಕೊಂಡಿದೆ. 

ಅರೆ ಹದಿನೈದು ಅವಾರ್ಡ್ಸ್ ಅದು ಹೇಗೆ ಅಂದ್ರೆ ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಅತ್ಯುತ್ತಮವಾಗಿ ನಟಿಸುವ ಅನಿರುದ್ಧ್ ಅವರಿಗೆ ಬೆಸ್ಟ್ ನಟ ಪ್ರಶಸ್ತಿ. ಇತ್ತ ಗಟ್ಟಿಮೇಳ ಧಾರಾವಾಹಿ ನಟಿಸುತ್ತಿರುವ ವೇದಾಂತ್ ಅವರಿಗೆ ಜನ ಮೆಚ್ಚಿದ ನಾಯಕ ಪ್ರಶಸ್ತಿ ಲಭಿಸಿದೆ. ಇನ್ನು ಜೊತೆಯಲಿ ಧಾರಾವಾಹಿಯ ಅನು ಸಿರಿಮನೆಗೆ, ಜನ ಮೆಚ್ಚಿದ ನಾಯಕಿ ಪ್ರಶಸ್ತಿ, ಅನು ಆರ್ಯ ಜೋಡಿಗೆ ಬೆಸ್ಟ್ ಜೋಡಿ ಪ್ರಶಸ್ತಿ, ಅನು ಅಪ್ಪ-ಅಮ್ಮನಿಗೆ ಬೆಸ್ಟ್ ಅಪ್ಪ-ಅಮ್ಮ ಪ್ರಶಸ್ತಿ,  ಹರ್ಷವರ್ಧನ್ ಗೆ ಬೆಸ್ಟ್ ಸಹೋದರ ಪ್ರಶಸ್ತಿ, ಜೊತೆ ಜೊತೆಯಲ್ಲಿ ದಾರವಾಹಿಗೆ ಬೆಸ್ಟ್ ಡಿ ಓ ಪಿ ಪ್ರಶಸ್ತಿ, ಬೆಸ್ಟ್ ಡೈಲಾಗ್ ರೈಟರ್ ಪ್ರಶಸ್ತಿ,ಅತ್ಯುತ್ತಮ ಸಪೋರ್ಟಿಂಗ್ ರೋಲ್ ನಟನಟಿ ಪ್ರಶಸ್ತಿ, 

ಅತಿ ಹೆಚ್ಚು ರೇಟೆಡ್ ಧಾರಾವಾಹಿ ಪ್ರಶಸ್ತಿ, ಅತ್ಯುತ್ತಮ ಶೀರ್ಷಿಕೆ ಗೀತೆ ಪ್ರಶಸ್ತಿ, ಅತ್ಯುತ್ತಮ ಸ್ಕ್ರೀನ್ ಪ್ಲೇ ಪ್ರಶಸ್ತಿ, ಅತ್ಯುತ್ತಮ ಎಡಿಟರ್ ಪ್ರಶಸ್ತಿ ಮತ್ತು ವಿಶೇಷ ಮೆಚ್ಚುಗೆ ಪ್ರಶಸ್ತಿ ಹೀಗೆ 15 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಜೊತೆ ಜೊತೆಯಲಿ ಧಾರಾವಾಹಿಯ ಪ್ರೇಕ್ಷಕರಿಗೆ ಹಾಗೂ ಅದರಲ್ಲಿ ಅಭಿನಯಿಸುವ ಕಲಾವಿದರಿಗೆ ತುಂಬಾ ಖುಷಿ ತಂದುಕೊಟ್ಟಿದೆ ಎಂದು ಈ ಎಲ್ಲಾ ಮಾಹಿತಿ ನಮಗೆ ಸಾಮಾಜಿಕ ಸುದ್ದಿಮಾಧ್ಯಮಗಳಿಂದ ತಿಳಿದುಬಂದಿದೆ.


ದೈವಜ್ಞ ಪ್ರಧಾನ ತಾಂತ್ರಿಕ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.